»   » ಎರಡು ದಿನಗಳ ಹಿಂದೆ ಉಪೇಂದ್ರ ಮಾಡಿದ್ದ ಟ್ವೀಟ್ ಹಿಂದಿನ ಮರ್ಮ ಏನು.?

ಎರಡು ದಿನಗಳ ಹಿಂದೆ ಉಪೇಂದ್ರ ಮಾಡಿದ್ದ ಟ್ವೀಟ್ ಹಿಂದಿನ ಮರ್ಮ ಏನು.?

Posted By:
Subscribe to Filmibeat Kannada

ಇದಕ್ಕಿದ್ದಂತೆ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಯಲ್ಲಿ ಒಡಕು ಮೂಡಿದೆ. ಕೆ.ಪಿ.ಜೆ.ಪಿ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಹಾಗೂ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ.

ಕೆ.ಪಿ.ಜೆ.ಪಿ ಪಕ್ಷದಲ್ಲಿ ಅಭ್ಯರ್ಥಿಗಳಿಗೆ ಬಿ-ಫಾರ್ಮ್ ಹಂಚುವ ವಿಚಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಜಗಜ್ಜಾಹೀರಾಗಿದ್ದೇ ಇಂದು ಮಧ್ಯಾಹ್ನ. ಆದ್ರೆ, ಎರಡು ದಿನಗಳ ಹಿಂದೆ ಉಪೇಂದ್ರ ಮಾಡಿರುವ ಒಂದು ಟ್ವೀಟ್ ನೋಡಿದ್ರೆ, ಗ್ಯಾರೆಂಟಿ ನಿಮ್ಮ ತಲೆಯಲ್ಲಿ ಅನುಮಾನದ ಹುಳ ಹರಿದಾಡುತ್ತದೆ.

ಎರಡು ದಿನಗಳ ಹಿಂದೆ, ಅಂದ್ರೆ ಮಾರ್ಚ್ 3 ರಂದು ''ಪ್ರಜಾಕೀಯ ಮತ್ತು ರಾಜಕೀಯದ ಬಹುದೊಡ್ಡ ಪರೀಕ್ಷೆ ಇದೇ ತಿಂಗಳು 6 ನೇ ತಾರೀಖು ಬಹಿರಂಗ ಆಗುತ್ತದೆ. ದಯವಿಟ್ಟು ಕಾದು ನೋಡಿ'' ಎಂದು ಉಪೇಂದ್ರ ಟ್ವೀಟ್ ಮಾಡಿದ್ದರು.

ಆದ್ರೆ, ಮಾರ್ಚ್ 5 ನೇ ತಾರೀಖು... ಅಂದ್ರೆ ಇಂದು ಪ್ರಜಾಕೀಯ ಪಯಣದಲ್ಲಿ ಉಪೇಂದ್ರಗೆ ಬಹುದೊಡ್ಡ ಸಂಕಟ ಎದುರಾಗಿದೆ.

ಕೆಪಿಜೆಪಿ ವಿವಾದದ ಬಗ್ಗೆ ಉಪೇಂದ್ರ ಏನಂತಾರೆ.? ಸೈನಿಂಗ್ ಅಥಾರಿಟಿ ಯಾಕ್ಬೇಕು.?

'ಪ್ರಜಾಕೀಯ ಮತ್ತು ರಾಜಕೀಯದ ಬಹುದೊಡ್ಡ ಪರೀಕ್ಷೆ' ಎಂದು ಉಪೇಂದ್ರ ಉಲ್ಲೇಖಿಸಿದ್ದಾರೆ ಹೊರತು ಹೆಚ್ಚು ವಿವರಗಳನ್ನು ನೀಡಿಲ್ಲ. ಹೀಗಾಗಿ, ಅಂದಿನ ಈ ಟ್ವೀಟ್ ಗೂ ಹಾಗೂ ಇಂದಿನ ಬೆಳವಣಿಗೆಗೂ ಏನಾದರೂ ಲಿಂಕ್ ಇದ್ಯಾ ಅಂತ ಜನ ಯೋಜನೆ ಮಾಡ್ತಿದ್ದಾರೆ.

 KPJP Crisis: What did Upendra tweet 2 days ago.?

ಭಿನ್ನಮತ ಸ್ಫೋಟ: ಕೆಪಿಜೆಪಿ ಪಕ್ಷದಿಂದ ಹೊರಬರ್ತಾರಾ ಉಪೇಂದ್ರ.?

ಅಷ್ಟಕ್ಕೂ, ಮಾರ್ಚ್ 6 ನಾಳೆ. ಉಪೇಂದ್ರ ನುಡಿದಿರುವಂತೆ ನಾಳೆ ನಿಜಕ್ಕೂ ಪ್ರಜಾಕೀಯ ಹಾಗೂ ರಾಜಕೀಯದ ಬಹುದೊಡ್ಡ ಪರೀಕ್ಷೆ ಬಹಿರಂಗ ಆಗಲಿದ್ಯಾ.? ಎಲ್ಲದಕ್ಕೂ ಉತ್ತರ ನಾಳೆ ಸಿಗಲಿದೆ. ಕಾದು ನೋಡಿ...

English summary
KPJP Crisis: What did Upendra tweet 2 days ago.? Have a look at Upendra's tweet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada