»   » ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಂಗೊಳ್ಳಿ ರಾಯಣ್ಣ

ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಂಗೊಳ್ಳಿ ರಾಯಣ್ಣ

Posted By:
Subscribe to Filmibeat Kannada
ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಂದರೆ ಕಲಾತ್ಮಕ ಚಿತ್ರಗಳದ್ದೇ ಮೇಲುಗೈ. ಆದರೆ ಈ ಬಾರಿಯ 5ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸೇರಿದಂತೆ ಹಲವು ಕಮರ್ಷಿಯಲ್ ಚಿತ್ರಗಳಿಗೂ ಮಣೆಹಾಕಲಾಗಿದೆ.

ಗುರುವಾರ (ಡಿಸೆಂಬರ್ 20) 5ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (BIFFES-5) ಸನ್ಮಾನ್ಯ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ಚಾಲನೆ ನೀಡಿದರು. ಈ ಬಾರಿಯ ಚಲನಚಿತ್ರೋತ್ಸವದಲ್ಲಿ 50ಕ್ಕೂ ಹೆಚ್ಚು ದೇಶಗಳ 140 ಚಿತ್ರಗಳು ಪ್ರದರ್ಶನ ಕಾಣುತ್ತಿವೆ.

ಈ ಬಾರಿಯ ಚಿತ್ರೋತ್ಸವಕ್ಕೆ ಕರ್ನಾಟಕ ಸರ್ಕಾರ ರು.2 ಕೋಟಿ ಹವಣವನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 20ರಿಂದ 27ರವರೆಗೆ ಚಿತ್ರೋತ್ಸವ ನಡೆಯಲಿದೆ. ಇದರ ಜೊತೆಗೆ ಸೆಮಿನಾರ್ ಗಳು, ಆಸಕ್ತರಿಗೆ ತರಗತಿಗಳು, ಸಿನಿಮಾ ಬಗ್ಗೆ ಚರ್ಚೆ, ಸಂವಾದ ವಿವಿಧ ಚಟುವಟಿಕೆಗಳು ನಡೆಯಲಿವೆ.

ಈ ಬಾರಿಯ ಚಿತೋತ್ಸವದಲ್ಲಿ 'ಸಂಗೊಳ್ಳಿ ರಾಯಣ್ಣ' ಚಿತ್ರದ ಜೊತೆಗೆ ಕೂರ್ಮಾವತಾರ, ನರಸಜ್ಜನ ನರ್ಸರಿ, ಪ್ರಸಾದ್, ಕಂಸಾಳೆ ಕೈಸಾಳೆ, ಶಿಕಾರಿ, ಬಾಲ್ ಪೆನ್ (ಚಿತ್ರವಿಮರ್ಶೆ ಓದಿ), ಭಾಗೀರತಿ, ಒಲವಿನ ಓಲೆ ಚಿತ್ರಗಳು ಪ್ರದರ್ಶನ ಕಾಣುತ್ತಿವೆ. ಇದರ ಜೊತೆಗೆ ಕೊಂಕಣಿ, ತುಳು ಚಿತ್ರಗಳು ಪ್ರದರ್ಶನ ಕಾಣುತ್ತಿವೆ. (ಏಜೆನ್ಸೀಸ್)

English summary
Karnataka Chief Minister Jagadish Shettar inaugurated the fifth edition of Bangalore International Film Festival (BIFFES-5) on Thursday (December 20). BIFFES-5 will screen 140 films selected from 50 countries for which a budget of Rs 2 crore has been sanctioned by the government.
Please Wait while comments are loading...