»   » ಫೀನಿಕ್ಸ್ ಹಕ್ಕಿ ರಾಗಿಣಿಗೆ ಹೊಡೀತು ಲಕ್ಕು!

ಫೀನಿಕ್ಸ್ ಹಕ್ಕಿ ರಾಗಿಣಿಗೆ ಹೊಡೀತು ಲಕ್ಕು!

By: ಜೀವನರಸಿಕ
Subscribe to Filmibeat Kannada

ಕೆಲವು ತಿಂಗಳುಗಳ ಹಿಂದೆ ರಾಗಿಣಿಗೆ ಅವಕಾಶಗಳೇ ಇಲ್ಲ ಅನ್ನೋ ಸುದ್ದಿ ರಾಗಿಣಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿತ್ತು. ಆದ್ರೆ ಈಗ ರಾಗಿಣಿಯ ಕೈಯ್ಯಲ್ಲಿ ಭರ್ಜರಿ ಸಿನಿಮಾಗಳಿವೆ. ಇದ್ದಕ್ಕಿದ್ದ ಹಾಗೆ ರಾಗಿಣಿಗೆ ಲಕ್ಕು ಲಾಟರಿ ಹೊಡೆದಿದೆ. ಎಲ್ಲರೂ ಕೈ ಬಿಟ್ಟರೂ ರಾಗಿಣಿ ತಲೆ ಕೆಡಿಸಿಕೊಂಡಿರಲಿಲ್ಲ. ಪ್ರತಿಭೆ ಇದ್ದವರಿಗೆ ಗೆಲುವು ಕಟ್ಟಿಟ್ಟ ಬುತ್ತಿ ಅಂತ ಆತ್ಮೀಯರ ಜೊತೆ ರಾಗಿಣಿ ಹೇಳಿಕೊಂಡಿದ್ರು.

'ವೀರ ಮದಕರಿ' ಮೂಲಕ ಕಿಚ್ಚ ಸುದೀಪ್ಗೆ ಜೋಡಿಯಾಗಿ ಕನ್ನಡಕ್ಕೆ ಎಂಟ್ರಿಕೊಟ್ಟ ರಾಗಿಣಿ ದ್ವಿವೇದಿ ಅಭಿನಯಿಸಿದ್ದು ಸ್ಟಾರ್ ನಟರ ಜೊತೆ. ಉಪ್ಪಿ ಜೊತೆ 'ಆರಕ್ಷಕ', ಶಿವಣ್ಣಗೆ ಜೋಡಿಯಾಗಿ 'ಶಿವ' ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಂಡಿದ್ವು. ಇದ್ರ ನಂತರ ಲೂಸ್ ಮಾದ ಯೋಗಿ ಜೊತೆ ಅಭಿನಯಿಸಿದ್ದ 'ಬಂಗಾರಿ' ಸಿನಿಮಾ ಕೂಡ ಗೆಲ್ಲಿಲ್ಲ.

ಇದಾದ ನಂತ್ರ ರಾಗಿಣಿ ತೆಲುಗು ತಮಿಳಿಗೆ ತಿರುಗಿದ್ರು. ಅಲ್ಲಿಗೆ ರಾಗಿಣಿ ಕನ್ನಡ ಬಿಟ್ಟು ಹೊರಟ್ರು ಅಂದುಕೊಳ್ತು ಸ್ಯಾಂಡಲ್ವುಡ್. ಆದ್ರೆ ರಾಗಿಣಿ ಫೀನಿಕ್ಸ್ ತರಹ ಕಂಬ್ಯಾಕ್ ಮಾಡಿದ್ದಾರೆ. ರಾಗಿಣಿಯ ಕೈಯ್ಯಲ್ಲಿ ಈಗ ಸಾಲು ಸಾಲು ಸಿನಿಮಾಗಳ ದೊಡ್ಡ ಪಟ್ಟಿಯೇ ಇದೆ. [ಯೋಗಿ - ರಾಗಿಣಿ ಪಬ್ ಒಳಗೆ ಏನ್ಮಾಡ್ತಿದ್ರು?]

ಕನ್ನಡದ ಗ್ಲಾಮರ್ಡಾಲ್ ಫುಲ್ ಖುಷ್

ರಾಗಿಣಿ ಕನ್ನಡದ ಸ್ಟಾರ್ ನಟರ ಜೊತೆ ನಟಿಸಿದ್ದ ರಾಗಿಣಿ ಕೈಯ್ಯಲ್ಲಿ 'ಬಸವಣ್ಣ' ಸಿನಿಮಾ ಮಾತ್ರ ಉಳಿದುಕೊಂಡಾಗ ಇದೇ ರಾಗಿಣಿಯ ಕೊನೆಯ ಸಿನಿಮಾ ಆಗುತ್ತೆ ಅನ್ನೋದು ಸಿನಿಪಂಡಿತರ ಲೆಕ್ಕಾಚಾರವಾಗಿತ್ತು. ಆದ್ರೆ ಈಗ ರಾಗಿಣಿ ಕೈಯಲ್ಲಿ ಆರು ಸಿನಿಮಾಗಳಿವೆ.

ರಾಗಿಣಿ ಭಟ್ಟರ ಪರಪಂಚದಲ್ಲಿ ಬ್ಯುಸಿ

ಭಟ್ಟರ ಕ್ಯಾಂಪಿನ ಕ್ರಿಶ್ ಜೋಷಿ ನಿರ್ದೇಶನದ ಕಾಲ್ ಗರ್ಲ್ ಪಾತ್ರವನ್ನ ಪೋಷಿಸ್ತಿದ್ದಾರೆ. ದಿಗಂತ್ಗೆ ಜೋಡಿಯಾಗ್ತಿರೋ ರಾಗಿಣಿ ಶೂಟಿಂಗ್ನಲ್ಲಿ ಬ್ಯುಸಿಯಯಾಗಿದ್ದಾರೆ. ಕೆಲಸ ಇಲ್ಲ ಅಂತಿದ್ದವರನ್ನ ಸ್ಟಾರ್ ನಿರ್ದೇಶಕ ಭಟ್ಟರು ಅವಕಾಶ ಕೊಟ್ಟಿರೋದು ನೋಡಿ ಗಾಂಧಿನಗರದ ಟೀಕಾಕಾರರು ಬಾಯಿಮುಚ್ಚಿಕೊಂಡಿದ್ದಾರೆ.

ನಮಸ್ತೇ ರಾಗಿಣಿ ಮೇಡಂ ರಾಗಿಣಿ

ತೆಲುಗಿನ 'ನಮಸ್ತೇ ಮೇಡಂ' ಚಿತ್ರದ ರೀಮೇಕ್ನಲ್ಲಿ ರಾಗಿಣಿ ನಟಿಸ್ತಿದ್ದಾರೆ. ಪ್ರಿಯಾಮಣಿ ಮಾಡಬೇಕಿದ್ದ ಪಾತ್ರ ಈಗ ರಾಗಿಣಿ ಪಾಲಾಗಿದೆ. ಸ್ಯಾಂಡಲ್ವುಡ್ನಲ್ಲಿ ಯಾರೇ ಕೂಗಾಡಲಿ ಊರೇ ಹೋರಾಡಲಿ ಅಂತಿದ್ದಾರೆ ರಾಗಿಣಿ.

ರಾಗಿಣಿ ಈಗ ಸೂಪರ್ಸ್ಟಾರ್

ಕೋಮಲ್ ನಿರ್ದೇಶನದ ಆರ್ ಸೂಪರ್ಸ್ಟಾರ್ ಸಿನಿಮಾದಲ್ಲಿ ರಾಗಿಣಿ ನಟಿಸ್ತಿದ್ದಾರೆ. ಕೋಮಲ್ ನಿರ್ದೇಶನ ಅಂದಮೇಲೆ ಸಹಜವಾಗೇ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ರಾಗಿಣಿ ಮತ್ತೊಂದು ಭಿನ್ನ ಸಿನಿಮಾ ಗಿಟ್ಟಿಸಿದ ಸಂತಸದಲ್ಲಿದ್ದಾರೆ.

ರಾಗಿಣಿ ದ್ವಿವೇದಿ ಎಂತಹ ಪಾತ್ರಕ್ಕೂ ಸೈ

ಕನ್ನಡದಲ್ಲಿ ಮಾತ್ರವಲ್ಲ ಪಕ್ಕದ ತೆಲುಗು ತಮಿಳಲ್ಲೂ ರಾಗಿಣಿಗೆ ಭರ್ಜರಿ ಆಫರ್ಗಳಿವೆ. ಆದ್ರೆ ರಾಗಿಣಿ ಸದ್ಯಕ್ಕೆ ಕನ್ನಡದ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಸದ್ಯ ಹಿಂದಿಗೂ ಎಂಟ್ರಿಕೊಡೋ ಯೋಚನೆಯಲ್ಲಿದ್ದಾರೆ ಈ ರ್ಯಾಂಬೋ ಲಡ್ಕಿ.

ಗ್ಲಾಮರ್ಡಾಲ್ ಈಗ ಶೃಂಗಾರ ಚೆಲುವೆ

ರಾಗಿಣಿ ಈ ವರ್ಷವಿಡೀ ಬ್ಯುಸಿ. ಕ್ರೇಜಿಸ್ಟಾರ್ ರವಿಮಾಮನಿಗೆ ಜೋಡಿಯಾಗೋ ಅವಕಾಶ ರಾಗಿಣಿಗೆ ಸಿಕ್ತಿದೆ. ರಸಿಕರ ರಾಜ-ಗ್ಲಾಮರ್ಡಾಲ್ ಕಾಂಬಿನೇಷನ್ನ ರೋಮ್ಯಾನ್ಸ್ ನೋಡೋದೇ ಒಂದು ಥ್ರಿಲ್..

ಆಲ್ ದಿ ಬೆಸ್ಟ್ ಅರಗಿಣಿ ರಾಗಿಣಿ

ಸದ್ಯ ಭಟ್ಟರ ಕ್ಯಾಂಪಿಗೆ ಸೇರಿರೋ ರಾಗಿಣಿ ಅಭಿನಯದ 'ಬಸವಣ್ಣ' ಸಿನಿಮಾ ಸದ್ಯದಲ್ಲೇ ತೆರೆಗೆ ಬರುತ್ತೆ. ರಾಗಿಣಿ ಮತ್ತೆ ಕನ್ನಡದಲ್ಲಿ ಮಿಂಚೋಕೆ ಮಿಂಚಿನಂತೆ ಬಣ್ಣ ಹಚ್ಚಿದ್ದಾರೆ. ಈ ಗ್ಲಾಮರ್ಡಾಲ್ಗೆ ನಮ್ಮ ಕಡೆಯಿಂದ ಆಲ್ ದಿ ಬೆಸ್ಟ್.

English summary
All of a sudden lady luck smiling on Ragini Dwivedi in Sandalwood. Contrary to the news that Ragini's career is over in Kannada films, she has been signing movies one after the other. Can we say that Ragini is No.1 actress now?
Please Wait while comments are loading...