For Quick Alerts
  ALLOW NOTIFICATIONS  
  For Daily Alerts

  ಕ್ರಾಂತಿ vs ಪಠಾಣ್: ಬೆಂಗಳೂರು ಅಡ್ವಾನ್ಸ್ ಬುಕಿಂಗ್‌ನಲ್ಲಿ ಕ್ರಾಂತಿಗಿಂತ ಪಠಾಣ್‌ಗೆ ಹೆಚ್ಚು ಶೋಸ್!

  By ಫಿಲ್ಮಿಬೀಟ್ ಡೆಸ್ಕ್
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹು ನಿರೀಕ್ಷಿತ್ ಚಿತ್ರ ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ. ಚಿತ್ರ ಇದೇ ತಿಂಗಳ 26ರಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಗೊಳ್ಳುತ್ತಿದ್ದು, 22 ತಿಂಗಳುಗಳ ಬಳಿಕ ದರ್ಶನ್ ನಟನೆಯ ಚಿತ್ರ ತೆರೆ ಕಾಣುತ್ತಿರುವುದರಿಂದ ಕ್ರೇಜ್ ದುಪ್ಪಟ್ಟಾಗಿದೆ.

  ಇನ್ನು ಈ ಬಾರಿ ಕ್ರಾಂತಿ ಚಿತ್ರಕ್ಕೆ ಬಾಕ್ಸ್ ಆಫೀಸ್‌ನಲ್ಲಿ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಎದುರಾಳಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಜನವರಿ 25ರಂದು ತೆರೆ ಕಂಡರೆ, ದರ್ಶನ್ ಅಭಿನಯದ ಕ್ರಾಂತಿ ಚಿತ್ರ ಜನವರಿ 26ರಂದು ತೆರೆಗೆ ಬರಲಿದೆ. ಹೀಗೆ ಒಂದು ದಿನದ ಅಂತರದಲ್ಲಿ ಈ ಎರಡೂ ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಟ್ಟರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಜಿದ್ದಾಜಿದ್ದಿ ಏರ್ಪಡುವುದು ಮಾತ್ರ ಖಚಿತ.

  ಅದರಲ್ಲಿಯೂ ಎಲ್ಲಾ ಭಾಷೆಯ ಚಿತ್ರಗಳನ್ನೂ ವೀಕ್ಷಿಸುವ ಸಿನಿ ರಸಿಕರು ಇರುವ ಬೆಂಗಳೂರಿನಲ್ಲಿ ಈ ಎರಡೂ ಚಿತ್ರಗಳ ನಡುವೆ ಪೈಪೋಟಿ ಉಂಟಾಗುವುದು ಪಕ್ಕಾ ಎನ್ನಬಹುದಾಗಿದ್ದು, ಸದ್ಯ ಬೆಂಗಳೂರಿನಲ್ಲಿ ಈ ಎರಡೂ ಚಿತ್ರಗಳ ಅಡ್ವಾನ್ಸ್ ಬುಕಿಂಗ್ ಆರಂಭಗೊಂಡು ಸಿನಿ ರಸಿಕರು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದಾರೆ. ಹೀಗೆ ಬೆಂಗಳೂರಿನ ಮೊದಲ ದಿನದ ಅಡ್ವಾನ್ಸ್ ಬುಕಿಂಗ್‌ನಲ್ಲಿ ಎರಡೂ ಚಿತ್ರಗಳು ತಮ್ಮ ಮೊದಲ ದಿನ ಪಡೆದುಕೊಂಡಿರುವ ಶೋಗಳ ಸಂಖ್ಯೆಯ ಕುರಿತು ಚರ್ಚೆಗಳು ಆರಂಭವಾಗಿದ್ದು, ಯಾವ ಚಿತ್ರ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

