ದರ್ಶನ್ ಕುರುಕ್ಷೇತ್ರದಿಂದ ಮತ್ತೊಂದು ಸರ್ಪ್ರೈಸ್ ಸುದ್ದಿ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿದ ಕುರುಕ್ಷೇತ್ರ ಸಿನಿಮಾ ಆಡಿಯೋ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಜೊತೆಗೆ ಚಿತ್ರದ ಟ್ರೈಲರ್ ಕೂಡ ಬಂದಿದೆ. ಈಗ ಸಿನಿಮಾ ಯಾವಾಗ ನೋಡೋದು ಎಂದು ಅಭಿಮಾನಿಗಳು ಜಪ ಮಾಡ್ತಿದ್ದಾರೆ.
ಸದ್ಯಕ್ಕೆ ಕುರುಕ್ಷೇತ್ರ ಚಿತ್ರದ ಒಂದು ಆಡಿಯೋ ಸಾಂಗ್ ರಿಲೀಸ್ ಆಗಿದೆ. ಇದೀಗ, ಎರಡನೇ ಸಾಂಗ್ ಕೇಳುವ ಸಮಯ. ಹೌದು, ಕುರುಕ್ಷೇತ್ರ ಚಿತ್ರದ ಎರಡನೇ ಹಾಡು ಬಿಡುಗಡೆ ದಿನಾಂಕ ಪ್ರಕಟವಾಗಿದೆ.
ಜುಲೈ 13 ರಂದು ಶನಿವಾರ ಕುರುಕ್ಷೇತ್ರ ಚಿತ್ರದ ಚಾರುತಂತಿ ಹಾಡು ತೆರೆಕಾಣಲಿದೆ. ಅಂದ್ಹಾಗೆ, ಇದು ದುರ್ಯೋಧನ ಮತ್ತು ಭಾನುಮತಿ ನಡುವೆ ನಡೆಯುವ ಡುಯೆಟ್ ಸಾಂಗ್ ಆಗಿದ್ದು, ಪೌರಾಣಿಕ ಚಿತ್ರದಲ್ಲಿ ಈ ರೀತಿ ಹಾಡು ಹೇಗಿರಲಿದೆ ಎಂಬ ಕಾತುರ ಕಾಡುತ್ತಿದೆ.

ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಮಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಲಹರಿ ಸಂಸ್ಥೆ ಕುರುಕ್ಷೇತ್ರ ಚಿತ್ರದ ಆಡಿಯೋ ಹಕ್ಕು ಖರೀದಿಸಿದ್ದು, ಟಿ-ಸಿರೀಸ್ ಯೂಟ್ಯೂಬ್ ಚಾನಲ್ ನಲ್ಲಿ ಹಾಡು ಬಿಡುಗಡೆಯಾಗಲಿದೆ.
ಇನ್ನುಳಿದಂತೆ ನಾಗಣ್ಣ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಮುನಿರತ್ನ ನಿರ್ಮಿಸಿದ್ದಾರೆ. ದರ್ಶನ್, ಅರ್ಜುನ್ ಸರ್ಜಾ, ರವಿಚಂದ್ರನ್, ಸೋನು ಸೂದ್, ಶಶಿ ಕುಮಾರ್, ನಿಖಿಲ್ ಕುಮಾರ್, ಸ್ನೇಹಾ, ಮೇಘನಾ ರಾಜ್, ಶ್ರೀನಿವಾಸ ಮೂರ್ತಿ, ಅಂಬರೀಶ್, ಶ್ರೀನಾಥ್ ಸೇರಿದಂತೆ ಹಲವರು ನಟಿಸಿದ್ದಾರೆ.


Click it and Unblock the Notifications











