ಕನ್ನಡದಲ್ಲಿ ಮೂಡಿದ 'ಅನುರಾಗ ಸಂಗಮ'ಕ್ಕೆ 25 ವರ್ಷದ ಸಂಭ್ರಮ
ಕುಮಾರ್ ಗೋವಿಂದ್, ರಮೇಶ್ ಅರವಿಂದ್ ಹಾಗೂ ಸುಧಾರಾಣಿ ನಟನೆಯಲ್ಲಿ ಮೂಡಿಬಂದಿದ್ದ ಸೂಪರ್ ಹಿಟ್ ಚಿತ್ರ 'ಅನುರಾಗ ಸಂಗಮ' ಬಿಡುಗಡೆಯಾಗಿ 25 ವರ್ಷ ಕಳೆದಿದೆ.
ಸ್ಯಾಂಡಲ್‌ವುಡ್‌ನಲ್ಲಿ 25 ವರ್ಷ ಪೂರೈಸಿದ ಹಿಟ್ ಚಿತ್ರವನ್ನು ಸ್ಮರಿಸುವ ಸಮಯ ಇದಾಗಿದೆ. ಈ ಸಿನಿಮಾದಿಂದ ನಟ ಕುಮಾರ್ ಗೋವಿಂದ್ ಹಾಗೂ ರಮೇಶ್ ಅರವಿಂದ್‌ಗೆ ಒಳ್ಳೆಯ ಹೆಸರು ಸಹ ಸಿಕ್ತು.
ಕನ್ನಡದ 'ಅನುರಾಗ ಸಂಗಮ' ಸಿನಿಮಾ ಚಾರ್ಲಿ ಚಾಪ್ಲಿನ್ ನಟಿಸಿದ್ದ 'ಸಿಟಿ ಲೈಟ್ಸ್' ಚಿತ್ರದಿಂದ ಸ್ಫೂರ್ತಿಗೊಂಡು ತಯಾರಾಗಿತ್ತು. 1995ರಲ್ಲಿ ತೆರೆಕಂಡ ಈ ಸಿನಿಮಾ ಬಳಿಕ ತೆಲುಗಿನಲ್ಲಿ (1997) ಪೆಳ್ಳಿ ಪೆಂಡರಿ, ತಮಿಳಿನಲ್ಲಿ (1999) 'ನಿಲವೇ ಮುಗಂ ಕಾಟು' ಎಂಬ ಹೆಸರಿನಲ್ಲಿ ಬಿಡುಗಡೆಯಾದವು.

ವಿ ಮನೋಹರ್ ಸಂಗೀತ ನಿರ್ದೇಶನದಲ್ಲಿ ಬಂದಿದ್ದ ಹಾಡುಗಳು ಸಹ ಸೂಪರ್ ಹಿಟ್ ಆಗಿತ್ತು. ಚಿತ್ರದ ಮೂರು ಹಾಡನ್ನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿದ್ದರು. ಈ ಚಿತ್ರ ಮ್ಯೂಸಿಕಲ್ ಹಿಟ್ ಎಂದೇ ಪರಿಗಣಿಸಲಾಗಿದೆ.
ಡಿ ಗೋವಿಂದಪ್ಪ ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ಬಿ ಸರೋಜಾದೇವಿ, ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ಧನ್, ವಿ ಮನೋಹರ್ ಸಹ ನಟಿಸಿದ್ದರು. ಸುಂದರ್ ನಾಥ್ ಸುವರ್ಣ ಅವರ ಛಾಯಾಗ್ರಹಣ ಹಾಗೂ ಪ್ರಸಾದ್ ಅವರ ಸಂಕಲನವಿತ್ತು.


Click it and Unblock the Notifications











