twitter
    For Quick Alerts
    ALLOW NOTIFICATIONS  
    For Daily Alerts

    ಬಿಡುಗಡೆ ದಿನ ಕ್ರಾಂತಿಗೆ ಬೆಂಗಳೂರಿನಲ್ಲಿ ಸಿಕ್ಕ ಪ್ರದರ್ಶನವೆಷ್ಟು? ಪಠಾಣ್‌ಗಿಂತ ಹೆಚ್ಚಾ, ಕಡಿಮೆನಾ?

    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಬಹು ನಿರೀಕ್ಷೆಯ ಕ್ರಾಂತಿ ಇಂದು ( ಜನವರಿ 26 ) ರಾಜ್ಯಾದ್ಯಂತ ಬಿಡುಗಡೆಯಾಗಿದೆ. 2021ರ ಮಾರ್ಚ್ ಬಳಿಕ, ಬರೋಬ್ಬರಿ 22 ತಿಂಗಳುಗಳ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳು ಬೆಳ್ಳಿತೆರೆ ಮೇಲೆ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ.

    ರಾಜ್ಯದ ಬಹುತೇಕ ಕಡೆ ಕ್ರಾಂತಿ ಚಿತ್ರದ ಬೆಳಗಿನ ಪ್ರದರ್ಶನಗಳು ಹೌಸ್‌ಫುಲ್ ಆಗಿದ್ದು, ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ದೊಡ್ಡ ಮಟ್ಟದ ನಿರೀಕ್ಷೆ ಹೊಂದಿದ್ದ ಕಾರಣ ಕ್ರಾಂತಿ ಚಿತ್ರದ ಟಿಕೆಟ್‌ಗಳಿಗೆ ಬಿಡುಗಡೆಗೂ ಮುನ್ನವೇ ಬೃಹತ್ ಬೇಡಿಕೆ ಹುಟ್ಟಿಕೊಂಡಿತ್ತು. ಹೀಗಾಗಿ ಕಳೆದ ಭಾನುವಾರವೇ ಕ್ರಾಂತಿ ಚಿತ್ರದ ಮುಂಗಡ ಬುಕಿಂಗ್ ಅನ್ನು ತೆರೆಯಲಾಗಿತ್ತು.

    Kranti Collection: ಮೊದಲ ದಿನ 'ಕ್ರಾಂತಿ' ಗಳಿಕೆ ಎಷ್ಟು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು?Kranti Collection: ಮೊದಲ ದಿನ 'ಕ್ರಾಂತಿ' ಗಳಿಕೆ ಎಷ್ಟು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು?

    ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಚಿತ್ರದ ಟಿಕೆಟ್‌ಗಳು ಭರ್ಜರಿಯಾಗಿ ಮಾರಾಟವಾದವು. ಈ ಮೂಲಕ ಮುಂಗಡ ಬುಕಿಂಗ್‌ನಲ್ಲಿಯೇ ಕ್ರಾಂತಿ ಚಿತ್ರ 5.41 ಕೋಟಿ ಕಲೆಕ್ಷನ್ ಮಾಡಿತು. ಹೀಗೆ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿದ ಕ್ರಾಂತಿ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡುವುದು ಖಚಿತ ಎನಿಸಿಕೊಂಡಿದೆ. ಇನ್ನು ಕ್ರಾಂತಿ ಬಿಡುಗಡೆಯ ಹಿಂದಿನ ದಿನ ಶಾರುಖ್ ಖಾನ್ ನಟನೆಯ ಬಾಲಿವುಡ್ ಚಿತ್ರ ಪಠಾಣ್ ಬಿಡುಗಡೆಗೊಂಡ ಕಾರಣ ಕ್ರಾಂತಿ ಚಿತ್ರಕ್ಕೆ ಚಿತ್ರಮಂದಿರ ಸಮಸ್ಯೆ ತಲೆದೋರಬಹುದು ಎಂದು ಊಹಿಸಲಾಗಿತ್ತು. ಅದರಲ್ಲಿಯೂ ಬೆಂಗಳೂರಿನಲ್ಲಿ ಕ್ರಾಂತಿಗೆ ದೊಡ್ಡಮಟ್ಟದ ಪ್ರದರ್ಶನಗಳು ದಕ್ಕುತ್ತಾ ಎಂಬ ಅನುಮಾನ ಅನುಮಾನ ಮೂಡಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಇಂದು ( ಜನವರಿ 26 ) ಬೆಂಗಳೂರು ನಗರದಲ್ಲಿ ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

