For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್ ಪತ್ನಿ ಬಳಿಕ ಮೋದಿ ವಿರುದ್ಧ ಖುಷ್ಬೂ ಅಸಮಾಧಾನ

  |
  Why no South stars?..! Khushbhu Questioned About Modi's meet with Actors | FILMIBEAT KANNADA

  ಮಹಾತ್ಮ ಗಾಂಧಿ ಜಯಂತಿ ವಿಶೇಷವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬಾಲಿವುಡ್ ತಾರೆಯರನ್ನ ಮಾತ್ರ ಆಹ್ವಾನಿಸಿದ್ದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಕ್ಷಿಣ ಭಾರತದ ಕಲಾವಿದರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

  ಇತ್ತೀಚಿಗಷ್ಟೆ ನಟ ರಾಮ್ ಚರಣ್ ಪತ್ನಿ ಉಪಾಸನ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮೋದಿ ಅವರನ್ನ ಪ್ರಶ್ನಿಸಿದ್ದರು. ''ಭಾರತ ಸಿನಿಮಾ ಅಂದ್ರೆ ಬರಿ ಹಿಂದಿ ಚಿತ್ರರಂಗ ಮಾತ್ರವಲ್ಲ'' ಎಂದು ಕಿಡಿಕಾರಿದ್ದರು.

  ಇದೀಗ, ಬಹುಭಾಷ ನಟಿ ಖುಷ್ಬೂ ಕೂಡ ಮೋದಿ ಸರ್ಕಾರದ ನಡೆಗೆ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದು ''ಭಾರತದ ಸಿನಿಮಾರಂಗದ ಪರವಾಗಿ ಪ್ರಧಾನಿ ಅವರನ್ನ ಭೇಟಿ ಮಾಡಿರುವ ಬಗ್ಗೆ ಗೌರವವಿದೆ. ಆದರೆ, ದೇಶದ ಆರ್ಥಿಕತೆಗೆ ಬರಿ ಹಿಂದಿ ಚಿತ್ರರಂಗ ಮಾತ್ರ ಕೊಡುಗೆ ನೀಡುತ್ತಿಲ್ಲ. ದಕ್ಷಿಣ ಭಾರತವೂ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿದೆ ಎಂಬುದನ್ನ ಮೋದಿ ಗಮನಿಸಬೇಕು'' ಎಂದಿದ್ದಾರೆ.

  'ದಕ್ಷಿಣ ಭಾರತೀಯ ಚಿತ್ರರಂಗವನ್ನು ಕಡೆಗಣಿಸಲಾಗಿದೆ': ಮೋದಿಗೆ ರಾಮ್ ಚರಣ್ ಪತ್ನಿ ಪ್ರಶ್ನೆ

  ''ದಕ್ಷಿಣ ಭಾರತ ಚಿತ್ರರಂಗವನ್ನು ದೇಶದ ಹೆಮ್ಮೆಯನ್ನಾಗಿ ಮಾಡಿದ ಕಲಾವಿದರು, ಪತ್ರಕರ್ತ ಗೆಳೆಯರನ್ನ ಆಹ್ವಾನಿಸಿ ಅದೇ ರೀತಿ ಗೌರವ ನೀಡಿದರೆ, ಅದು ನಿಜವಾಗಲೂ ಸರಿ ಎಂದು ಭಾವಿಸುತ್ತೇನೆ. ಇದರ ಬಗ್ಗೆ ಮೋದಿ ಅವರು ಪರಿಶೀಲಿಸಲಿ'' ಎಂದು ನಟಿ ಖುಷ್ಬೂ ಟ್ವೀಟ್ ಮಾಡಿದ್ದಾರೆ.

  'ಆಮೀರ್, ಶಾರುಖ್ ಖಾನ್ ಗಳು ಮಾತ್ರ ಚಿತ್ರರಂಗದ ಒಡೆಯರಲ್ಲ': ಮೋದಿ ವಿರುದ್ಧ ನಟ ಜಗ್ಗೇಶ್ ಬೇಸರ

  ಇದೇ ವಿಚಾರವಾಗಿ ಕನ್ನಡ ನಟ ಜಗ್ಗೇಶ್ ಅವರು ಕೂಡ ಧ್ವನಿ ಎತ್ತಿದ್ದರು. ''ಕನ್ನಡಿಗರು ಇಂದು ಬಹುತೇಕ ಪರಭಾಷೆ stars ಗಳಿಗೆ ಚಪ್ಪಾಳೆ ಹೊಡೆದ ತಪ್ಪಿಗೆ ನಾವು ಕನ್ನಡಿಗರು ದಾರಿ ತಪ್ಪಿದವರಂತೆ ಆಗಿದ್ದೇವೆ! @narendramodi Ji!ಉತ್ತರ ಭಾರತದ ನಟನಟಿಯರಿಗಿಂತ ನಾವು ಯಾವುದರಲ್ಲು ಕಮ್ಮಿಇಲ್ಲಾ! ಶಾರುಖ್ ಅಮಿರ್ ಅಲ್ಲಾ ಕಲಾರಂಗಕ್ಕೆ ಒಡೆಯರು!ನಮ್ಮ ಕನ್ನಡದ ಕಲಿಗಳು ಅನೇಕರಿದ್ದಾರೆ!ನಿಮ್ಮ ಭಾವನೆ ಗೌರವಿಸಲು!'' ಎಂದು ಬೇಸರ ವ್ಯಕ್ತಪಡಿಸಿದ್ದರು.

  English summary
  South indian actress kushboo has expressed displeasure against prime minister narendra modi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X