»   » ಸಾವಿನಲ್ಲೂ ಸಾರ್ಥಕತೆ ಮೆರೆದ ಕೆ.ಎಸ್ ಎಲ್ ಸ್ವಾಮಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಕೆ.ಎಸ್ ಎಲ್ ಸ್ವಾಮಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕೆ.ಎಸ್ ಎಲ್ ಸ್ವಾಮಿ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ) ಅವರ ಕಣ್ಮರೆ ಕನ್ನಡ ಚಿತ್ರರಂಗದ ಹಲವಾರು ದಿಗ್ಗಜರ ಕಣ್ಣಂಚನ್ನು ಒದ್ದೆಯಾಗಿಸಿದೆ. ಕೆ.ಎಸ್.ಎಲ್ ಸ್ವಾಮಿ ಅವರು ತಾವು ಇಷ್ಟಪಟ್ಟಂತೆ ತಮ್ಮ ಅಮೂಲ್ಯವಾದ ಕಣ್ಣುಗಳನ್ನು ದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ತಮ್ಮ ದೇಹವನ್ನು ಸಹ ದಾನ ಮಾಡಲಿದ್ದಾರೆ.

ಮಂಗಳವಾರ ಮುಂಜಾನೆ 2 ಘಂಟೆ ಸುಮಾರಿಗೆ ಹೊರಮಾವುವಿನಲ್ಲಿರುವ ನಿವಾಸದಲ್ಲಿ ವಿಧಿವಶರಾಗಿದ್ದು, ಅವರ ಇಚ್ಛೆಯಂತೆ ಕುಟುಂಬದವರು ಕಣ್ಣುಗಳನ್ನು ದಾನ ಮಾಡಿದ್ದಾರೆ. ಬಹಳ ಹಿಂದೆಯೇ ಕುಟುಂಬದವರ ಬಳಿ ನೇತ್ರದಾನ ಮಾಡಬೇಕೆಂದು ಕೆ.ಎಸ್.ಎಲ್ ಸ್ವಾಮಿ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ) ಅವರು ಇಚ್ಛೆ ವ್ಯಕ್ತಪಡಿಸಿದ್ದರು, ಅದರಂತೆ ನೇತ್ರದಾನ ಮಾಡಲಾಯಿತು.[ಹಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ವಿಧಿವಶ]

KSL Swamy's Corpse Donated to MS Ramaiah Hospital

ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗೆ ನೆರವಾಗುವಂತೆ ತಮ್ಮ ದೇಹವನ್ನು ಎಮ್ ಎಸ್ ರಾಮಯ್ಯ ಆಸ್ಪತ್ರೆಗೆ ದಾನ ಮಾಡಲು ಅವರು ಇಚ್ಚೆ ವ್ಯಕ್ತಪಡಿಸಿದ್ದರು. ಅದರಂತೆ ಆಸ್ಪತ್ರೆಗೆ ದೇಹವನ್ನು ದಾನ ಮಾಡಲಾಗುತ್ತದೆ ಎಂದು ಕೆ.ಎಸ್.ಎಲ್ ಸ್ವಾಮಿ ಅವರ ಮ್ಯಾನೇಜರ್ ರವಿ ಸುಬ್ರಮಣ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.[ಕೆಎಸ್ ಎಲ್ ಸ್ವಾಮಿ ಧಾರಾವಾಹಿ ಶ್ರೀ ಶಂಕರ ದಿಗ್ವಿಜಯ]

ಅಂತಿಮ ದರ್ಶನ: ಸ್ವಾಮಿ ಅವರ ಪ್ರಾರ್ಥಿವ ಶರೀರವನ್ನು ರವೀಂದ್ರ ಕಲಾ ಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಮಧ್ಯಾಹ್ನ 12 ರಿಂದ ಸಂಜೆ 6ರ ವರೆಗೆ ಅಂತಿಮ ದರ್ಶನ ಪಡೆಯಬಹುದು ಎಂದು ಕೆ.ಎಸ್.ಎಲ್. ಸ್ವಾಮಿ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ) ಅವರ ಪತ್ನಿ ಬಿ.ವಿ ರಾಧಾ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ. ಅಂತಿಮ ದರ್ಶನದ ಬಳಿಕ ಎಮ್ ಎಸ್ ರಾಮಯ್ಯ ಆಸ್ಪತ್ರೆಗೆ ದೇಹವನ್ನು ದಾನ ಮಾಡಲಾಗುವುದು.[ಹಿರಿಯ ನಿರ್ದೇಶಕ ಕೆಎಸ್ಎಲ್ ಸ್ವಾಮಿ ಆರೋಗ್ಯ ಸ್ಥಿರ]

KSL Swamy's Corpse Donated to MS Ramaiah Hospital

ಕನ್ನಡ ಚಿತ್ರರಂಗದ ದಿಗ್ಗಜ ಪುಟ್ಟಣ್ಣ ಕಣಗಾಲ್ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಕೆ.ಎಸ್.ಎಲ್ ಸ್ವಾಮಿ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ) ಅವರು ನಟರಾಗಿಯೂ ಮಿಂಚಿದ್ದರು. ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಮಲ್ಲ' ಚಿತ್ರದಲ್ಲಿ ರವಿಚಂದ್ರನ್ ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದರು. ಅಲ್ಲದೇ ರವಿ ಹೆಸರಿನಲ್ಲಿಯೂ ಕೆ.ಎಸ್.ಎಲ್ ಸ್ವಾಮಿ ಅವರು ಚಿತ್ರರಂಗದಲ್ಲಿ ಚಿರಪರಿಚಿತರಾಗಿದ್ದರು. ಮರೆಯಾದ ಮಲಯಮಾರುತಕ್ಕೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ.

English summary
KSL Swamy's Corpse Donated to MS Ramaiah Hospital. Senior Kannada film director Kikkeri Shamanna Lakshminarasimha Swamy (K.S.L.Swamy (77)) passed away in Bengaluru on October 20, Tuesday early morning.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada