»   » ನಟಿ ಪೂನಂ ಪಾಂಡೆ ಲೇಟೆಸ್ಟ್ 'ಸ್ಪೆಷಲ್' ಚಿತ್ರಗಳು

ನಟಿ ಪೂನಂ ಪಾಂಡೆ ಲೇಟೆಸ್ಟ್ 'ಸ್ಪೆಷಲ್' ಚಿತ್ರಗಳು

By: ರವಿಕಿಶೋರ್
Subscribe to Filmibeat Kannada

ಇತ್ತೀಚೆಗೆ ಪೂನಂ ಪಾಂಡೆ ಸುದ್ದಿ ಇಲ್ಲದೆ ಅವರ ಅಪಾರ ಅಭಿಮಾನಿ ಬಳಗ ತೀವ್ರ ನಿರಾಸೆಗೊಳಗಾಗಿದೆ. ಈ ಬಿರುಬಿಸಿಲು, ಸೆಕೆಯ ಕಾರಣಕ್ಕೋ ಏನೋ ಪೂನಂ ಪಾಂಡೆ ಸಹ ಸೈಲೆಂಟ್ ಆಗಿದ್ದರು. ಈ ಬಿಸಿಯಲ್ಲಿ ಇನ್ನಷ್ಟು ಬಿಸಿ ಮಾಡಿ ಪಡ್ಡೆಗಳನ್ನು ಗೋಳು ಹೊಯ್ದುಕೊಳ್ಳುವುದು ಯಾಕೆ ಎಂದು ಸುಮ್ಮನಾಗಿದ್ದರು ಎಂದು ಕಾಣುತ್ತದೆ.

ಇದೀಗ ಅವರು ಮತ್ತೆ ಒಂದಷ್ಟು ರೋಚಕ ಚಿತ್ರಗಳ ಮೂಲಕ ರಸಿಕರ ಮುಂದೆ ಬಂದಿದ್ದಾರೆ. ಕನ್ನಡದ ಲವ್ ಈಸ್ ಪಾಯಿಸನ್ ಚಿತ್ರದ ಸ್ಪೆಷಲ್ ಹಾಡಿನಲ್ಲಿ ಅವರು ಹೆಜ್ಜೆ ಹಾಕಿರುವುದು ಗೊತ್ತೇ ಇದೆ. ಆ ಹಾಡಿಗೆ ಸಂಬಂಧಿಸಿದ ಲೇಟೆಸ್ಟ್ ಚಿತ್ರಗಳು ಇದೀಗ ಬಿಡುಗಡೆಯಾಗಿವೆ. [ಕಂಟ್ರಿ ಕ್ಲಬ್ ನಲ್ಲಿ ಹಳ್ಳಿಹೈದ ರಾಜೇಶ್ ರಿಮ್ ಝಿಮ್]

ಧಾಬಾ ಮಾದರಿಯ ಸೆಟ್ ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಹಾಡಿನಲ್ಲಿ ದುರಂತ ಸಾವಪ್ಪಿದ ಹಳ್ಳಿಹೈದ ರಾಜೇಶ್ ಜೊತೆ ಪೂನಂ ಪಾಂಡೆ ಕಾಣಿಸಲಿದ್ದಾರೆ. ನಾಯಕ ನಟ ಖುಷಿಯಾಗಿದ್ದಾಗ ಬರುವ ಹಾಡಿದು. ಸ್ಲೈಡ್ ನಲ್ಲಿ ನೋಡಿ ಸ್ಪೆಷಲ್ ಹಾಡಿನ ಸ್ಪೆಷಲ್ ಫೊಟೋಗಳು...

ಮೈಲೇಲಿನ ಕಾಸ್ಟ್ಯೂಮ್ ತೂಕವೇ 10 ಕೆ.ಜಿ

ಈ ಸ್ಪೆಷಲ್ ಸಾಂಗ್ ನಲ್ಲಿ ಪೂನಂ ಪಾಂಡೆ ಬಿಕಿನಿಯಲ್ಲಿ ಕಾಣಿಸಲಿದ್ದಾರೆ. ಅವರ ಮೈಮೇಲಿನ ಕಾಸ್ಟ್ಯೂಮ್ ತೂಕ ಬರೋಬ್ಬರಿ 10 ಕೆ.ಜಿ ಇರುತ್ತದಂತೆ.

