For Quick Alerts
  ALLOW NOTIFICATIONS  
  For Daily Alerts

  'ಕ್ರಾಂತಿ' ಮೂರನೇ ಹಾಡು ಬಿಡುಗಡೆಗೆ ಸ್ಥಳ & ದಿನಾಂಕ ನಿಗದಿ; ಬೃಹತ್ ವೃತ್ತದಲ್ಲಿ ಕಾರ್ಯಕ್ರಮ!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಕ್ರಾಂತಿ ಚಿತ್ರತಂಡ ಸದ್ಯ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುತ್ತಾ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸುವತ್ತ ಚಿತ್ತ ನೆಟ್ಟಿದೆ. ಹೀಗಾಗಿಯೇ ರಾಜ್ಯದ ಒಂದೊಂದು ನಗರದಲ್ಲಿ ಚಿತ್ರದ ಒಂದೊಂದು ಹಾಡನ್ನು ಬಿಡುಗಡೆ ಮಾಡುವ ಕೆಲಸವನ್ನು ಕ್ರಾಂತಿ ಚಿತ್ರತಂಡ ಈಗಾಗಲೇ ಮಾಡುತ್ತಿದೆ.

  ಈ ಯೋಜನೆಯ ಪ್ರಕಾರವೇ ಕ್ರಾಂತಿ ಚಿತ್ರದ ಮೊದಲನೇ ಹಾಡು 'ಧರಣಿ ಥೀಮ್' ಅನ್ನು ಡಿಸೆಂಬರ್ 10ನೇ ತಾರೀಖಿನಂದು ಮೈಸೂರಿನಲ್ಲಿ ಬಿಡುಗಡೆ ಮಾಡಲಾಗಿತ್ತು. ನಂತರ ಚಿತ್ರದ ಎರಡನೇ ಹಾಡನ್ನು ಹೊಸಪೇಟೆ ಪಟ್ಟಣದ ಡ್ಯಾಮ್ ರಸ್ತೆಯಲ್ಲಿರುವ ವಾಲ್ಮೀಕಿ ವೃತ್ತದಲ್ಲಿ ನಡೆಸಲಾಯಿತು. ಇಲ್ಲಿ ಆಯೋಜಿಸಲಾಗಿದ್ದ ಕ್ರಾಂತಿ ಚಿತ್ರದ ಬೊಂಬೆ ಬೊಂಬೆ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ದರ್ಶನ್ ಮೇಲೆ ಚಪ್ಪಲಿ ಎಸೆತವಾಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.

  ದರ್ಶನ್ ಚಪ್ಪಲಿ ಪ್ರಕರಣದ ಬಗ್ಗೆ ಕ್ರಮಕೈಗೊಳ್ಳದಿದ್ರೆ ಚಿತ್ರಮಂದಿರಗಳು ಬಂದ್: ಸೇನೆ ಎಚ್ಚರಿಕೆ! ದರ್ಶನ್ ಚಪ್ಪಲಿ ಪ್ರಕರಣದ ಬಗ್ಗೆ ಕ್ರಮಕೈಗೊಳ್ಳದಿದ್ರೆ ಚಿತ್ರಮಂದಿರಗಳು ಬಂದ್: ಸೇನೆ ಎಚ್ಚರಿಕೆ!

  ಹೀಗೆ ಇಂತಹ ಅಹಿತಕರ ಘಟನೆ ನಡೆದ ನಂತರ ಕ್ರಾಂತಿ ಚಿತ್ರತಂಡ ಮುಂದಿನ ಹಾಡುಗಳನ್ನು ಯೋಜನೆ ಪ್ರಕಾರವೇ ಬಿಡುಗಡೆ ಮಾಡುತ್ತಾ ಅಥವಾ ಈ ಯೋಜನೆಯನ್ನೇ ಕೈಬಿಡುತ್ತಾ ಎಂಬ ಅನುಮಾನ ಶುರುವಾಗಿದ್ದವು. ಆದರೆ ಇದೀಗ ಕೇಳಿ ಬರುತ್ತಿರುವ ಮಾಹಿತಿಯ ಪ್ರಕಾರ ಕ್ರಾಂತಿ ಚಿತ್ರತಂಡ ತಮ್ಮ ಯೋಜನೆಯನ್ನು ಅರ್ಧಕ್ಕೆ ಕೈಬಿಡದೇ ಮುಂದುವರಿಸಲು ತೀರ್ಮಾನಿಸಿದೆ. ಮೂರನೇ ಹಾಡನ್ನು ಯಾವ ನಗರದಲ್ಲಿ ಯಾವ ದಿನ ಯಾವ ಸ್ಥಳದಲ್ಲಿ ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಸಹ ಹೊರಬಿದ್ದಿದೆ.

  ಮುಂದಿನ ನಿಲ್ದಾಣ ಚನ್ನಮ್ಮ ಸರ್ಕಲ್!

  ಮುಂದಿನ ನಿಲ್ದಾಣ ಚನ್ನಮ್ಮ ಸರ್ಕಲ್!