    ಪಠಾಣ್‌ಗಿಂತ ಕ್ರಾಂತಿಗೆ ಹೆಚ್ಚು ಪ್ರದರ್ಶನ

    ಪಠಾಣ್‌ಗಿಂತ ಕ್ರಾಂತಿಗೆ ಹೆಚ್ಚು ಪ್ರದರ್ಶನ

    ಇಂದು ( ಜನವರಿ 26 ) ಕ್ರಾಂತಿ ಚಿತ್ರ ಬಿಡುಗಡೆಗೊಂಡಿದ್ದರೆ, ಪಠಾಣ್ ಎರಡನೇ ದಿನದ ಪ್ರದರ್ಶನಗಳನ್ನು ಕಾಣುತ್ತಿದೆ. ಈ ದಿನ ಬೆಂಗಳೂರಿನಲ್ಲಿ ಕ್ರಾಂತಿ ಚಿತ್ರ 680 ಪ್ರದರ್ಶನಗಳನ್ನು ಪಡೆದುಕೊಂಡಿದ್ದರೆ, ಪಠಾಣ್ 541 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ಮೂಲಕ ಕ್ರಾಂತಿ ಪಠಾಣ್ ಚಿತ್ರಕ್ಕಿಂತ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ನಿನ್ನೆ 821 ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದ್ದ ಪಠಾಣ್ ಎರಡನೇ ದಿನಕ್ಕೆ 280 ಪ್ರದರ್ಶನಗಳನ್ನು ಕಳೆದುಕೊಂಡಿದೆ.

    ಯಾವ ಚಿತ್ರಕ್ಕೆ ಎಷ್ಟು ಶೋ?

    ಯಾವ ಚಿತ್ರಕ್ಕೆ ಎಷ್ಟು ಶೋ?

    ಇಂದು ( ಜನವರಿ 26 ) ಬೆಂಗಳೂರಿನಲ್ಲಿ ಅತಿಹೆಚ್ಚು ಶೋ ಪಡೆದುಕೊಂಡಿರುವ ಟಾಪ್ 5 ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ..

    1. ಕ್ರಾಂತಿ - 680 ಪ್ರದರ್ಶನಗಳು

    2. ಪಠಾಣ್ - 541 ಪ್ರದರ್ಶನಗಳು

    3. ಗಾಂಧಿ ಗೋಡ್ಸೆ ಏಕ್ ಯುದ್ಧ್ - 65 ಪ್ರದರ್ಶನಗಳು

    4. ವಾರಿಸು - 51 ಪ್ರದರ್ಶನಗಳು

    5. ವಾಲ್ತೇರು ವೀರಯ್ಯ - 44 ಪ್ರದರ್ಶನಗಳು

    6. ತುನಿವು - 39 ಪ್ರದರ್ಶನಗಳು

    ಸೋಲ್ಡ್ ಔಟ್‌ನಲ್ಲೂ ಕ್ರಾಂತಿ ಮುಂದು

    ಸೋಲ್ಡ್ ಔಟ್‌ನಲ್ಲೂ ಕ್ರಾಂತಿ ಮುಂದು

    ಇನ್ನು ಗಣರಾಜ್ಯೋತ್ಸವದ ದಿನದಂದು ಬೆಂಗಳೂರಿನಲ್ಲಿ ಚಿತ್ರಗಳು ಈ ಮೇಲ್ಕಂಡಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದ್ದು, ಈ ಪೈಕಿ ಯಾವ ಚಿತ್ರದ ಎಷ್ಟು ಪ್ರದರ್ಶನಗಳು ಸೋಲ್ಡ್ ಔಟ್ ಹಾಗೂ ಫಾಸ್ಟ್ ಫಿಲ್ಲಿಂಗ್ ಆಗಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

    1. ಕ್ರಾಂತಿ - 351 ಪ್ರದರ್ಶನಗಳು

    2. ಪಠಾಣ್ - 338 ಪ್ರದರ್ಶನಗಳು

    3. ಅವತಾರ್ ದ ವೇ ಆಫ್ ವಾಟರ್ - 22 ಪ್ರದರ್ಶನಗಳು

    4. ವಾರಿಸು - 14 ಪ್ರದರ್ಶನಗಳು

    5. ತುನಿವು - 8 ಪ್ರದರ್ಶನಗಳು

    English summary
    Kranti got more shows than Pathaan in Bangalore on it's release day. Read on
    Thursday, January 26, 2023, 15:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X