For Quick Alerts
  ALLOW NOTIFICATIONS  
  For Daily Alerts

  Kranti Release and Review Live: 'ಕ್ರಾಂತಿ' ಸಿನಿಮಾ ಬಿಡುಗಡೆ, ಹೇಗಿದೆ ಪ್ರತಿಕ್ರಿಯೆ?

  By ಫಿಲ್ಮಿಬೀಟ್ ಡೆಸ್ಕ್
  |

  ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಇಂದು ಬಿಡುಗಡೆ ಆಗಿದೆ. ಅಭಿಮಾನಿಗಳ ಸಂಭ್ರಮ, ಮೊದಲ ದಿನದ ಕಲೆಕ್ಷನ್ ಲೆಕ್ಕಾಚಾರ, ಯಾವ ನಗರದಲ್ಲಿ ಹೇಗಿದೆ ಸೆಲೆಬ್ರೇಷನ್, ಸಿನಿಮಾ ನೋಡಿದ ಸೆಲೆಬ್ರಿಟಿಗಳು, ಪ್ರೇಕ್ಷಕರ ಪ್ರತಿಕ್ರಿಯೆ, ಟ್ವಿಟ್ಟರ್ ವಿಮರ್ಶೆ, ಸಿನಿಮಾ ಪಂಡಿತರ ವಿಮರ್ಶೆ ಇನ್ನಿತರೆ ಕ್ಷಣ-ಕ್ಷಣದ ಮಾಹಿತಿ ಇಲ್ಲಿ ನಿಮಗಾಗಿ.

  • Jan 26, 2023 1:48 PM
   Kranti Collection: ಮೊದಲ ದಿನ 'ಕ್ರಾಂತಿ' ಗಳಿಕೆ ಎಷ್ಟು? ಟ್ರೇಡ್ ಎಕ್ಸ್‌ಪರ್ಟ್‌ಗಳ ಲೆಕ್ಕಾಚಾರವೇನು?

   ಈ ವರ್ಷದ ಮೊದಲ ಸ್ಯಾಂಡಲ್‌ವುಡ್‌ ಸಿನಿಮಾ 'ಕ್ರಾಂತಿ' ಬಾಕ್ಸಾಫೀಸ್ ದಾಖಲೆ ಬರೆಯುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ, ಹರಿಕೃಷ್ಣ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಮೊದಲ ದಿನವೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಸಿನಿಮಾ ಇಷ್ಟ ಆಗದೇ ಇದ್ದರೂ, ಉದ್ದೇಶಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಒಂದೊಳ್ಳೆ ಸಂದೇಶ ನೀಡುವುದಕ್ಕೆ ನಿರ್ಮಿಸಿದ ಸಿನಿಮಾ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಈ ಸಂದೇಶ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುತ್ತಾ? ಅನ್ನೋದು ಕುತೂಹಲ ಅಂತೂ ಇದೆ.

  • Jan 26, 2023 1:05 PM

   'ಕ್ರಾಂತಿ' ಬಿಡುಗಡೆ ದಿವಸ ನಟ ದರ್ಶನ್ ಗಣರಾಜ್ಯೋತ್ಸವದ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ. ಜೊತೆಗೆ 'ಕ್ರಾಂತಿ' ಸಿನಿಮಾ ವೀಕ್ಷಿಸುವಂತೆ ಮನವಿ ಸಹ ಮಾಡಿದ್ದಾರೆ. 'ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು, ಎಂದೆಂದೂ ನಮ್ಮ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ನಮ್ಮ ಕನ್ನಡಾಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು. ಇಂದಿನಿಂದ ನಿಮ್ಮ 'ಕ್ರಾಂತಿ' ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ನೋಡಿ ಆಶೀರ್ವದಿಸಿ'

  • Jan 26, 2023 1:02 PM

   ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಇಂದು ಬಿಡುಗಡೆ ಆಗಿದ್ದು, ಸ್ಯಾಂಡಲ್‌ವುಡ್‌ನ ಹಲವು ಸೆಲೆಬ್ರಿಟಿಗಳು ಸಿನಿಮಾಕ್ಕೆ ಯಶಸ್ಸು ಹಾರೈಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿದ್ದಾರೆ.

  • Jan 26, 2023 11:57 AM
   'ಕ್ರಾಂತಿ' ಸಿನಿಮಾದಲ್ಲಿ ಅಪ್ಪು ಸ್ಮರಣೆ ಇಲ್ಲ.. ಸೋಶಿಯಲ್ ಮೀಡಿಯಾದಲ್ಲಿ ಗರಂ

   ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕ್ರಾಂತಿ' ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಬಾಕ್ಸಾಫೀಸ್ ದಾಖಲೆ ಬರೆಯುತ್ತೆ ಎಂದು ಲೆಕ್ಕ ಹಾಕಲಾಗುತ್ತಿದೆ. ಆದರೆ, ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ 'ಕ್ರಾಂತಿ' ಸಿನಿಮಾ ಆರಂಭದಲ್ಲಿ ಪುನೀತ್ ರಾಜ್‌ಕುಮಾರ್‌ ಸ್ಮರಣೆ ಮಾಡಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿದೆ.

   'ಕ್ರಾಂತಿ' ಸಿನಿಮಾದಲ್ಲಿ ಅಪ್ಪು ಸ್ಮರಣೆ ಇಲ್ಲ.. ಸೋಶಿಯಲ್ ಮೀಡಿಯಾದಲ್ಲಿ ಗರಂ
  • Jan 26, 2023 8:54 AM
   ಬಂಗಾರಿ ಯಾರೇ ನೀ ಬುಲ್ ಬುಲ್.. ಹಾಡಲ್ಲಿ ಹೆಜ್ಜೆ ಹಾಕಲ್ಲ ಎಂದಿದ್ದ ದರ್ಶನ್: ಅಂದಿನ ಗುಟ್ಟು ಇಂದು ರಟ್ಟು!

   'ಗಜ' ಸಿನಿಮಾದ "ಬಂಗಾರಿ ಯಾರೇ ನೀ ಬುಲ್ ಬುಲ್.." ಹಾಡಿನಲ್ಲಿ ಹೆಜ್ಜೆ ಹಾಕುವುದಕ್ಕೆ ದರ್ಶನ್ ಹಿಂದೇಟು ಹಾಕಿದ್ದರು ಅನ್ನೋ ಮ್ಯಾಟರೇ ಏನೋ ರಿವೀಲ್ ಆಗಿತ್ತು. ಆದರೆ, ಯಾಕೆ ಅನ್ನೋದನ್ನು ದರ್ಶನ್ ರಿವೀಲ್ ಮಾಡಿರಲಿಲ್ಲ. ಈಗ 'ಕ್ರಾಂತಿ' ಸಿನಿಮಾದ ಸಂದರ್ಶನದ ವೇಳೆ ಆ ಗುಟ್ಟನ್ನು ರಿವೀಲ್ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಮೇಲೆ ಕ್ಲಿಕ್ ಮಾಡಿ..

  • Jan 26, 2023 8:50 AM
   ಕಾಮಕ್ಯ ಚಿತ್ರಮಂದಿರದ ಮುಂದೆ ಅಭಿಮಾನಿ ಸಾಗರ

   ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕ್ರಾಂತಿ' ರಿಲೀಸ್ ಆಗಿದ್ದು, ಅಭಿಮಾನಿಗಳಿಗಾಗಿಯೇ ಸ್ಪೆಷಲ್ ಶೋ ಹಾಕಲಾಗಿತ್ತು. ಬೆಳಗ್ಗೆ 6 ಗಂಟೆಯಿಂದಲೇ ಸ್ಪೆಷಲ್ ಶೋ ಹಾಕಲಾಗಿತ್ತು. ಕಾಮಕ್ಯ ಚಿತ್ರಮಂದಿರ ಮುಂದೆ ಡಿ ಬಾಸ್ ಫ್ಯಾನ್ಸ್ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

   ಕಾಮಕ್ಯ ಚಿತ್ರಮಂದಿರದ ಮುಂದೆ ಅಭಿಮಾನಿ ಸಾಗರ
  • Jan 26, 2023 8:42 AM
   ದರ್ಶನ್ 'ಕ್ರಾಂತಿ' ಸಿನಿಮಾಗೆ ಶುಭಕೋರಿದ ಡಾಲಿ ಧನಂಜಯ್

   ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಇಂದು (ಜನವರಿ 26) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ಬಿಡುಗಡೆಯಾದ ಸಂಭ್ರಮದಲ್ಲಿ ದರ್ಶನ್ ಅಭಿಮಾನಿಗಳು ಮುಳುಗಿ ಏಳುತ್ತಿದ್ದಾರೆ. ಇದೇ ವೇಳೆ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ 'ಕ್ರಾಂತಿ' ಸಿನಿಮಾಗೆ ಹಾಗೂ ದರ್ಶನ್‌ಗೆ ಶುಭಕೋರಿದ್ದಾರೆ. "ಕ್ರಾಂತಿಗೆ ಶುಭವಾಗಲಿ, ಕ್ರಾಂತಿಯಾಗಲಿ" ಎಂದು ಟ್ವೀಟ್ ಮಾಡಿದ್ದಾರೆ.