  ಕ್ರಾಂತಿ ಚಿತ್ರ ಮೂರನೇ ಹಾಡನ್ನು ಹುಬ್ಬಳ್ಳಿಯ ಚನ್ನಮ್ಮ ವೃತ್ತದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮುಂದಿನ ಭಾನುವಾರ ಅಂದರೆ ಡಿಸೆಂಬರ್ 25ರಂದು ಈ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಲು ತಯಾರಿ ನಡೆಸಿದೆ ಎನ್ನಲಾಗಿದೆ. ಬೃಹತ್ ವೃತ್ತವಾಗಿರುವ ಈ ಸ್ಥಳದಲ್ಲಿ ದರ್ಶನ್ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿಯೇ ಜಮಾಯಿಸುವ ನಿರೀಕ್ಷೆ ಇದ್ದು, ಹಾಡು ಬಿಡುಗಡೆ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯುವುದು ಖಚಿತ.

  ಇದೇ ವೃತ್ತದಲ್ಲಿ ಹಲವು ಚಿತ್ರಗಳ ಶೂಟಿಂಗ್

  ಇದೇ ವೃತ್ತದಲ್ಲಿ ಹಲವು ಚಿತ್ರಗಳ ಶೂಟಿಂಗ್

  ಇನ್ನು ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ಸಿಕ್ಕಾಪಟ್ಟೆ ಫೇಮಸ್. ಹಲವಾರು ಚತ್ರಗಳನ್ನು ಇಲ್ಲಿ ಶೂಟಿಂಗ್ ಮಾಡಿರುವುದರಿಂದ ಹುಬ್ಬಳ್ಳಿಗೆ ಭೇಟಿ ನೀಡದೇ ಇರುವವರಿಗೂ ಸಹ ಚನ್ನಮ್ಮ ವೃತ್ತದ ಪರಿಚಯ ಚೆನ್ನಾಗಿಯೇ ಇದೆ. ಅದರಲ್ಲೂ ವರನಟ ಡಾ ರಾಜ್‌ಕುಮಾರ್ ನಟನೆಯ ಆಕಸ್ಮಿಕ ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು ಹಾಡಿನಿಂದ ಈ ಚನ್ನಮ್ಮ ಸರ್ಕಲ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಪುನೀತ್ ರಾಜ್‌ಕುಮಾರ್ ನಟನೆಯ ದೊಡ್ಡನೆ ಹುಡ್ಗ ಚಿತ್ರದ ಅಭಿಮಾನಿಗಳೇ ನಮ್ಮನೆ ದೇವ್ರು ಹಾಡನ್ನೂ ಸಹ ಇಲ್ಲೇ ಚಿತ್ರೀಕರಿಸಲಾಗಿತ್ತು. ಈ ಎರಡೂ ಚಿತ್ರೀಕರಣದ ಸಂದರ್ಭದಲ್ಲೂ ಸಹ ಜನಸ್ತೋಮವೇ ನೆರೆದಿತ್ತು.

  ಇನ್ನೂ ಆರಿಲ್ಲ ಹೊಸಪೇಟೆ ಕಿಡಿ

  ಇನ್ನೂ ಆರಿಲ್ಲ ಹೊಸಪೇಟೆ ಕಿಡಿ

  ಹೊಸಪೇಟೆ ಕಾರ್ಯಕ್ರಮದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಕೃತ್ಯದಿಂದಾಗಿ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಸಹ ಆರಿಲ್ಲ. ಈ ಕೃತ್ಯವನ್ನು ರಾಜ್‌ವಂಶದ ಅಭಿಮಾನಿಗಳೇ ಮಾಡಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದರೆ, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮಾತ್ರ ಇಂತಹ ನೀಚ ಕೆಲಸವನ್ನು ಅಪ್ಪು ಅಭಿಮಾನಿಗಳು ಯಾರೂ ಸಹ ಮಾಡುವುದಿಲ್ಲ, ಯಾರೋ ಮೂರನೇ ವ್ಯಕ್ತಿ ಈ ಕೃತ್ಯ ಎಸಗಿ ತಂದಿಟ್ಟು ತಮಾಷೆ ನೋಡುತ್ತಿದ್ದಾನೆ ಅಷ್ಟೇ ಎಂದು ಪ್ರತಿವಾದ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸದ್ಯ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಆನ್‌ಲೈನ್ ವಾರ್ ಜೋರಾಗಿದೆ. ಅಭಿಮಾನಿಗಳ ನಡುವಿನ ಸಮರ ತಣ್ಣಗಾಗಬೇಕೆಂದರೆ ಚಪ್ಪಲಿ ಎಸೆದದ್ದು ಯಾರು ಎಂಬುದು ಬಹಿರಂಗವಾಗಬೇಕಿದೆ.

  English summary
  Kranti movie third song releasing on December 25th in Hubli's Chennamma circle. Read on
  Tuesday, December 20, 2022, 13:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X