»   » 'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ ಕೃಷಿ ರಿಜೆಕ್ಟ್ ಮಾಡಿದ ಚಿತ್ರಗಳೆಷ್ಟು?

'ಬಿಗ್ ಬಾಸ್' ಮನೆಯಿಂದ ಆಚೆ ಬಂದ್ಮೇಲೆ ಕೃಷಿ ರಿಜೆಕ್ಟ್ ಮಾಡಿದ ಚಿತ್ರಗಳೆಷ್ಟು?

Posted By:
Subscribe to Filmibeat Kannada
ಕೃಷಿ ತಾಪಂಡ ಇದುವರೆಗೂ ರಿಜೆಕ್ಟ್ ಮಾಡಿರುವುದು 27 ಸಿನಿಮಾಗಳು | ಯಾಕ್ ಗೊತ್ತಾ? | Oneindia Kannada

'ಅಕಿರ', 'ಕಹಿ' ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ಕೃಷಿ ತಾಪಂಡ 'ಬಿಗ್ ಬಾಸ್' ಮನೆಯಲ್ಲಂತೂ, ಸದಾ ಕಾಲ ಅಡುಗೆ ಮನೆಯಲ್ಲಿದ್ದುಕೊಂಡು ಆಟ ಆಡಿದ್ದು ನಿಮಗೆ ನೆನಪಿರಬಹುದು.

'ಬಿಗ್ ಬಾಸ್' ಮನೆಯಿಂದ ಹೊರ ಬಂದ್ಮೇಲೆ, ಕೃಷಿ ತಾಪಂಡಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಬಂದ ಆಫರ್ ಗಳನ್ನೆಲ್ಲ ಒಪ್ಪಿಕೊಳ್ಳದೆ, ಅಳೆದು-ತೂಗಿ ಚಾಯ್ಸ್ ಮಾಡುತ್ತಿದ್ದಾರೆ ನಟಿ ಕೃಷಿ ತಾಪಂಡ.

ನಟಿ ಕೃಷಿ ತಾಪಂಡ ಬದುಕಿನ ಅತಿ ದೊಡ್ಡ ಗುಟ್ಟು 'ಬಿಗ್ ಬಾಸ್' ಮನೆಯಲ್ಲಿ ರಟ್ಟು.!

ತುಂಬಾ ಚ್ಯೂಸಿ ಆಗಿರುವ ಕೃಷಿ ಸರಿ ಸುಮಾರು 27 ಸ್ಕ್ರಿಪ್ಟ್ ಗಳನ್ನು ಕೇಳಿ ರಿಜೆಕ್ಟ್ ಮಾಡಿದ್ದಾರೆ. ಇದೀಗ ಒಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ ಕೃಷಿ. ಆ ಚಿತ್ರವೇ 'ರೂಪಾಯಿ'. ಯುವ ನಿರ್ದೇಶಕ ವಿನೋದ್ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಸಿನಿಮಾ ಇದು. ಡೈರೆಕ್ಷನ್ ಜವಾಬ್ದಾರಿ ಹೊತ್ತುಕೊಂಡಿರುವ ವಿನೋದ್ 'ರೂಪಾಯಿ' ಹೀರೋ ಕೂಡ ಹೌದು.

Krishi Thapanda to play lead in Kannada Film Rupayi

ನೀವು 'ಇಷ್ಟು' ಸಂಬಳ ಕೊಟ್ಟರೆ, ನಟಿ ಕೃಷಿ ನಿಮ್ಮ ಮನೆ ಪಾತ್ರೆ ತೊಳೆಯುತ್ತಾರೆ.!

ಏಪ್ರಿಲ್ ನಲ್ಲಿ 'ರೂಪಾಯಿ' ಸಿನಿಮಾ ಸೆಟ್ಟೇರಲಿದ್ದು, ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿ ಕೃಷಿ ತಾಪಂಡ ನಟಿಸಲಿದ್ದಾರೆ. ಸಿನಿಮಾದಲ್ಲಿ ಸ್ಟಂಟ್ ಗಳನ್ನೂ ಮಾಡಲಿದ್ದಾರಂತೆ ಕೃಷಿ.

'ರೂಪಾಯಿ' ಚಿತ್ರದ ಬಗ್ಗೆ ಹೆಚ್ಚಿನ ಅಪ್ ಡೇಟ್ಸ್ ನೀಡ್ತಾಯಿರ್ತೀವಿ, ಫಿಲ್ಮಿಬೀಟ್ ಕನ್ನಡ ಓದುತ್ತಿರಿ.

English summary
Kannada Actress Krishi Thapanda, of Bigg Boss Kannada 5 to play lead in Kannada Film Rupayi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X