For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2, ಗಂಧದ ಗುಡಿ, ವಿಕ್ರಾಂತ್ ರೋಣ ಟ್ರೈಲರ್ ದಾಖಲೆ ಮುರಿದು ನಂ.1 ಆಗುತ್ತಾ ಕ್ರಾಂತಿ ಟ್ರೈಲರ್?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಯ ದಿನ ಸಮೀಪಿಸುತ್ತಿದ್ದಂತೆ ದಿನಗಣನೆ ಶುರುವಾಗಿದೆ. ಈಗಾಗಲೇ ಚಿತ್ರದ ಮೂರು ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿರುವ ಕ್ರಾಂತಿ ಚಿತ್ರತಂಡ ಈಗ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಚಿತ್ರದ ಹೈಪ್ ಅನ್ನು ಮತ್ತಷ್ಟು ಹೆಚ್ಚಿಸುವತ್ತ ಚಿತ್ತ ನೆಟ್ಟಿದೆ.

  ಇನ್ನು ನಾಳೆ ( ಜನವರಿ 7 ) ಸಂಜೆ 7.30ಕ್ಕೆ ಕ್ರಾಂತಿ ಚಿತ್ರದ ಟ್ರೈಲರ್ ಅನ್ನು ಬೆಂಗಳೂರಿನ ಒರಾಯನ್ ಮಾಲ್‌ನಲ್ಲಿ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಜರುಗಲಿದೆ. ದರ್ಶನ್ ಹಾಗೂ ರಚಿತಾ ರಾಮ್ ಸೇರಿದಂತೆ ಇಡೀ ಕ್ರಾಂತಿ ಚಿತ್ರತಂಡ ಈ ಕಾರ್ಯಕ್ರಮದಲಕ್ಕೆ ಹಾಜರಾಗಲಿದ್ದು, ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಉಮಾ ಶ್ರೀ, ಸುಮಲತಾ ಅಂಬರೀಶ್ ಹಾಗೂ ವಿ ರವಿಚಂದ್ರನ್ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

  ಒಂದೆಡೆ ಬಹು ನಿರೀಕ್ಷಿತ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ ಎಂಬ ಸಂತಸ ಹಾಗೂ ಸಂಭ್ರಮ ಮನೆ ಮಾಡಿದ್ದರೆ, ಮತ್ತೊಂದೆಡೆ ಅಭಿಮಾನಿಗಳು ಚಿತ್ರರಂಗದಲ್ಲಿ ಈ ಹಿಂದೆ ಸೃಷ್ಟಿಯಾಗಿರುವ ಟ್ರೈಲರ್ ದಾಖಲೆಗಳನ್ನೆಲ್ಲಾ ಮುರಿದು ಹಾಕಬೇಕೆಂಬ ಯೋಜನೆಯಲ್ಲಿದ್ದಾರೆ. ಹೌದು, ಸ್ಟಾರ್ ನಟರ ಚಿತ್ರಗಳ ಟ್ರೈಲರ್‌ಗಳು ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲಿ ಎಷ್ಟು ವೀಕ್ಷಣೆ ಪಡೆಯಿತು ಹಾಗೂ ಎಷ್ಟು ಲೈಕ್ಸ್ ಪಡೆದುಕೊಂಡಿತು ಎಂಬ ಲೆಕ್ಕಾಚಾರಗಳ ಮೇಲೆ ಯಾವ ನಟನ ಟ್ರೈಲರ್ ಹೆಚ್ಚು ಕ್ರೇಜ್ ಹೊಂದಿತ್ತು ಎಂಬುದನ್ನು ನಿರ್ಧರಿಸುವುದರಿಂದ ಪ್ರತಿ ನಟನ ಅಭಿಮಾನಿಗಳೂ ಸಹ ತಮ್ಮ ನಟನ ಟ್ರೈಲರ್ ಹೆಚ್ಚು ಲೈಕ್ಸ್ ಹಾಗೂ ವೀಕ್ಷಣೆ ಪಡೆದುಕೊಳ್ಳಲಿ ಎಂದು ಆಶಿಸುತ್ತಾರೆ ಹಾಗೂ ಗುರಿಯನ್ನು ಹೊಂದಿರುತ್ತಾರೆ. ಇನ್ನು ಕ್ರಾಂತಿ ಚಿತ್ರದ ಟ್ರೈಲರ್ ನಂಬರ್ ಒನ್ ಕನ್ನಡ ಟ್ರೈಲರ್ ಆಗಬೇಕೆಂದರೆ ಈ ಕೆಳಕಂಡ ಚಿತ್ರಗಳ ದಾಖಲೆಯನ್ನು ಅಳಿಸಿ ಹಾಕಬೇಕಿದೆ..

  ಈ ದಾಖಲೆಗಳನ್ನು ಮುರಿದರೆ ನಂಬರ್ ಒನ್ ಪಟ್ಟ

  ಈ ದಾಖಲೆಗಳನ್ನು ಮುರಿದರೆ ನಂಬರ್ ಒನ್ ಪಟ್ಟ

  ಇನ್ನು ಕ್ರಾಂತಿ ಚಿತ್ರದ ಟ್ರೈಲರ್ ನಂಬರ್ ಒನ್ ಪಟ್ಟ ದಕ್ಕಿಸಿಕೊಳ್ಳಬೇಕೆಂದರೆ ಕೆಜಿಎಫ್ ಚಾಪ್ಟರ್ 2 ಚಿತ್ರದ ವೀಕ್ಷಣೆಗಳ ಮಹಾ ದಾಖಲೆಯನ್ನು ಮುರಿಯಬೇಕಿದೆ. ಅಷ್ಟೇ ಅಲ್ಲದೇ ಚಾರ್ಲಿ 777, ವಿಕ್ರಾಂತ್ ರೋಣ, ಗಂಧದ ಗುಡಿ ಹಾಗೂ ಕೆಜಿಎಫ್ 2 ಚಿತ್ರಗಳ ಟ್ರೈಲರ್ ಮೊದಲ 24 ಗಂಟೆಗಳಲ್ಲಿ ಪಡೆದುಕೊಂಡಿದ್ದ ಮೆಚ್ಚುಗೆಗಳಿಗಿಂತ ಹೆಚ್ಚಿನ ಲೈಕ್ಸ್ ಪಡೆದುಕೊಳ್ಳಬೇಕಿದೆ.

  ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಕನ್ನಡ ಟ್ರೈಲರ್‌ಗಳು

  ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಕನ್ನಡ ಟ್ರೈಲರ್‌ಗಳು

  ಬಿಡುಗಡೆಗೊಂಡ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ಲೈಕ್ಸ್ ಪಡೆದುಕೊಂಡ ಕನ್ನಡದ ಟ್ರೈಲರ್‌ಗಳು

  1. ಕೆಜಿಎಫ್ ಚಾಪ್ಟರ್ 2 - 7,78,000 ಲೈಕ್ಸ್

  2. ಗಂಧದ ಗುಡಿ - 3,94,000 ಲೈಕ್ಸ್

  3. ವಿಕ್ರಾಂತ್ ರೋಣ - 3,83,000 ಲೈಕ್ಸ್

  4. 777 ಚಾರ್ಲಿ - 3,54,000 ಲೈಕ್ಸ್

  5. ರಾಬರ್ಟ್ - 3,51,000 ಲೈಕ್ಸ್

  ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡ ಟ್ರೈಲರ್‌ಗಳು

  ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡ ಟ್ರೈಲರ್‌ಗಳು

  ಬಿಡುಗಡೆಗೊಂಡ ಮೊದಲ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಕನ್ನಡದ ಟ್ರೈಲರ್‌ಗಳು

  1. ಕೆಜಿಎಫ್ ಚಾಪ್ಟರ್ 2 - 18 ಮಿಲಿಯನ್ ವೀಕ್ಷಣೆಗಳು

  2. ಯಜಮಾನ - 10 ಮಿಲಿಯನ್ ವೀಕ್ಷಣೆಗಳು

  3. ಗಂಧದ ಗುಡಿ - 8.1 ಮಿಲಿಯನ್ ವೀಕ್ಷಣೆಗಳು

  4. ವಿಕ್ರಾಂತ್ ರೋಣ - 7.1 ಮಿಲಿಯನ್ ವೀಕ್ಷಣೆಗಳು

  5. ಯುವರತ್ನ - 6 ಮಿಲಿಯನ್ ವೀಕ್ಷಣೆಗಳು

  English summary
  Kranti trailer target: Needs to break KGF 2 and Gandhad Gudi to become Number 1. Read on
  Friday, January 6, 2023, 18:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X