ಸ್ಪೆಷಲ್ ಹಾಡಿಗೆ ನರ್ವಸ್ ಆಗಿದ್ದ ಪೂನಂ

ಮೊದಲು ನಾನು ಈ ಹಾಡನ್ನು ಮಾಡಬೇಕಾದರೆ ನರ್ವಸ್ ಆದೆ. ಬಳಿಕ ಸೆಟ್ ನಲ್ಲಿ ಫ್ರೆಂಡ್ಲಿ ವಾತಾವರಣ ನನ್ನ ಮನಸ್ಸನ್ನು ಹಗುರಗೊಳಿಸಿತು. ಸಹ ಕಲಾವಿದರು, ತಂತ್ರಜ್ಞರ ಸಹಕಾರದಿಂದ ಈ ಹಾಡು ಅದ್ಭುತವಾಗಿ ಮೂಡಿಬರುವಂತಾಯಿತು ಎಂದಿದ್ದಾರೆ ಪೂನಂ.

ನಂದನ್ ಪ್ರಭು ಆಕ್ಷನ್ ಕಟ್ ಹೇಳಿರುವ ಚಿತ್ರ

ನಂದನ್ ಪ್ರಭು ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ರಾಜೇಶ್ ಗೆ ದೂಹಿ ಕೌಶಿಕ್ ನಾಯಕಿ. ಮೈಸೂರಿನ ಶ್ರೀರಾಮಪುರದ ಬಳಿ ಪರಸಯ್ಯನಹುಂಡಿಯಲ್ಲಿರುವ ತಮ್ಮ ನಿವಾಸದ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ರಾಜೇಶ್ ದುರಂತ ಸಾವಿಪ್ಪಿದ್ದ. ಇನ್ನೂ ಚಿತ್ರೀಕರಣ ಹಂತದಲ್ಲಿದ್ದ 'ಲವ್ ಈಸ್ ಪಾಯಿಸನ್' ಚಿತ್ರದ ಕಥೆ ಮುಂದೇನು ಎಂಬಂತಾಗಿತ್ತು. ಇದೀಗ ಮತ್ತೆ ಚಿತ್ರ ಸದ್ದು ಮಾಡುತ್ತಿದೆ.

ಚಿತ್ರದ ತಾಂತ್ರಿಕ ಬಳಗದಲ್ಲಿ ಯಾರಿದ್ದಾರೆ?

ಈ ಚಿತ್ರಕ್ಕೆ ರವಿಶಂಕರ್ ನಾಗ್ ಸಂಭಾಷಣೆ, ಕವಿರಾಜ್, ಸಾಹಿತ್ಯ, ಸಾಯಿಕಿರಣ್ ಸಂಗೀತ, ವೀನನ್ ಮೂರ್ತಿ ಛಾಯಾಗ್ರಹಣ, ಬಾಬುಖಾನ್ ಕಲೆ, ಶಂಕರ್ ನೃತ್ಯ, ಥ್ರಿಲ್ಲರ್ ಮಂಜು ಸಾಹಸ ಈಶ್ವರ್ ಸಂಕಲನವಿದ್ದು, ವೇಣು ನಿರ್ಮಾಣ ನಿರ್ವಹಣೆ, ಚಿತ್ರದ ಕಥೆ, ಚಿತ್ರಕಥೆ ನಿರ್ದೇಶನದ ಹೊಣೆಯನ್ನು ನಂದನ ಪ್ರಭು ಹೊತ್ತಿದ್ದಾರೆ.

ಲವ್ ಈಸ್ ಪಾಯಿಸನ್ ಪಾತ್ರ ವರ್ಗ

ತಾರಾಗಣದಲ್ಲಿ ರಾಜೇಶ್, ಖುಷಿ, ದೋಹಿ, ಚಂದ್ರು, ಸಾಧುಕೋಕಿಲ, ಯತಿರಾಜ್, ಟೆನ್ನಿಸ್ ಕೃಷ್ಣ, ಬುಲೆಟ್ ಪ್ರಕಾಶ್ ಮುಂತಾದವರಿದ್ದು, ಬಾಲಿವುಡ್‍ನ ನಟಿ ಪೂನಂ ಪಾಂಡೆ ಚಿತ್ರದ ಗೀತೆಯೊಂದರಲ್ಲಿ ಹೆಜ್ಜೆಹಕಿದ್ದಾರೆ.

English summary
The latest stills Bollywood beauty Poonam Pandey, who is making her Sandalwood debut with Love Is Poison has been revealed by the makers. Poonam Pandey will be seen in the item number of Love Is Poison, which was shot against the dhaba kind of set.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada