»   » 'ಕಬಾಲಿ' ಕ್ರೇಜ್: ಸೂಪರ್ ಸುಪ್ರೀಂ ಐಡಿಯಾ ಮಾಡಿದ ಲಹರಿ ವೇಲು

'ಕಬಾಲಿ' ಕ್ರೇಜ್: ಸೂಪರ್ ಸುಪ್ರೀಂ ಐಡಿಯಾ ಮಾಡಿದ ಲಹರಿ ವೇಲು

Posted By:
Subscribe to Filmibeat Kannada

ಇದಕ್ಕೆ ಚಿತ್ರರಂಗದ ಉದ್ಧಾರ ಅನ್ನಬೇಕೋ, ಸೂಪರ್ ಸ್ಟಾರ್ ರಜಿನಿಕಾಂತ್ ಗೆ ಇರುವ ಮಾರ್ಕೆಟ್ ವಾಲ್ಯು ಅಂತ ಸುಮ್ಮನಾಗ್ಬೇಕೋ...ಇಲ್ಲ, ದುಡ್ಡು ಮಾಡುವ ಹೊಸ ದಾರಿ ಅಂತ ಕಣ್ಣು ಬಾಯಿ ಬಿಡ್ಬೇಕೋ ಅಥವಾ ಕನ್ನಡ ಚಿತ್ರಗಳಿಗೆ ಹೀಗ್ಯಾಕ್ಕಿಲ್ಲ ಅಂತ ಬಾಯ್ಬಾಯ್ ಬಡ್ಕೋಬೇಕೋ....ಅವರವರ ಭಾವಕ್ಕೆ ಬಿಟ್ಟಿದ್ದು.

ಸೂಪರ್ ಸ್ಟಾರ್ ರಜಿನಿಕಾಂತ್ ಸಿನಿಮಾಗಳು ತೆರೆಗೆ ಬರುತ್ತಿವೆ ಅಂದ್ರೆ ಉದಾಸೀನ ಮಾಡುವವರ ಸಂಖ್ಯೆ ಬೆರಳೆಣಿಕೆಷ್ಟು. ಸಿನಿಮಾ ಹೇಗಾದರೂ ಇರಲಿ, ಒಮ್ಮೆ ರಜಿನಿ ಸಿನಿಮಾ ನೋಡಲೇಬೇಕು ಅಂತ ಕ್ರೇಜ್ ನಿಂದ ಬರುವವರು ಭಾರತದಲ್ಲಿ ಮಾತ್ರ ಅಲ್ಲ ವಿದೇಶಗಳಲ್ಲಿಯೂ ಇದ್ದಾರೆ ಅನ್ನೋದು ಸತ್ಯ. [ಕಬಾಲಿ ದಾಖಲೆ: ರಿಲೀಸ್ ಗೂ ಮುನ್ನ 200 ಕೋಟಿ ಕಲೆಕ್ಷನ್.?]

ಇದೀಗ ಬಿಡುಗಡೆ ಆಗುತ್ತಿರುವ 'ಕಬಾಲಿ' ಚಿತ್ರವನ್ನೇ ತೆಗೆದುಕೊಳ್ಳಿ. ಇದೇ ಶುಕ್ರವಾರ (ಜುಲೈ 22) 'ಕಬಾಲಿ' ಸಿನಿಮಾ ಬಿಡುಗಡೆ ಆಗುತ್ತಿದೆ. ತಮಿಳು ಚಿತ್ರವಾದರೂ ಕರ್ನಾಟಕದಲ್ಲಿ ಈಗಾಗಲೇ ಮೊದಲ ದಿನದ ಶೋಗಳು ಬಹುತೇಕ ಬುಕ್ ಆಗಿವೆ. ಮುಂದೆ ಓದಿ....

ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಲಿವೆ.!

