»   » ರಿಯಲ್ ಸ್ಟಾರ್ 'ಉಪ್ಪಿ 2' ಜತೆ ರಷ್ಯನ್ ಕೇಸರಿಬಾತ್

ರಿಯಲ್ ಸ್ಟಾರ್ 'ಉಪ್ಪಿ 2' ಜತೆ ರಷ್ಯನ್ ಕೇಸರಿಬಾತ್

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ 'ಉಪ್ಪಿ 2' ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಈ ಮೂಲಕ ರಿಯಲ್ ಸ್ಟಾರ್ ಜೊತೆ ಉಪ್ಪಿಟ್ಟು ಸವಿಯಲಿರುವ ಚೆಲುವೆ ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಜುಲೈ ತಿಂಗಳಲ್ಲಿ ಸೆಟ್ಟೇರಲಿರುವ ಚಿತ್ರದ ಬಗ್ಗೆ ಉಪ್ಪಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ರಷ್ಯಾದ ಬೆಡಗಿ ಹಾಗೂ ರೂಪದರ್ಶಿ ಕ್ರಿಸ್ಟಿನಾ ಅಖೀವಾ ಅವರನ್ನು ನಾಯಕಿಯನ್ನಾಗಿ ಉಪೇಂದ್ರ ಆಯ್ಕೆ ಮಾಡಿದ್ದಾರೆ. ಈ ಹಿಂದೆ ವಿದ್ಯಾಬಾಲನ್ ಹಾಗೂ ಕತ್ರಿನಾ ಕೈಫ್ ಹೆಸರುಗಳು ಕೇಳಿಬಂದಿದ್ದವು. ಬಾಲಿವುಡ್ ನ 'ಯಮಲಾ ಪಗಲಾ ದೀವಾನಾ 2' ಚಿತ್ರದಲ್ಲಿ ಕ್ರಿಸ್ಟಿನಾ ಅಭಿನಯಿಸಿದ್ದಾರೆ. [ಉಪ್ಪಿಟ್ಟು ಉಪೇಂದ್ರ : ವಿಶೇಷ ಸಂದರ್ಶನ]

ಸನ್ನಿ ಡಿಯೋನ್ ಹಾಗೂ ಬಾಬ್ಬಿ ಡಿಯೋಲ್ ಅಭಿನಯದ ಚಿತ್ರದಲ್ಲಿ ಅವರ ತಂದೆ ಧರ್ಮೇಂದ್ರ ಸಹ ಬಣ್ಣ ಹಚ್ಚಿದ್ದಾರೆ. ಆಳವಾಗಿ ಆಲೋಚಿಸಿ ತಮ್ಮ ಚಿತ್ರಕ್ಕೆ ಈ ರಷ್ಯನ್ ಬ್ಯೂಟಿಯನ್ನು ಆಯ್ಕೆ ಮಾಡಿದ್ದಾರೆ ಉಪೇಂದ್ರ. ಒಟ್ಟಾರೆಯಾಗಿ ಉಪ್ಪಿಟ್ಟು ಜೊತೆ ಕೇಸರಿಬಾತ್ ಸಿಕ್ಕಂತಾಗಿದೆ.

ಕನ್ನಡದ ನಾಯಕಿ ಬಿಟ್ಟು ರಷ್ಯನ್ ಬ್ಯೂಟಿಗೆ ಗಾಳ

ಕನ್ನಡದ ನಾಯಕಿಯನ್ನು ಬಿಟ್ಟು ಈ ರಷ್ಯನ್ ಬ್ಯೂಟಿಗೆ ಏಕೆ ಗಾಳ ಹಾಕಿದರಪ್ಪಾ ಉಪ್ಪಿ ಎಂದು ಅವರ ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂತಾಗಿದೆ. ಸದ್ಯಕ್ಕೆ ಕ್ರಿಸ್ಟಿನಾ ಅವರು ತೆಲುಗಿನ ಗಾಳಿಪಟಂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

2015ರ ವೇಳೆಗೆ ಪ್ರೇಕ್ಷಕರ ಕಣ್ಮುಂದೆ ಉಪ್ಪಿ 2

ಗುರುಕಿರಣ ಸಂಗೀತ ಸಂಯೋಜನೆ ಮಾಡಿರುವ ಚಿತ್ರದ ಹಾಡುಗಳನ್ನು ಈಗಾಗಲೆ ರೆಕಾರ್ಡ್ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2015ರ ವೇಳೆಗೆ ಉಪ್ಪಿ 2 ಚಿತ್ರ ಪ್ರೇಕ್ಷಕರ ಕಣ್ಮುಂದೆ ಬರಲಿದೆ.

ಮೂರು ಶೇಡ್ ಗಳುಳ್ಳ ಪಾತ್ರದಲ್ಲಿ ಕ್ರಿಸ್ಟಿನಾ

ಇನ್ನು ಕ್ರಿಸ್ಟಿನಾ ಅವರದು ಉಪ್ಪಿ 2 ಚಿತ್ರದಲ್ಲಿ ಮೂರು ಶೇಡ್ ಗಳುಳ್ಳ ಪಾತ್ರವಂತೆ. ಅದು ಏನು ಎಂಬುದು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆಯ ತನಕ ಕಾಯಲೇಬೇಕು. ಇಬ್ಬರು ನಾಯಕಿಯರಿರುವ ಉಪ್ಪಿ 2 ಚಿತ್ರದ ಇನ್ನೊಬ್ಬ ನಾಯಕಿಗಾಗಿ ಹುಡುಕಾಟ ನಡೆಯುತ್ತಿದೆ.

ಕಥೆ ಕೇಳಿ ಥ್ರಿಲ್ ಆದ ರಷ್ಯನ್ ಕೇಸರಿಬಾತ್

ಉಪ್ಪಿ 2 ಚಿತ್ರದ ಕಥೆ ಕೇಳಿದ ಕೂಡಲೆ ಕ್ರಿಸ್ಟಿನಾ ಅವರು ಸಖತ್ ಥ್ರಿಲ್ ಆದರಂತೆ. ತನ್ನ ವೃತ್ತಿ ಬದುಕಿನಲ್ಲಿ ಕ್ರಿಸ್ಟಿನಾ ಅಭಿನಯಿಸುತ್ತಿರುವ ಮೂರನೇ ಚಿತ್ರ ಇದಾಗಿದೆ.

ಸದ್ಯಕ್ಕೆ ಸೈಲೆಂಟ್ ಗೆ ಶರಣಾದ ಉಪೇಂದ್ರ

'ಯಮಲಾ ಪಗಲಾ ದೀವಾನಾ 2' ಚಿತ್ರ ನೋಡಿದ ಮೇಲೆ ಉಪೇಂದ್ರ ಅವರ ತಲೆಯಲ್ಲಿ ಇವಳೇ ಇವಳೇ ತನ್ನ ಚಿತ್ರದ ಹೀರೋಯಿನ್ ಅನ್ನಿಸಿತಂತೆ. ಕ್ರಿಸ್ಟಿನಾ ಪಾತ್ರದ ಬಗ್ಗೆ ಸದ್ಯಕ್ಕೆ ಉಪೇಂದ್ರ ಮಾತ್ರ ಸೈಲೆಂಟ್ ಗೆ ಶರಣಾಗಿದ್ದಾರೆ.

English summary
Superstar and Realstar Upendra's upcoming directorial venture Uppi 2 is making a huge buzz even from its pre production stage. The movie, which is all set to go on floors in July 2014, has zeroed in Russian actress turned model Kristina Akheeva to play the female lead in the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada