ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಬಗ್ಗೆ ಈಗಲೂ ಕಾಡ್ತಿದೆ ಗೊಂದಲ.!

Recommended Video

Kurukshetra Movie : ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಪಾತ್ರದ ವಿಷ್ಯಕ್ಕೆ ಗೊಂದಲ

ಕನ್ನಡದ ಮೆಗಾ ಸಿನಿಮಾ ಕುರುಕ್ಷೇತ್ರ ತೆರೆಗೆ ಬರಲು ಸಜ್ಜಾಗಿದ್ದು, ಆಗಸ್ಟ್ 9 ರಂದು ಚಿತ್ರಮಂದಿರಕ್ಕೆ ಬರಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಕುರುಕ್ಷೇತ್ರ ಬರ್ತಿದ್ದು, ದರ್ಶನ್, ನಿಖಿಲ್ ಕುಮಾರ್, ಅರ್ಜುನ್ ಸರ್ಜಾ, ರವಿಚಂದ್ರನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಈಗಾಗಲೇ ದರ್ಶನ್ ಅವರದ್ದು ಒಂದು ಟೀಸರ್, ನಿಖಿಲ್ ಕುಮಾರ್ ಅವರದ್ದು ಒಂದು ಟೀಸರ್, ಎರಡು ಟ್ರೈಲರ್ ಮತ್ತು ಆಡಿಯೋ ರಿಲೀಸ್ ಆಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಟ್ರೈಲರ್ ಬಂದಿದ್ದು, ಈ ಟ್ರೈಲರ್ ನೋಡಿದ್ಮೇಲೆ ನಿಖಿಲ್ ಕುಮಾರ್ ಪಾತ್ರದ ಬಗ್ಗೆ ಗೊಂದಲ ಹೆಚ್ಚಾಗಿದೆ.

ಕುರುಕ್ಷೇತ್ರ ಚಿತ್ರೀಕರಣದ ನಂತರ ನಿಖಿಲ್ ಕುಮಾರ್ ಹೆಚ್ಚಾಗಿ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿಲ್ಲ. ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿಲ್ಲ. ಈ ನಡುವೆ ಅಭಿಮನ್ಯು ಪಾತ್ರಕ್ಕೆ ನಿಖಿಲ್ ಡಬ್ ಮಾಡಿಲ್ಲ ಎಂಬ ಸುದ್ದಿಯೂ ಇತ್ತು. ಇಷ್ಟೆಲ್ಲಾ ಬೆಳವಣಿಗೆಯ ಮಧ್ಯೆ ಈಗ ನಿಖಿಲ್ ಬಗ್ಗೆ ಕಾಡುತ್ತಿರುವ ಗೊಂದಲ ಏನು? ಮುಂದೆ ಓದಿ....

ನಿಖಿಲ್ ಕುಮಾರ್ ಡಬ್ ಮಾಡಿಲ್ಲ.!

ನಿಖಿಲ್ ಕುಮಾರ್ ಡಬ್ ಮಾಡಿಲ್ಲ.!

ಕುರುಕ್ಷೇತ್ರ ಚಿತ್ರದ ಟ್ರೈಲರ್ ನೋಡಿದ್ಮೇಲೆ ಒಂದಂತೂ ಪಕ್ಕಾ ಆಯ್ತು. ಅಭಿಮನ್ಯು ಪಾತ್ರದಲ್ಲಿ ನಟಿಸಿರುವ ನಿಖಿಲ್ ತಮ್ಮ ಪಾತ್ರಕ್ಕೆ ಡಬ್ ಮಾಡಿಲ್ಲ. ನಿಖಿಲ್ ಡಬ್ಬಿಂಗ್ ಮಾಡ್ತಾರಾ ಅಥವಾ ಮಾಡಲ್ವಾ ಎಂಬುದು ಭಾರಿ ಗೊಂದಲ ಸೃಷ್ಟಿಸಿತ್ತು. ಅಂತಿಮವಾಗಿ ಡಬ್ಬಿಂಗ್ ಮಾಡದೇ ನಿರಾಸೆ ಮೂಡಿಸಿದ್ದಾರೆ.