   ದರ್ಶನ್ 'ಕ್ರಾಂತಿ' ಸಿನಿಮಾಗೆ ಶುಭಕೋರಿದ ಡಾಲಿ ಧನಂಜಯ್
  • Jan 26, 2023 7:48 AM

   ಕ್ರಾಂತಿ ಫಸ್ಟ್ ಹಾಫ್: 'ಕ್ರಾಂತಿ' ರಾಯಣ್ಣ ಆಗಿ ದರ್ಶನ್ ಎಂಟ್ರಿ ಸಿಂಪಲ್ ಆಗಿದೆ. ಫಸ್ಟ್ ಹಾಫ್‌ನಲ್ಲಿ ಆಕ್ಷನ್ ಮತ್ತು ಕಾಮಿಡಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಇಂಟರ್‌ವಲ್ ವೇಳೆಗೆ ನಾಯಕ- ಖಳನಾಯಕನ ಮುಖಾಮುಖಿ. ಖಾಸಗಿ ಶಾಲೆಗಳ ಮಾಫಿಯಾ ವಿರುದ್ಧ್ ನಾಯಕನ ಹೋರಾಟದ ಕಥೆ. ಡೈಲಾಗ್‌ಗಳು ಗಮನ ಸೆಳೆಯುತ್ತದೆ.

  • Jan 26, 2023 7:43 AM

   ಬೆಳ್ಳಂ ಬೆಳಗ್ಗೆ 6 ಗಂಟೆಗೆ ಥಿಯೇಟರ್‌ಗಳಲ್ಲಿ 'ಕ್ರಾಂತಿ' ಸಿನಿಮಾ ಪ್ರದರ್ಶನ ಆರಂಭವಾಗಿದೆ. ಅಭಿಮಾನಿಗಳು ಬೆಳ್ಳಿ ಪರೆದೆ ಮೇಲೆ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈಗಾಗಲೇ ಫಸ್ಟ್ ಹಾಫ್ ಮುಕ್ತಾಯವಾಗಿದೆ.

  • Jan 25, 2023 9:57 PM

   'ಕ್ರಾಂತಿ' ಸಿನಿಮಾವು ಬೆಂಗಳೂರು ಒಂದಲ್ಲಿಯೇ 650 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಾಣಲಿದೆ. ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ಅಬ್ಬರದ ನಡುವೆಯೂ ದೊಡ್ಡ ಸಂಖ್ಯೆಯ ಶೋಗಳನ್ನು 'ಕ್ರಾಂತಿ' ಪಡೆದುಕೊಂಡಿದೆ.

  • Jan 25, 2023 9:57 PM

   ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಇಂದು ಬಿಡುಗಡೆ ಆಗಿದ್ದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬೆಳ್ಳಂಬೆಳಿಗ್ಗೆ ಅಭಿಮಾನಿಗಳು ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ನೋಡುತ್ತಿದ್ದಾರೆ.

  • Jan 25, 2023 9:56 PM

   'ಕ್ರಾಂತಿ' ಸಿನಿಮಾದಲ್ಲಿ ದರ್ಶನ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ದರ್ಶನ್‌ರ ಗೆಳೆಯ ಸಂಗೀತ ನಿರ್ದೇಶಕ ಹರಿಕೃಷ್ಣ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ಶೈಲಜಾ ನಾಗ್.

  • Jan 25, 2023 9:56 PM

   'ಕ್ರಾಂತಿ' ಸಿನಿಮಾವು ಅಕ್ಷರ ಕ್ರಾಂತಿಯ ಅಂದರೆ ಶೈಕ್ಷಣಿಕ ರಂಗದ ಕುರಿತಾದ ಕಮರ್ಷಿಯಲ್ ಸಿನಿಮಾ ಆಗಿದೆ. ಎನ್‌ಆರ್‌ಐ ಒಬ್ಬ ರಾಜ್ಯದ ಶಿಕ್ಷಣ ಪದ್ಧತಿಯ ವಿರುದ್ಧ ತನ್ನದೇ ಮಾಸ್ ಸ್ಟೈಲ್‌ನಲ್ಲಿ ಸಮರ ಸಾರುವ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ.

  English summary
  Darshan Starrer Kranti Movie Release Live Updates: Check out audience response, twitter review, Box office collection details. Read on.
  Thursday, January 26, 2023, 6:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X