  ಪಠಾಣ್ vs ಕ್ರಾಂತಿ; ಮೊದಲ ದಿನದ ಶೋಗಳು

  ಪಠಾಣ್ vs ಕ್ರಾಂತಿ; ಮೊದಲ ದಿನದ ಶೋಗಳು

  ಪಠಾಣ್ ಚಿತ್ರ ಬೆಂಗಳೂರಿನಲ್ಲಿ ತನ್ನ ಬಿಡುಗಡೆ ದಿನದಂದು ( ಜವನರಿ 25 ) 672 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಇನ್ನು ದರ್ಶನ್ ನಟನೆಯ ಕ್ರಾಂತಿ ಚಿತ್ರ ತನ್ನ ಬಿಡುಗಡೆ ದಿನ ( ಜನವರಿ 26 ) ಬೆಂಗಳೂರಿನಲ್ಲಿ 537 ಪ್ರದರ್ಶನಗಳನ್ನು ಪಡೆದುಕೊಂಡಿದೆ. ಈ ವಿಷಯದ ಕುರಿತು ಚರ್ಚೆಗಳು ಜೋರಾಗಿದ್ದು, ಪಠಾಣ್ ಚಿತ್ರಕ್ಕೆ ತೆರೆದಿರುವಷ್ಟು ಪ್ರದರ್ಶನಗಳನ್ನು ಕ್ರಾಂತಿ ಚಿತ್ರಕ್ಕೇಕೆ ತೆರೆದಿಲ್ಲ ಎಂಬ ಅಸಮಾಧಾನ ಮೂಡಿದೆ. ಇನ್ನು ಎರಡೂ ಚಿತ್ರಗಳೂ ಬೇರೆ ಬೇರೆ ದಿನ ಬಿಡುಗಡೆಯಾಗುತ್ತಿದ್ದರೂ ಹಿಂದಿ ಚಿತ್ರಕ್ಕಿಂತ ಕನ್ನಡ ಚಿತ್ರದ ಮುಂಗಡ ಬುಕಿಂಗ್‌ಗೆ ಕಡಿಮೆ ಪ್ರದರ್ಶನವನ್ನು ತೆರೆದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

  ಕ್ರಾಂತಿ ಬಿಡುಗಡೆ ದಿನ ಪಠಾಣ್ ಶೋಸ್‌ನಲ್ಲಿ ಭಾರೀ ಇಳಿಕೆ

  ಕ್ರಾಂತಿ ಬಿಡುಗಡೆ ದಿನ ಪಠಾಣ್ ಶೋಸ್‌ನಲ್ಲಿ ಭಾರೀ ಇಳಿಕೆ

  ಇನ್ನು ಕ್ರಾಂತಿ ಬಿಡುಗಡೆಯಾಗಲಿರುವ ದಿನ ಅಂದರೆ ಜನವರಿ 26ರಂದು ಬೆಂಗಳೂರಿನಲ್ಲಿ ಪಠಾಣ್ ಚಿತ್ರಕ್ಕೆ ಸದ್ಯ 357 ಪ್ರದರ್ಶನಗಳು ಮಾತ್ರ ಲಭಿಸಿದ್ದು, ಪಠಾಣ್ ತೆರೆಕಂಡ ಮರುದಿನವೇ ಬೆಂಗಳೂರಿನಲ್ಲಿ ತನ್ನ ಅರ್ಧದಷ್ಟು ಶೋಗಳನ್ನು ಕ್ರಾಂತಿ ಚಿತ್ರದ ಪ್ರಭಾವದಿಂದ ಕಳೆದುಕೊಳ್ಳಲಿದೆ. ಇನ್ನು ಬೆಂಗಳೂರಿನಲ್ಲಿ ಮಾತ್ರವಲ್ಲದೇ ಮೈಸೂರು, ಹುಬ್ಬಳ್ಳಿ ಹಾಗೂ ರಾಜ್ಯದ ಇತರೆ ನಗರಗಳಲ್ಲೂ ಪಠಾಣ್ ಚಿತ್ರ ಕ್ರಾಂತಿ ಚಿತ್ರದ ಬಿಡುಗಡೆಯ ದಿನ ಅನೇಕ ಪ್ರದರ್ಶನಗಳನ್ನು ಕಳೆದುಕೊಂಡು ಎರಡನೇ ದಿನಕ್ಕೆ ತೀವ್ರ ಕುಸಿತ ಕಾಣಲಿದೆ.

  ಪಠಾಣ್ ಸಿಂಗಲ್ ರಿಲೀಸ್, ಕ್ರಾಂತಿಗೆ ಪೈಪೋಟಿ

  ಪಠಾಣ್ ಸಿಂಗಲ್ ರಿಲೀಸ್, ಕ್ರಾಂತಿಗೆ ಪೈಪೋಟಿ

  ಇನ್ನು ಕ್ರಾಂತಿಗೂ ಮುನ್ನ ಪಠಾಣ್ ಬಿಡುಗಡೆಯಾಗುವುದರಿಂದ, ಅದರಲ್ಲೂ ಬುಧವಾರವಾದ ಕಾರಣದಿಂದ, ಆ ದಿನದಂದು ಬೇರೆ ಚಿತ್ರಗಳ ಬಿಡುಗಡೆ ಇಲ್ಲದೇ ಇರುವುದರಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ ಎನ್ನಬಹುದು. ಇನ್ನು ಕ್ರಾಂತಿ ಚಿತ್ರ ಪಠಾಣ್ ಬಳಿಕ ಬಿಡುಗಡೆಯಾಗಲಿರುವ ಕಾರಣ ಸದ್ಯಕ್ಕೆ ಕಡಿಮೆ ಶೋಗಳನ್ನು ಪಡೆದುಕೊಂಡಿದೆ. ಆದರೆ ಬಿಡುಗಡೆಯ ಹಿಂದಿನ ದಿನ ಬೆಂಗಳೂರಿನಲ್ಲಿ 800ಕ್ಕೂ ಅಧಿಕ ಶೋಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

  English summary
  Kranti vs Pathaan: Pathaan overtakes Kranti in Bengaluru advance bookings. Read on
  Monday, January 23, 2023, 15:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X