ಟೀಸರ್ ನಲ್ಲಿ ನಿಖಿಲ್ ಧ್ವನಿ ಇತ್ತು

ಟೀಸರ್ ನಲ್ಲಿ ನಿಖಿಲ್ ಧ್ವನಿ ಇತ್ತು

ಕುರುಕ್ಷೇತ್ರ ಚಿತ್ರದ ಟ್ರೈಲರ್ ನಲ್ಲಿ ನಿಖಿಲ್ ಕುಮಾರ್ ಅವರ ಧ್ವನಿ ಇಲ್ಲ. ಆದರೆ, ಅದಕ್ಕೂ ಮುಂಚೆ ನಿಖಿಲ್ ಹುಟ್ಟುಹಬ್ಬಕ್ಕೆ ಬಂದಿದ್ದ ಟೀಸರ್ ನಲ್ಲಿ ''ತಾತ.....ಈ ಯುದ್ಧ ಸ್ವಾಭಿಮಾನದ ಸಂಕೇತ'' ಎಂಬ ಡೈಲಾಗ್ ಹೇಳಿದ್ದರು. ಇದರಲ್ಲಿ ನಿಖಿಲ್ ವಾಯ್ಸ್ ಇತ್ತು. ಸೋ, ಆಗ ಡಬ್ ಮಾಡಿದ್ರಾ, ಈಗ ಟ್ರೈಲರ್ ನಲ್ಲಿ ಯಾಕಿಲ್ಲ? ಕುರುಕ್ಷೇತ್ರ ಮತ್ತು ನಿಖಿಲ್ ಕುಮಾರ್ ನಡುವೆ ಏನಾಗಿದೆ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ.

ನಿಖಿಲ್ ಯಾಕೆ ಡಬ್ ಮಾಡಿಲ್ಲ?

ನಿಖಿಲ್ ಯಾಕೆ ಡಬ್ ಮಾಡಿಲ್ಲ?

ಅಭಿಮನ್ಯು ಪಾತ್ರಕ್ಕೆ ಡಬ್ ಮಾಡಿರುವ ಧ್ವನಿ ನಿಖಿಲ್ ಕುಮಾರ್ ಗೆ ಸೂಕ್ತವಾಗಿ ಹೊಂದಿಕೆಯಾಗಿಲ್ಲ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ. ಅದರ ಬದಲು ನಿಖಿಲ್ ಅವರೇ ಡಬ್ ಮಾಡಬಹುದಿತ್ತು ಎಂಬ ವಾದ ಇದೆ. ಬಟ್, ನಿಖಿಲ್ ಯಾಕೆ ಡಬ್ ಮಾಡಿಲ್ಲ ಎಂಬುದು ಈ ಉತ್ತರ ಸಿಗದ ಪ್ರಶ್ನೆಯಾಗಿದೆ.

ಅಂದು ಮುನಿರತ್ನ ಹೇಳಿದ್ದು ಸುಳ್ಳಾ?

ಅಂದು ಮುನಿರತ್ನ ಹೇಳಿದ್ದು ಸುಳ್ಳಾ?

ಪೌರಾಣಿಕ ಸಿನಿಮಾದಲ್ಲಿ ಸಂಭಾಷಣೆ ಸ್ವಲ್ಪ ಚಾಲೆಂಜಿಂಗ್ ಆಗಿರುವ ಕಾರಣ ನಿಖಿಲ್ ಅವರಿಂದ ಡಬ್ ಮಾಡಿಸದೆ ಇರಬಹುದು ಎಂದು ನೋಡಿದ್ರೆ, ಅಂದು ಮುನಿರತ್ನ ಹೇಳಿದ್ದು ಸುಳ್ಳಾ ಎಂದು ಎನಿಸಿದೇ ಇರಲ್ಲ. ''ರಾ ರಾಜ್ ಕುಮಾರ್ ಅವರಷ್ಟೇ ಕನ್ನಡ ಭಾಷೆಯ ಮೇಲೆ ನಿಖಿಲ್ ಹಿಡಿತ ಹೊಂದಿದ್ದಾರೆ'' ಎಂದು ಹೇಳಿದ್ದರು. ರಾಜ್ ಅವರಷ್ಟು ಭಾಷೆಯ ಮೇಲೆ ಹಿಡಿತ ಹೊಂದಿದ್ದಾರೆ ಎಂದು ಗೊತ್ತಿದ್ದರೂ ಅವರಿಂದ ಯಾಕೆ ಡಬ್ ಮಾಡಿಸಿಲ್ಲ?

More from Filmibeat

English summary
Kannada Actor Nikhil Kumar not dubbed voice for abhimanyu role in Kurukshetra movie. the movie directed by naganna and produced by munirathna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X