Don't Miss!
- News
Padma Awards: ಮೋದಿ ಪ್ರಧಾನಿಯಾಗಿದ್ದಕ್ಕೆ ನನಗೆ ಪ್ರಶಸ್ತಿ ಬಂತು, ಇಲ್ಲದಿದ್ದರೇ ಬರುತ್ತಿರಲಿಲ್ಲ; ಎಸ್.ಎಲ್. ಭೈರಪ್ಪ
- Sports
ICC Men's Test Cricketer of 2022: ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ ಗೆದ್ದ ಬೆನ್ ಸ್ಟೋಕ್ಸ್
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕ್ರಾಂತಿ ಚಿತ್ರದ 'ಧರಣಿ' ಹಾಡನ್ನು ಯಾವುದರ ಬಗ್ಗೆ ಬರೆಯಲಾಗಿದೆ ಎಂದು ತಿಳಿಸಿದ ದರ್ಶನ್; ಗೂಸ್‌ಬಂಪ್ಸ್ ಗ್ಯಾರಂಟಿ!
ಈ ವರ್ಷ ಪುನೀತ್ ರಾಜ್‌ಕುಮಾರ್, ಯಶ್, ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ಶಿವ ರಾಜ್‌ಕುಮಾರ್ ಹಾಗೂ ರಿಷಬ್ ಶೆಟ್ಟಿ ಅಭಿನಯದ ಚಿತ್ರಗಳು ಬಿಡುಗಡೆಗೊಂಡಿದ್ದು, ಸಿನಿ ಪ್ರೇಕ್ಷಕರು ಈ ಎಲ್ಲಾ ಸ್ಟಾರ್ ನಟರ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ. ಹೀಗೆ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರ ಚಿತ್ರಗಳು ಈ ವರ್ಷ ಬಿಡುಗಡೆಗೊಂಡಿದ್ದು ಚಿತ್ರರಂಗದ ಪ್ರಮುಖ ಪಿಲ್ಲರ್‌ಗಳಲ್ಲಿ ಒಬ್ಬರಾದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ ಮಾತ್ರ ಬಿಡುಗಡೆಯಾಗದಿರುವುದು ತುಸು ಬೇಸರದ ಸಂಗತಿ.
ಇನ್ನು ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಕ್ರಾಂತಿ ಚಿತ್ರ ಈ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತವೇ ಚಿತ್ರಮಂದಿರಗಳಿಗೆ ಲಗ್ಗೆ ಇಡಬೇಕಿತ್ತು. ಆದರೆ ಚಿತ್ರದ ಕೆಲಸಗಳು ಬಾಕಿ ಉಳಿದಿದ್ದ ಕಾರಣ ಈ ವರ್ಷ ಕ್ರಾಂತಿ ಚಿತ್ರವನ್ನು ತೆರೆ ಮೇಲೆ ವೀಕ್ಷಿಸುವ ಅವಕಾಶ ಲಭಿಸುತ್ತಿಲ್ಲ. ಅಂದಹಾಗೆ ಈ ಚಿತ್ರ ಮುಂಬರುವ ಜನವರಿ ತಿಂಗಳಿನಲ್ಲಿ ಗಣ ರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಳ್ಳಲಿದೆ.
Yash
19
:
ಯಶ್
ಮುಂದಿನ
ಚಿತ್ರಕ್ಕೆ
ಯಶ್
ಅವರೇ
ನಿರ್ಮಾಪಕರಂತೆ;
ಬ್ಯಾನರ್
ಹೆಸರೇನು?
ಚಿತ್ರದ ಬಿಡುಗಡೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದು, ಚಿತ್ರದ ಮೊದಲ ಹಾಡು ಬಿಡುಗಡೆಗೊಳ್ಳುವ ದಿನಾಂಕವನ್ನೂ ಸಹ ಘೋಷಿಸಿದೆ. ಹೌದು, ಕ್ರಾಂತಿ ಸಿನಿಮಾದ 'ಧರಣಿ' ಎಂಬ ಥೀಮ್ ಹಾಡನ್ನು ಇದೇ ಡಿಸೆಂಬರ್ 10ರಂದು ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಘೋಷಿಸಿದ್ದು, ಸದ್ಯ ಎಲ್ಲರ ಚಿತ್ತ ಈ ಹಾಡಿನತ್ತ ನೆಟ್ಟಿದೆ. ಟೀಸರ್ ಹೊರತುಪಡಿಸಿ ಬೇರಾವುದೇ ಅಂಶವನ್ನು ಹಂಚಿಕೊಳ್ಳದ ಕ್ರಾಂತಿ ಚಿತ್ರದ ಈ ಹಾಡು ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದ್ದು, ಏನಿದು ಕ್ರಾಂತಿ ಚಿತ್ರದ ಥೀಮ್ ಸಾಂಗ್ ಎಂದರೆ ಎಂದು ಯೋಚಿಸುತ್ತಿದ್ದಾರೆ. ಈ ಕುರಿತಾಗಿ ಸದ್ಯ ಚಾಲೆಂಜಿಂಗ್ ಸ್ಟಾರ್ ಮಾತನಾಡಿದ್ದು, ಧರಣಿ ಹಾಡು ಯಾವ ಅಂಶಗಳ ಮೇಲೆ ರಚನೆಯಾಗಿದೆ ಎಂಬುದನ್ನು ಈ ಕೆಳಕಂಡಂತೆ ತಿಳಿಸಿದ್ದಾರೆ.

ಧರಣಿ ಹಾಡು ಹೇಗಿರಲಿದೆ?
ಕ್ರಾಂತಿ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಇರುವ ದರ್ಶನ್ ಯುಟ್ಯೂಬ್ ಚಾನೆಲ್ ಒಂದು ನಡೆಸಿದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದಾಗ ಧರಣಿ ಹಾಡಿನ ಬಗ್ಗೆ ಮಾತನಾಡಿದ್ದಾರೆ. "ಕ್ರಾಂತಿ ಚಿತ್ರದ ಧರಣಿ ಹಾಡಿನಲ್ಲಿ ಸ್ನೇಹದ ಬಗ್ಗೆ ಹೇಳ್ತೀವಿ ಹಾಗೂ ಸರ್ಕಾತಿ ಶಾಲೆಗಳ ವಿಶೇಷತೆ ಏನು, ಹೇಗಿದೆ ಎಂಬುದನ್ನು ಬಿಡಿಸಿ ಹೇಳ್ತೀವಿ. ಒಟ್ಟಿನಲ್ಲಿ ಗೂಸ್‌ಬಂಪ್ಸ್ ಬರುವಂತಹ ಹಾಡು ಇದಾಗಿರಲಿದೆ" ಎಂದು ದರ್ಶನ್ ಹಾಡಿನ ಬಗ್ಗೆ ವಿಶ್ವಾಸದಿಂದ ಹೇಳಿಕೊಂಡರು.

ಹಾಡು ಯಾವಾಗ ಎಲ್ಲಿ ಬಿಡುಗಡೆ?
ಇನ್ನು ಕ್ರಾಂತಿ ಚಿತ್ರದ ಧರಣಿ ಹಾಡನ್ನು ಡಿಸೆಂಬರ್ 10ರಂದು ಮೈಸೂರಿನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಚಿತ್ರತಂಡ ಈಗಾಗಲೇ ತಿಳಿಸಿದ್ದು, ಈ ಹಾಡನ್ನು ವಿ ಹರಿಕೃಷ್ಣ ಒಡೆತನದ 'ಡಿ ಬೀಟ್ಸ್ ಮ್ಯೂಸಿಕ್' ಯುಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದಾಗಿದೆ. ಪ್ಯಾನ್ ಇಂಡಿಯಾ ಚಿತ್ರ ಎಂದು ಘೋಷಿಸಲ್ಪಟ್ಟಿರುವ ಕ್ರಾಂತಿ ಚಿತ್ರದ ಈ ಹಾಡನ್ನು ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡ್ತಾರಾ ಅಥವಾ ಇತರೆ ಭಾಷೆಗಳಲ್ಲೂ ಬಿಡುಗಡೆಗೊಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ದರ್ಶನ್ - ಹರಿ ಕೊಂಬೋ ಕ್ಲಿಕ್ ಆಗುವುದು ಪಕ್ಕಾ
ಯಜಮಾನ ಚಿತ್ರದ ಬಳಿಕ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್ ಒಂದಾಗಿದೆ. ಈ ಹಿಂದೆ ಈ ಕಾಂಬಿನೇಶನ್‌ನಲ್ಲಿ ಬಂದಿರುವ ಹಾಡುಗಳ ಪೈಕಿ ಬಹುತೇಕ ಹಾಡುಗಳು ಹಿಟ್ ಆಗಿದ್ದು, ಈ ಹಾಡೂ ಸಹ ಚಾರ್ಟ್‌ಬಸ್ಟರ್ ಪಟ್ಟಿ ಸೇರಲಿದೆ ಎಂಬ ವಿಶ್ವಾಸವಿದೆ. ಅದರಲ್ಲಿಯೂ ಈಗಾಗಲೇ ಸ್ವತಃ ದರ್ಶನ್ ಈ ಹಾಡು ಗೂಸ್‌ಬಂಪ್ಸ್ ನೀಡಲಿದೆ ಎಂದು ನೀಡಿದ ಹೇಳಿಕೆ ಹಾಡಿನ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.