ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಮತ್ತೊಂದು ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. 'ವರ್ತಮಾನ' ಚಿತ್ರದ ನಂತರ 'ಕೃಷ್ಣ ತುಳಸಿ' ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ.
ವಿಶೇಷ ಅಂದರೆ, ಈ ಸಿನಿಮಾದಲ್ಲಿ ಸಂಜಾರಿ ವಿಜಯ್ ಅಂಧನ ಪಾತ್ರ ಮಾಡಿದ್ದಾರೆ. ಪ್ರತಿ ಸಿನಿಮಾದಲ್ಲಿ ಬೇರೆ ಬೇರೆ ರೀತಿಯ ಪ್ರಯೋಗಾತ್ಮಕ ಪಾತ್ರಗಳನ್ನು ಮಾಡುವ ಸಂಚಾರಿ ವಿಜಯ್ ಮತ್ತೆ ಆ ಕೆಲಸವನ್ನು ಮುಂದುವರೆಸಿದ್ದಾರೆ. ಕಣ್ಣು ಕಾಣದ ಒಬ್ಬ ಹುಡುಗ ಇಲ್ಲಿ ಟ್ರಾವೆಲ್ ಗೈಡ್ ಆಗಿರುತ್ತಾನೆ. ಈ ಹುಡುಗನ ಸುತ್ತ ಸಿನಿಮಾದ ಕಥೆ ಇದೆ. ಸಂಚಾರಿ ವಿಜಯ್ ಪ್ರೇಯಸಿಯಾಗಿ ಮೇಘಶ್ರೀ ಕಾಣಿಸಿಕೊಂಡಿದ್ದಾರೆ.
'ಕೃಷ್ಣ ತುಳಸಿ' ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಮ್ಯೂಸಿಗ್ ಗೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರದ ಟ್ರೇಲರ್ ಸಿನಿಮಾದ ಬಗ್ಗೆ ಕುತೂಹಲವನ್ನು ಹುಟ್ಟುಹಾಕಿದೆ. ಸಿನಿಮಾ ಚಿತ್ರೀಕರಣವನ್ನು ಮೈಸೂರು ಮತ್ತು ಮಡಕೇರಿಗಳಲ್ಲಿ ನಡೆಸಲಾಗಿದೆ. ಸುಕೇಶ್ ನಾಯಕ್ ನಿರ್ದೇಶನ, ಕಿರಣ್ ರವೀಂದ್ರನಾಥ್ ಸಂಗೀತ ಚಿತ್ರದಲ್ಲಿದೆ. ಇನ್ನು ಕೃಷ್ಣ ತುಳಸಿ' ಸಿನಿಮಾ ಇದೇ ಶುಕ್ರವಾರ ಅದರೆ ಎಪ್ರಿಲ್ 20ಕ್ಕೆ ರಿಲೀಸ್ ಆಗುತ್ತಿದೆ.
ನೇತ್ರದಾನ ಮಾಡಲು ಮುಂದಾದ ನಟ ಸಂಚಾರಿ ವಿಜಯ್
ಅಂದಹಾಗೆ, ಈ ಪಾತ್ರದಿಂದ ಸ್ಪೂರ್ತಿ ಪಡೆದಿರುವ ನಾಯಕ ಸಂಚಾರಿ ವಿಜಯ್ ನೇತ್ರದಾನ ಮಾಡಲು ಮುಂದಾಗಿದ್ದಾರೆ.
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ | Subscribe to Kannada Filmibeat.