»   » ಅರ್ಧ ಸೆಂಚುರಿ ಹೊಸ್ತಿಲಲ್ಲಿ ಸಂಗೊಳ್ಳಿ ರಾಯಣ್ಣ

ಅರ್ಧ ಸೆಂಚುರಿ ಹೊಸ್ತಿಲಲ್ಲಿ ಸಂಗೊಳ್ಳಿ ರಾಯಣ್ಣ

Posted By:
Subscribe to Filmibeat Kannada
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ಅರ್ಧ ಸೆಂಚುರಿ ಹೊಸ್ತಿಲಲ್ಲಿದೆ. ಈಗಾಗಲೆ ಚಿತ್ರ 45 ದಿನಗಳನ್ನು ಪೂರೈಸಿದ್ದು ಕೆಲವೇ ದಿನಗಳಲ್ಲಿ ಅರ್ಧ ಸೆಂಚುರಿ ಬಾರಿಸಲಿದೆ.

ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಿಗೂ ಕನ್ನಡ ಚಿತ್ರಗಳಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಪರಿಸ್ಥಿತಿ ಹೀಗಿದ್ದರೂ ಸಂಗೊಳ್ಳಿ ರಾಯಣ್ಣ ಚಿತ್ರ ಪಿವಿಆರ್, ರಾಕ್ ಲೈನ್ ಸಿನಿಮಾಸ್, ಗೋಪಾಲನ್ ಸಿನಿಮಾಸ್, ಐನಾಕ್ಸ್ ಚಿತ್ರಮಂದಿರಗಳಲ್ಲಿ ಅಲುಗಾಡದಿರುವುದು ವಿಶೇಷ.

ಇನ್ನು ಉಳಿದಂತೆ ಬೆಂಗಳೂರಿನ ನರ್ತಕಿ ಹಾಗೂ ಪ್ರಸನ್ನ ಚಿತ್ರಮಂದಿರಗಳಲ್ಲಿ ಪ್ರತಿದಿನ ನಾಲ್ಕು ಪ್ರದರ್ಶನಗಳನ್ನು ಕಾಣುತ್ತಿದೆ. ಪರಭಾಷಾ ಚಿತ್ರಗಳ ಪೈಪೋಟಿ ನಡುವೆಯೂ 'ರಾಯಣ್ಣ' ಕಲೆಕ್ಷನ್ ತಾಳ ತಪ್ಪಿಲ್ಲ. ರಾಜ್ಯದ 80ಕ್ಕೂ ಅಧಿಕ ಚಿತ್ರಗಮಂದಿರಗಳಲ್ಲಿ ಸಂಗೊಳ್ಳಿ ರಾಯಣ್ಣ ಅರ್ಧ ಶತಕ ಆಚರಿಸಿಕೊಳ್ಳುತ್ತಿದ್ದಾನೆ.

ಒಟ್ಟು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಈ ಚಿತ್ರ ವಿವಾದಕ್ಕೂ ಗುರಿಯಾಗಿತ್ತು. ಐತಿಹಾಸಿಕ ಚಿತ್ರದಲ್ಲಿ ಕೆಲವೊಂದು ಸನ್ನಿವೇಶಗಳನ್ನು ಅನಾವಶ್ಯಕವಾಗಿ ತುರುಕಲಾಗಿದೆ. ನಾಯಕಿ ಜೊತೆ 'ರಾಯಣ್ಣ'ನ ಡ್ಯುಯೆಟ್ ಅವಶ್ಯಕತೆ ಇರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು.

ದರ್ಶನ್ ಸಾರಥ್ಯದಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರತಂಡ ವಿಜಯಯಾತ್ರೆಯನ್ನೂ ರಾಜ್ಯದಾದ್ಯಂತ ನಡೆಸಿತು. ಇದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ಈ ವಿಜಯಯಾತ್ರೆಯನ್ನು ಕೈಬಿಡಲಾಯಿತು. ದರ್ಶನ್ ಅವರ ವೃತ್ತಿಜೀವನದಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರ ಮತ್ತೊಂದು ಮೈಲಿಗಲ್ಲು ಎನ್ನಬಹುದು. (ಒನ್ಇಂಡಿಯಾ ಕನ್ನಡ)

English summary
Challenging Star Darshan lead Kannada film Krantiveera Sangolli Rayanna running successfully towards 50 days. The film showing in 80 plus theaters. A historical biopic Kannada film directed by Naganna and produced by Anand Appugol the business expectations have touched the sky.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada