»   » ತಾನು ಅಭಿನಯಿಸಿದ ಪಾತ್ರಕ್ಕೆ ತಾನೇ ಡಬ್ ಮಾಡುತ್ತಿದೆ ಈ ಶ್ವಾನ

ತಾನು ಅಭಿನಯಿಸಿದ ಪಾತ್ರಕ್ಕೆ ತಾನೇ ಡಬ್ ಮಾಡುತ್ತಿದೆ ಈ ಶ್ವಾನ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈಗ ಶ್ವಾನಗಳ ಅಬ್ಬರ ಜೋರಾಗಿದೆ. ಅದರಲ್ಲಿಯೂ 'ನಾನು ಮತ್ತು ಗುಂಡ' ಸಿನಿಮಾ ತನ್ನ ವಿಶೇಷತೆಗಳ ಮೂಲಕ ಗಮನ ಸೆಳೆಯುತ್ತಿದೆ. ಇದೀಗ ಈ ಚಿತ್ರ ಮತ್ತೊಂದು ವಿಷಯಕ್ಕೆ ಸುದ್ದಿ ಮಾಡುತ್ತಿದೆ.

ಸಿನಿಮಾಗಳಲ್ಲಿ ಶ್ವಾನಗಳು ನಟಿಸುವುದು ಕಮಾನ್. ಆದರೆ 'ನಾನು ಮತ್ತು ಗುಂಡ' ಸಿನಿಮಾ ನಾಯಿ ನಟನೆ ಮಾಡುವುದು ಮಾತ್ರವಲ್ಲದೆ ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಿದೆ. ಆ ಶ್ವಾನ ಮೈಕ್ ಮುಂದೆ ನಿಂತು ಡಬ್ಬಿಂಗ್ ಮಾರುತ್ತಿರುವ ವಿಡಿಯೋವನ್ನು ಚಿತ್ರತಂಡ ಹಂಚಿಕೊಂಡಿದೆ.

ಸ್ಯಾಂಡಲ್ ವುಡ್ ನಲ್ಲಿ ಶ್ವಾನಗಳ ದರ್ಬಾರ್ ಶುರು

'ನಾನು ಮತ್ತು ಗುಂಡ' ಚಿತ್ರ ಶಿವರಾಜ್ ಕೆ ಆರ್ ಪೇಟೆ ಹಾಗೂ ಸಂಯುಕ್ತ ಹೊರನಾಡು ಅಭಿನಯಿಸಿರುವ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಶ್ವಾನ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದೆ. ಚಿತ್ರದ ಪೂರ್ತಿ ಈ ನಾಯಿ ನಾಯಕನ ಜೊತೆಯಲ್ಲಿಯೇ ಇರುತ್ತದೆ. ಈ ಚಿತ್ರದಲ್ಲಿ ಗುಂಡ ಹಾಗೂ ಸಿಂಬಾ ಎನ್ನುವ ಮೂರು ಶ್ವಾನಗಳನ್ನ ಬಳಕೆ ಮಾಡಿಕೊಳ್ಳಲಾಗಿದೆ.

Labrador Dog dubs himself for Kannada Movie Nanu mattu Gunda

ಶಿವು ಕೆ.ಆರ್. ಪೇಟೆ ಈ ಸಿನಿಮಾದಲ್ಲಿ ಆಟೋ ಡ್ರೈವರ್ ಪಾತ್ರ ಮಾಡಿದ್ದಾರೆ. ಶಿವು ಹೆಂಡತಿಯ ರೋಲ್ ನಲ್ಲಿ ಸಂಯುಕ್ತ ಹೆಗಡೆ ಕಾಣಿಸಿಕೊಂಡಿದ್ದಾರೆ. ಹಾಸನದ ಭಾಷೆಯಲ್ಲಿ ಇಡೀ ಸಿನಿಮಾ ಸಾಗುತ್ತದೆಯಂತೆ. ಶ್ರೀನಿವಾಸ್ ತಿಮ್ಮಯ್ಯ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದಾರೆ.

English summary
Labrador Dog (Gunda) dubs himself for Kannada Movie 'Nanu mattu Gunda' which features Samyuktha Horanadu and Shivaraj KR Pet in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X