'ಕುರುಕ್ಷೇತ್ರ'ದ ಇನ್ನೊಂದು ಟೀಸರ್ ಬರ್ತಿದೆ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಈಗಾಗಲೇ ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದ್ದು, ದೊಡ್ಡ ನಿರೀಕ್ಷೆ ಹುಟ್ಟಿಸಿದೆ.
ಈಗ 'ಕುರುಕ್ಷೇತ್ರ' ಚಿತ್ರದ ಎರಡನೇ ಟೀಸರ್ ಬರುವ ಸೂಚನೆ ಸಿಕ್ಕಿದೆ. ಹೌದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹುಟ್ಟುಹಬ್ಬದ ಪ್ರಯುಕ್ತ 'ಕುರುಕ್ಷೇತ್ರ'ದ ಇನ್ನೊಂದು ಟೀಸರ್ ರಿಲೀಸ್ ಆಗಲಿದೆ.

ಇದೇ ಡಿಸೆಂಬರ್ 16 ರಂದು ಕುಮಾರಸ್ವಾಮಿ ಅವರ ಹುಟ್ಟುಹಬ್ಬವಿದ್ದು, ಈ ವಿಶೇಷವಾಗಿ ಅಭಿಮನ್ಯುವಿನ ಝಲಕ್ ಬಿಡುಗಡೆ ಮಾಡಲಾಗುವುದಂತೆ.
'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಂಡಿದ್ರೆ, ನಿಖಿಲ್ ಕುಮಾರ್ ಅಭಿಮನ್ಯು ಪಾತ್ರದಲ್ಲಿ ಚಕ್ರವ್ಯೂಹ ಭೇದಿಸಿದ್ದಾರೆ. ಇನ್ನುಳಿದಂತೆ ಅರ್ಜುನ್ ಸರ್ಜಾ, ಶಶಿಕುಮಾರ್, ರವಿಶಂಕರ್, ಸೋನು ಸೂದ್, ಡ್ಯಾನಿಶ್, ಅಂಬರೀಷ್, ರವಿಚಂದ್ರನ್, ನಟಿಯರಾದ ಸ್ನೇಹಾ, ಹರಿಪ್ರಿಯಾ, ಮೇಘನಾ ರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
English summary
Challenging star Darshan Starrer kurukshetra's second teaser will release on hd kumaraswamy birthday.
kurukshetra darshan hd kumaraswamy nikhil kumar ದರ್ಶನ್ ಕುರುಕ್ಷೇತ್ರ ಹೆಚ್ ಡಿ ಕುಮಾರಸ್ವಾಮಿ ನಿಖಿಲ್ ಕುಮಾರ್


Click it and Unblock the Notifications