twitter
    For Quick Alerts
    ALLOW NOTIFICATIONS  
    For Daily Alerts

    3 ದಿನಗಳಲ್ಲಿ ಕ್ರಾಂತಿ ಪಡೆದುಕೊಂಡ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೇಟಿಂಗ್; ಇಷ್ಟು ಸಾಕಾ?

    By ಫಿಲ್ಮಿಬೀಟ್ ಡೆಸ್ಕ್
    |

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಹಾಗೂ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆಯಾಗಿ ಮೂರು ದಿನಗಳನ್ನು ಪೂರೈಸಿದೆ. ಗಣರಾಜ್ಯೋತ್ಸವದ ದಿನದಂದು ಬಿಡುಗಡೆಗೊಂಡ ಕ್ರಾಂತಿ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ವಿರೋಧವನ್ನು ಎದುರಿಸುತ್ತಾ ಬಂದಿತ್ತು. ಇನ್ನು ಚಿತ್ರ ಬಿಡುಗಡೆಯಾದ ನಂತರವೂ ಸಹ ಈ ವಿರೋಧ ಹಾಗೂ ಕಾಲೆಳೆತ ಮುಂದುವರಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಚೆನ್ನಾಗಿಲ್ಲ ಎಂದು ಕೆಲವರು ಬರೆದುಕೊಂಡಿದ್ದಾರೆ.

    ಇನ್ನು ದರ್ಶನ್ ಅಭಿಮಾನಿಗಳು ಕ್ರಾಂತಿ ಚಿತ್ರವನ್ನು ಮೆಚ್ಚಿಕೊಂಡಿದ್ದು, ಸಾಮಾನ್ಯ ಸಿನಿ ರಸಿಕರು ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಈ ವಿಷಯವೂ ಸಹ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ ವಾರ್‌ಗೆ ದಾರಿ ಮಾಡಿಕೊಟ್ಟಿದೆ. ದರ್ಶನ್ ಅಭಿಮಾನಿಗಳು ಚಿತ್ರ ಸೂಪರ್ ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದರೆ, ವಿರೋಧಿಗಳು ಚಿತ್ರ ಚೆನ್ನಾಗಿಲ್ಲ ಎಂದು ಸಹಸ್ರಾರು ಪೋಸ್ಟ್‌ಗಳನ್ನು ಮಾಡಿದ್ದಾರೆ.

    Kranti: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ನೋಡಲು ಇಲ್ಲಿವೆ 5 ಕಾರಣಗಳು Kranti: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ನೋಡಲು ಇಲ್ಲಿವೆ 5 ಕಾರಣಗಳು

    ಈ ಕುರಿತಾಗಿ ಕೆಲ ದರ್ಶನ್ ಅಭಿಮಾನಿಗಳು ಬರೆದುಕೊಂಡಿದ್ದು, ಕ್ರಾಂತಿ ಚಿತ್ರಕ್ಕೆ ಅಪಪ್ರಚಾರ ಮಾಡಲಾಗುತ್ತಿದೆ. ಚಿತ್ರ ಚೆನ್ನಾಗಿಯೇ ಇದೆ ಎಂದು ನೆಗೆಟಿವ್ ವಿಮರ್ಶೆಗಳ ವಿರುದ್ಧ ಕಿಡಿಕಾರಿದ್ದಾರೆ. ಚಿತ್ರಕ್ಕೆ ಜನಪ್ರಿಯ ಸಿನಿಮಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬಂದಿರುವ ರೇಟಿಂಗ್‌ಗಳನ್ನು ಹಂಚಿಕೊಳ್ಳುತ್ತಿರುವ ದರ್ಶನ್ ಅಭಿಮಾನಿಗಳು ಇಷ್ಟು ಒಳ್ಳೆ ರೇಟಿಂಗ್ ಪಡೆದುಕೊಳ್ಳುತ್ತಿರುವ ಕ್ರಾಂತಿ ಚೆನ್ನಾಗಿದೆ ಎನ್ನಲು ಇಷ್ಟು ಸಾಕಾ, ಇನ್ನೇನು ಬೇಕಿದೆ ಎಂದು ಟಾಂಗ್ ನೀಡಿದ್ದಾರೆ. ಹಾಗಿದ್ದರೆ ಕ್ರಾಂತಿ ಚಿತ್ರ ಬುಕ್ ಮೈ ಶೋ, ಐಎಂಡಿಬಿ, ಗೂಗಲ್ ರೀತಿಯ ಜನಪ್ರಿಯ ವೇದಿಕೆಗಳಲ್ಲಿ ಮೂರು ದಿನಗಳಲ್ಲಿ ಎಷ್ಟು ರೇಟಿಂಗ್ ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

    ಮೂರು ದಿನಗಳ ರೇಟಿಂಗ್ ಹೀಗಿದೆ

    ಮೂರು ದಿನಗಳ ರೇಟಿಂಗ್ ಹೀಗಿದೆ

    ಕ್ರಾಂತಿ ಚಿತ್ರಕ್ಕೆ ಮೊದಲ ಮೂರು ದಿನಗಳಲ್ಲಿ ಸಿಕ್ಕಿರುವ ರೇಟಿಂಗ್ ವಿವರ ಇಲ್ಲಿದೆ. ಜನಪ್ರಿಯ ಟಿಕೆಟ್ ಬುಕಿಂಗ್ ಎನಿಸಿಕೊಂಡಿರುವ ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಕ್ರಾಂತಿ ಚಿತ್ರಕ್ಕೆ 3 ದಿನಗಳಲ್ಲಿ 11,600 ವೋಟ್‌ಗಳು ಬಂದಿದ್ದು, ಈ ಪೈಕಿ 10ಕ್ಕೆ 9.5 ರೇಟಿಂಗ್ ಪಡೆದುಕೊಂಡಿದೆ. ಇನ್ನುಳಿದಂತೆ ಪ್ರತಿಷ್ಠಿತ ಐಎಂಡಿಬಿ ವೆಬ್ ತಾಣದಲ್ಲಿ ಕ್ರಾಂತಿ ಚಿತ್ರ ಮೊದಲ ಮೂರು ದಿನಗಳಲ್ಲಿ 7400 ವೋಟ್‌ಗಳನ್ನು ಪಡೆದುಕೊಂಡು 10ಕ್ಕೆ 8.1 ರೇಟಿಂಗ್ ಅನ್ನು ಪಡೆದುಕೊಂಡಿದೆ. ಅತ್ತ ಗೂಗಲ್‌ ರೇಟಿಂಗ್‌ನಲ್ಲಿ 4200ಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದು, 5ಕ್ಕೆ 4.5 ರೇಟಿಂಗ್ ಪಡೆದುಕೊಂಡಿದೆ. ಚಿತ್ರಕ್ಕೆ ಎಲ್ಲೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಮೂರು ಪ್ರಮುಖ ವೇದಿಕೆಗಳಲ್ಲಿ ಮಾತ್ರ ಕ್ರಾಂತಿ ಸಮಾಧಾನಕರ ರೇಟಿಂಗ್ ಪಡೆದುಕೊಂಡಿದೆ.

    ಮೂರು ದಿನದ ಕಲೆಕ್ಷನ್ ಎಷ್ಟು?

    ಮೂರು ದಿನದ ಕಲೆಕ್ಷನ್ ಎಷ್ಟು?

    ಇನ್ನು ಮೊದಲ ಮೂರು ದಿನಗಳಲ್ಲಿ ಕ್ರಾಂತಿ ಎಷ್ಟು ಗಳಿಸಿದೆ ಎಂಬ ಮಾಹಿತಿಯನ್ನಂತೂ ಚಿತ್ರತಂಡ ಪ್ರಕಟಿಸುವ ಕೆಲಸಕ್ಕೆ ಕೈಹಾಕಿಲ್ಲ. ಆದರೆ ಟ್ರೇಟ್ ಎಕ್ಸ್‌ಪರ್ಟ್‌ಗಳು ಈ ಕುರಿತಾಗಿ ಮಾಹಿತಿ ನೀಡುತ್ತಿದ್ದು, ಚಿತ್ರ ಎಷ್ಟು ಗಳಿಸಿರಬಹುದು ಎಂದು ಅಂದಾಜು ಲೆಕ್ಕ ಹೇಳುತ್ತಿದ್ದಾರೆ. ಎಲ್ಲಾ ಚಿತ್ರಗಳ ಕಲೆಕ್ಷನ್ ಅನ್ನು ನಿಖರವಾಗಿ ಹೇಳುವುದಕ್ಕೆ ಖ್ಯಾತಿಯನ್ನು ಪಡೆದಿರುವ ಸ್ಯಾಕ್‌ನಿಲ್ಕ್ ಎಂಬ ವೆಬ್ ತಾಣದ ಪ್ರಕಾರ ಕ್ರಾಂತಿ ಮೊದಲ ದಿನ 9.8 ಕೋಟಿ ರೂಪಾಯಿ, ಎರಡನೇ ದಿನ 4.1 ಕೋಟಿ ರೂಪಾಯಿ ಹಾಗೂ ಮೂರನೇ ದಿನ 4.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಪ್ರಕಟಿಸಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮೊದಲ ದಿನವೇ 20, 30, 35 ಕೋಟಿ ಕಲೆಕ್ಷನ್ ಆಗಿದೆ ಎಂಬ ವಿಭಿನ್ನ ಪೋಸ್ಟರ್‌ಗಳು ಹರಿದಾಡುತ್ತಿದ್ದು, ಕ್ರಾಂತಿ ಕಲೆಕ್ಷನ್ ಬಗ್ಗೆ ಗೊಂದಲವಿದೆ.

    ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ ಬುಕಿಂಗ್

    ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ ಬುಕಿಂಗ್

    ಇನ್ನು ಕ್ರಾಂತಿ ಚಿತ್ರದ ಮೊದಲ ದಿನದ ಬುಕಿಂಗ್ ಚೆನ್ನಾಗಿದ್ದರೆ ಎರಡನೇ ಹಾಗೂ ಮೂರನೇ ದಿನದ ಬುಕಿಂಗ್ ಡಲ್ ಹೊಡೆದಿದೆ. ಶುಕ್ರವಾರ ಹಾಗೂ ಶನಿವಾರ ರಜೆ ಇಲ್ಲದ ಕಾರಣ ಕಡಿಮೆ ಬುಕಿಂಗ್ ನಡೆದಿರಬಹುದು ಎಂದು ಚರ್ಚಿಸುತ್ತಿರುವ ಸಿನಿ ರಸಿಕರು ಭಾನುವಾರ ಬುಕಿಂಗ್ ಸುಧಾರಿಸಬಹುದು, ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    English summary
    Kranti movie bookmyshow, google and imdb ratings after the completion of 3 days. Read on
    Sunday, January 29, 2023, 11:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X