»   » ಯುವರಾಜ ಅಭಿಮನ್ಯು ಪರಾಕ್ರಮಕ್ಕೆ ಮನಸೋತ ಕನ್ನಡಿಗರು

ಯುವರಾಜ ಅಭಿಮನ್ಯು ಪರಾಕ್ರಮಕ್ಕೆ ಮನಸೋತ ಕನ್ನಡಿಗರು

Posted By:
Subscribe to Filmibeat Kannada

'ಕುರುಕ್ಷೇತ್ರ' ಸಿನಿಮಾ ದಿನೇ ದಿನೇ ಕ್ರೇಜ್ ಹೆಚ್ಚಿಸುತ್ತಿದೆ. ಸಿನಿಮಾಗಾಗಿ ಬಹು ದಿನದಿಂದ ಕಾಯುತ್ತಿರುವ ಅಭಿಮಾನಿಗಳು ಸದ್ಯ ಚಿತ್ರದ ಟೀಸರ್ ಗಳ ದರ್ಶನ ಪಡೆದು ಖುಷಿ ಆಗಿದ್ದಾರೆ. ಅದರಲ್ಲಿಯೂ ನಿಖಿಲ್ ಕುಮಾರ್ ಅವರ ಟೀಸರ್ ಈಗ ಯೂ ಟ್ಯೂಬ್ ನಲ್ಲಿ ದೊಡ್ಡ ಹಿಟ್ ಆಗಿದೆ.

ವಿಡಿಯೋ : 'ಕುರುಕ್ಷೇತ್ರ'ದ ಯುವರಾಜ ಅಭಿಮನ್ಯು ಟೀಸರ್ ನೋಡಿ

'ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿಮನ್ಯು ಆಗಿ ನಿಖಿಲ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದ ಅವರ ಟೀಸರ್ ಈಗ ದೊಡ್ಡ ಹಿಟ್ ಆಗಿದೆ. ನಿಖಿಲ್ ಅವರ 'ಕುರುಕ್ಷೇತ್ರ' ಟೀಸರ್ ಯೂಟ್ಯೂಬ್ ನಲ್ಲಿ 3 ಮಿಲಿಯನ್ ಹಿಟ್ಸ್ ಪಡೆದಿದೆ. ಇದರ ಜೊತೆ ನೂರಾರೂ ಅಭಿಮಾನಿಗಳು ಅವರ ಪಾತ್ರದ ಬಗ್ಗೆ ಕಮೆಂಟ್ ಮಾಡಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

Kurukshetra Movie teaser reaches 3 million youtube views

ಅಂದಹಾಗೆ, 'ಕುರುಕ್ಷೇತ್ರ' ಸಿನಿಮಾದ ಎರಡನೇ ಟೀಸರ್ ಇದಾಗಿದ್ದು, ನಟ ದರ್ಶನ್ ಟೀಸರ್ ನಂತರ ನಿಖಿಲ್ ಅವರ ಟೀಸರ್ ಬಿಡುಗಡೆ ಮಾಡಲಾಗಿತ್ತು. ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ವಿಶೇಷವಾಗಿ ಸಿನಿಮಾದ ಈ ಟೀಸರ್ ರಿಲೀಸ್ ಆಗಿದ್ದು ವಿಶೇಷವಾಗಿತ್ತು. ಇನ್ನು ಈ ಟೀಸರ್ ಮೂಲಕ ಮತ್ತೆ ಚಿತ್ರದ ಮೇಲೆ ನಿರೀಕ್ಷೆಯನ್ನು ಹುಟ್ಟಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿತ್ತು.

ಟೀಸರ್ ನಿಂದ ನಿರ್ದೇಶಕ ನಾಗಣ್ಣ ಅವರ ಮೇಲೆ ಇದ್ದ ಭರವಸೆ ಇನ್ನಷ್ಟು ಹೆಚ್ಚಾಗಿತ್ತು. ಟೀಸರ್ ನೋಡಿದ ಮೇಲೆ ಅಭಿಮನ್ಯು ಪಾತ್ರಕ್ಕೆ ನಿಖಿಲ್ ಉತ್ತಮ ಆಯ್ಕೆ ಎನಿಸಿತ್ತು. ಚಿತ್ರದ ಸಾಹಸ ದೃಶ್ಯಗಳು ನಿಜಕ್ಕೂ ಮನೋಜ್ಞವಾಗಿತ್ತು. ಅದರಲ್ಲಿಯೂ ನಿಖಿಲ್ ಅಭಿನಯ ಅದ್ಬುತವಾಗಿತ್ತು. ಯುದ್ಧದ ಸನ್ನಿವೇಶಗಳು ಅಭಿಮಾನಿಗಳಿಗೆ ಹೆಚ್ಚು ಥ್ರಿಲ್ ನೀಡಿದ್ದು, 1 ನಿಮಿಷ 38 ಸೆಕೆಂಡ್ ಇರುವ ಈ ಟೀಸರ್ ದೃಶ್ಯಕಾವ್ಯದಂತೆ ಇತ್ತು. ಇನ್ನು ಮುನಿರತ್ನ 'ಕುರುಕ್ಷೇತ್ರ' ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸಿನಿಮಾ ಮಾರ್ಚ್ ತಿಂಗಳ ವೇಳೆಗೆ ರಿಲೀಸ್ ಆಗಲಿದೆ.

English summary
Kannada Actor Nikhil kumar's 'Kurukshetra' Movie teaser reaches 3 million youtube views Nikhil played Abhimanyu role in 'Kurukshetra' Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X