ಕರ್ನಾಟಕದ ಬಹುತೇಕ ಮಲ್ಟಿಪ್ಲೆಕ್ಸ್ ಹಾಗೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿರುವ 'ಕಬಾಲಿ' ಚಿತ್ರವನ್ನ ಮೊದಲ ದಿನ ಕಣ್ತುಂಬಿಕೊಳ್ಳುವುದಕ್ಕೆ ಸಿನಿ ಪ್ರಿಯರು ಮುಗಿಬೀಳ್ತಿದ್ದಾರೆ. ಇನ್ನು ಕೆಲವೇ ಗಂಟೆಗಳಲ್ಲಿ ಶುಕ್ರವಾರದ ಎಲ್ಲಾ ಶೋಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಲಿವೆ. [ಅಮೆರಿಕದಲ್ಲಿ ಕಬಾಲಿ ಟಿಕೆಟ್ 2 ಗಂಟೆಯಲ್ಲಿ ಸೋಲ್ಡ್ ಔಟ್]

ಬುಕ್ ಮೈ ಶೋ ಜ್ಯಾಮ್ ಆಗ್ತಿದೆ.!

'ಕಬಾಲಿ' ಚಿತ್ರದ ಟಿಕೆಟ್ ಬುಕ್ಕಿಂಗ್ ಗೆ ಡಿಮ್ಯಾಂಡ್ ಹೆಚ್ಚಾಗುತ್ತಿರುವುದರಿಂದ 'ಬುಕ್ ಮೈ ಶೋ' ವೆಬ್ ತಾಣ ಜ್ಯಾಮ್ ಆಗ್ತಿದೆ ಅಂದ್ರೆ ನೀವೇ ಊಹಿಸಿ.... [ರಜನಿಗೆ SMS ಕಳುಹಿಸಲು ಏರ್ ಟೆಲ್ ನಿಂದ ವಿಶೇಷ ಕೂಪನ್]

ಹೊಸ ಪ್ಲಾನ್ ಮಾಡಿದ್ದಾರೆ ಲಹರಿ ವೇಲು.!

'ಕಬಾಲಿ' ಚಿತ್ರಕ್ಕೆ ಇರುವ ಕ್ರೇಜ್ ಗೆ ಬೆಂಗಳೂರಿನಲ್ಲಿ ಸಿಕ್ಕಿರುವ ಚಿತ್ರಮಂದಿರಗಳು ಕಡಿಮೆ. ಹೀಗಾಗಿ ಲಹರಿ ಆಡಿಯೋ ಸಂಸ್ಥೆ ಹಾಗೂ ರಾಕ್ ಲೈನ್ ಪ್ರೊಡಕ್ಷನ್ಸ್ ಒಂದು ಹೊಸ ಪ್ಲಾನ್ ಮಾಡಿದೆ. ['WhatsApp' ನಲ್ಲಿ ರಜಿನಿ ಮೊದಲಾ...ರಾಜ್ ಮೊಮ್ಮಗ ಮೊದಲಾ.?]

ಫೈವ್ ಸ್ಟಾರ್ ಹೊಟೇಲ್ ಗಳಲ್ಲಿ 'ಕಬಾಲಿ' ಶೋ.!

ನೀವು ನಂಬಿದ್ರೂ, ಬಿಟ್ಟರೂ ಇದೇ ಸತ್ಯ. ಬೆಂಗಳೂರಿನ 5 ಸ್ಟಾರ್ ಹೊಟೇಲ್ ಗಳಲ್ಲಿ 'ಕಬಾಲಿ' ಚಿತ್ರದ ಪ್ರದರ್ಶನ ಮಾಡುವ ಸೂಪರ್ ಸುಪ್ರೀಂ ಐಡಿಯಾ ಮಾಡಿದ್ದಾರೆ ಲಹರಿ ವೇಲು. ['ಕಬಾಲಿ' ಚಿತ್ರದ ವಿಲನ್ ಕನ್ನಡದ ಕಿಶೋರ್ ಜೊತೆ ಒಂದ್ ಸಂದರ್ಶನ]

ಪಂಚತಾರಾ ಹೊಟೇಲ್ ಗಳ ಲಿಸ್ಟ್....

ಕುಮಾರಕೃಪ ರಸ್ತೆಯಲ್ಲಿ ಇರುವ ಲಲಿತ್ ಅಶೋಕ್, ಯಲಹಂಕದಲ್ಲಿರುವ ರಾಯಲ್ ಆರ್ಕಿಡ್ ಮತ್ತು ಜೆ.ಡಬ್ಲ್ಯೂ.ಮ್ಯಾರಿಯೆಟ್, ಏರ್ ಪೋರ್ಟ್ ರಸ್ತೆಯಲ್ಲಿ ಇರುವ ಕ್ರೌನ್ ಪ್ಲಾಜಾ ಹೋಟೆಲ್ ಗಳಲ್ಲಿ 'ಕಬಾಲಿ' ಪ್ರದರ್ಶನ ಮಾಡಲು ಲಹರಿ ವೇಲು ಸಿದ್ಧತೆ ಮಾಡಿಕೊಂಡಿದ್ದಾರೆ. [ಕನ್ನಡದಲ್ಲೂ ರಾರಾಜಿಸುತ್ತಿದೆ ರಜನಿಯ 'ಕಬಾಲಿ' ಪೋಸ್ಟರ್]

ಹೊಟೇಲ್ ನಲ್ಲಿ ಪ್ರದರ್ಶನ ಹೇಗೆ.?

ಬೆಂಗಳೂರಿನ ನಾಲ್ಕು ಪಂಚತಾರಾ ಹೊಟೇಲ್ ಗಳಲ್ಲಿ ಇರುವ ಬಾಲ್ ರೂಮ್ ನಲ್ಲಿ ಚಿತ್ರ ಪ್ರದರ್ಶನ ಮಾಡಲಾಗುವುದು. ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ನಲ್ಲಿ ಇರುವಂತೆ ಸ್ಕ್ರೀನ್, ಸೌಂಡ್, ಸೀಟ್ ವ್ಯವಸ್ಥೆ ಇರಲಿದೆ.

ಊಟ ಫ್ರೀ.!

'ಕಬಾಲಿ' ಚಿತ್ರವನ್ನ ಪಂಚತಾರಾ ಹೊಟೇಲ್ ನಲ್ಲಿ ವೀಕ್ಷಿಸುವವರಿಗೆ, ಅದೇ ಹೊಟೇಲ್ ನಲ್ಲಿ ಊಟ ಉಚಿತವಾಗಿ ದೊರೆಯಲಿದೆ.

ಟಿಕೆಟ್ ಬೆಲೆ ಎಷ್ಟು.?

ಒಬ್ಬರಿಗೆ ಒಂದು ಸಾವಿರ/ಒಂದುವರೆ ಸಾವಿರ....ಹೊಟೇಲ್ ಗಳ ಮೇಲೆ ಬೆಲೆ ನಿಗದಿ ಆಗಲಿದೆ.

ಬುಕ್ಕಿಂಗ್ ವ್ಯವಸ್ಥೆ ಹೇಗೆ.?

'ಬುಕ್ ಮೈ ಶೋ' ವೆಬ್ ತಾಣದ ಮೂಲಕವೇ ಪಂಚತಾರಾ ಹೊಟೇಲ್ ಗಳಲ್ಲಿ 'ಕಬಾಲಿ' ನೋಡಲು ಟಿಕೆಟ್ ಬುಕ್ ಮಾಡಬಹುದು. ಸದ್ಯದಲ್ಲೇ ಬುಕ್ಕಿಂಗ್ ತೆರೆಯಲಾಗುತ್ತದೆ.

ಶೋಗಳು ಯಾವಾಗ.?

ಸದ್ಯಕ್ಕೆ ಶುಕ್ರವಾರ, ಶನಿವಾರ ಹಾಗೂ ಭಾನುವಾರ ಪಂಚತಾರಾ ಹೊಟೇಲ್ ಗಳಲ್ಲಿ 1.30, 4.30, 7.30ಕ್ಕೆ 'ಕಬಾಲಿ' ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಮೂರು ದಿನಗಳಲ್ಲಿ ವ್ಯಕ್ತವಾಗುವ ಪ್ರತಿಕ್ರಿಯೆ ಆಧರಿಸಿ, ಮುಂದಿನ ವಾರ ಮುಂದುವರಿಸುವ ಬಗ್ಗೆ ಯೋಚಿಸಲಾಗುವುದು ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಲಹರಿ ವೇಲು ತಿಳಿಸಿದ್ದಾರೆ.

English summary
Lahari Velu of 'Lahari Audio' in association with Rockline Productions have come up with a new plan of arranging Super Star Rajinikanth starrer 'Kabali' shows in 4 Five Star Hotels, Bengaluru this weekend.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada