»   » ಗಣೇಶ್ ಮುಂದೆ ಹೀರೋಯಿನ್ ತುಟಿಗೆ ಮುತ್ತಿಟ್ಟ ದೇವರಾಜ್ ಪುತ್ರ

ಗಣೇಶ್ ಮುಂದೆ ಹೀರೋಯಿನ್ ತುಟಿಗೆ ಮುತ್ತಿಟ್ಟ ದೇವರಾಜ್ ಪುತ್ರ

Posted By:
Subscribe to Filmibeat Kannada
ಪ್ರಣಾಮ್ ದೇವರಾಜ್ ನಿಧಿ ಕುಶಾಲಪ್ಪ ಅಭಿನಯದ ಕುಮಾರಿ 21F ಚಿತ್ರದ ಟೀಸರ್ ರಿಲೀಸ್ | Filmibeat Kannada

ನಟ ದೇವರಾಜ್ ಎರಡನೇ ಪುತ್ರ ಪ್ರಣಾಮ್ ದೇವರಾಜ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತಂದೆ ಮತ್ತು ಅಣ್ಣನ ಹಾದಿಯಲ್ಲಿ ಪ್ರಣಾಮ್ ಕೂಡ ತಮ್ಮ ಸಿನಿಮಾ ಜರ್ನಿ ಶುರು ಮಾಡಿದ್ದಾರೆ. ಅಂದಹಾಗೆ, ಪ್ರಣಾಮ್ ಮೊದಲ ಸಿನಿಮಾದ ಮುಹೂರ್ತ ಕೆಲ ತಿಂಗಳುಗಳ ಹಿಂದೆ ನಡೆದಿತ್ತು.

ಪ್ರಣಾಮ್ 'ಕುಮಾರಿ 21F' ಸಿನಿಮಾದ ಮೂಲಕ ಲಾಂಚ್ ಆಗುತ್ತಿದ್ದಾರೆ. ಅವರ ಮೊದಲ ಸಿನಿಮಾದ ಹಾಡಿನ ಟೀಸರ್ ಇದೀಗ ರಿಲೀಸ್ ಆಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿರುವ ಈ ಟೀಸರ್ ಯೂ ಟ್ಯೂಬ್ ನಲ್ಲಿ ಲಭ್ಯವಿದೆ. ಈ ಚಿತ್ರ ತೆಲುಗಿನ 'ಕುಮಾರಿ 21F' ಚಿತ್ರದ ರಿಮೇಕ್ ಆಗಿದ್ದು, ಸಖತ್ ಹಾಟ್ ದೃಶ್ಯಗಳು ಸಿನಿಮಾದಲ್ಲಿ ಇದೆ.

ಒಬ್ಬ ಯುವಕ ಮತ್ತು ಯುವತಿಯ ಹದಿ ಹರೆಯದ ಭಾವನೆಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಮೊದಲ ಸಿನಿಮಾದಲ್ಲಿಯೇ ತುಟಿಗೆ ಮುತ್ತಿಟ್ಟು ಪ್ರಣಾಮ್ ದೇವರಾಜ್ ಸಖತ್ ಬೋಲ್ಡ್ ನಟನೆ ಮಾಡಿದ್ದಾರೆ. ಮುಂದೆ ಓದಿ..

ಟೀಸರ್ ಬಿಡುಗಡೆ

ಪ್ರಣಾಮ್ ದೇವರಾಜ್ ಅಭಿನಯದ 'ಕುಮಾರಿ 21 F' ಸಿನಿಮಾದ ಹಾಡಿನ ಟೀಸರ್ ರಿಲೀಸ್ ಆಗಿದೆ. ಚಿತ್ರದ ಮೊದಲ ಟೀಸರ್ ಇದಾಗಿದ್ದು, ಸಿಕ್ಕಾಪಟ್ಟೆ ಹಾಟ್ ಆಗಿ ನಟ ಪ್ರಣಾಮ್ ದೇವರಾಜ್ ಮತ್ತು ನಿಧಿ ಕುಶಾಲಪ್ಪ ಕಾಣಿಸಿಕೊಂಡಿದ್ದಾರೆ.

ಹಾಟ್ ಅಭಿನಯ

ನಟ ಪ್ರಣಾಮ್ ದೇವರಾಜ್ ಮತ್ತು ನಿಧಿ ಕುಶಾಲಪ್ಪ ಇಬ್ಬರಿಗೂ ಇದು ಮೊದಲ ಸಿನಿಮಾವಾಗಿದೆ. ಚಿತ್ರದ ಪಾತ್ರಕ್ಕೆ ತಕ್ಕಂತೆ ಅವರು ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಟೀಸರ್ ನಲ್ಲಿ ತುಟಿಗೆ ಮುತ್ತಿಟ್ಟ ದೃಶ್ಯ ಸದ್ದು ಮಾಡುತ್ತಿದೆ.

ಗಣೇಶ್ 'ಚಮಕ್'

ನಟ ಗಣೇಶ್ ಚಿತ್ರದ ಟೀಸರ್ ರಿಲೀಸ್ ಮಾಡಿ ಪ್ರಣಾಮ್ ನಟನೆಯನ್ನು ಹೊಗಳಿದರು. ''ಟೀಸರ್ ತುಂಬ ಚೆನ್ನಾಗಿದೆ. ಪ್ರಣಾಮ್ ತೆರೆ ಮೇಲೆ ಚೆನ್ನಾಗಿ ಕಾಣುತ್ತಾರೆ. ಡ್ಯಾನ್ಸ್ ಸೂಪರ್ ಆಗಿದೆ. ಜೊತೆಗೆ ಇದೇ ರೀತಿ ಎಲ್ಲ ಸಿನಿಮಾದಲ್ಲಿ ಕಿಸ್ ಮಾಡುತ್ತಿರು'' ಎಂದು ಹೇಳಿ ಗಣೇಶ್ ಸಣ್ಣ ಚಮಕ್ ಕೊಟ್ಟರು.

'ಕುಮಾರಿ' ಜೊತೆ ಹೆಜ್ಜೆ ಹಾಕಿದ ದೇವರಾಜ್ 2ನೇ ಪುತ್ರ

ಸಿನಿಮಾದ ಬಗ್ಗೆ

'ಕುಮಾರಿ 21 F' ತೆಲುಗು ಚಿತ್ರದ ರಿಮೇಕ್ ಆಗಿದೆ. ನಟ ಪ್ರಣಾಮ್ ದೇವರಾಜ್ ಮತ್ತು ನಿಧಿ ಕುಶಾಲಪ್ಪ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಮನ್ ವೆಮುಲ ನಿರ್ದೇಶನ ಮಾಡಿದ್ದು, ಸಂಪತಿ ಕುಮಾರ್ ನಿರ್ಮಾಣ ಮಾಡಿದ್ದಾರೆ.

English summary
kannada actor Devaraj son Pranam Devaraj starting Kannada Movie 'Kumari 21F' teaser released. Golden star Ganesh launched 'Kumari 21F' teaser.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X