»   » ವಿನಯ್ ರಾಜ್ ಕುಮಾರ್ ಗೆ ಜೋಡಿಯಾದ ನ್ಯೂಜಿಲ್ಯಾಂಡ್ ಚೆಲುವೆ ಯಾರದು?

ವಿನಯ್ ರಾಜ್ ಕುಮಾರ್ ಗೆ ಜೋಡಿಯಾದ ನ್ಯೂಜಿಲ್ಯಾಂಡ್ ಚೆಲುವೆ ಯಾರದು?

Posted By:
Subscribe to Filmibeat Kannada

ವಿನಯ್ ರಾಜ್ ಕುಮಾರ್ ಅಭಿನಯದ ಮೂರನೇ ಸಿನಿಮಾ 'ಅನಂತು v/s ನುಸ್ರತ್' ಚಿತ್ರ ಇತ್ತೀಚಿಗಷ್ಟೆ ಅದ್ದೂರಿಯಾಗಿ ಸೆಟ್ಟೇರಿತ್ತು. ಈಗ ಈ ಸಿನಿಮಾದ ನಾಯಕಿಯ ಬಗ್ಗೆ ಒಂದು ಸುದ್ದಿ ಬಂದಿದೆ.

'ದೊಡ್ಮನೆ'ಯ ದೊಡ್ಡ ಸುದ್ದಿ: ಇದೇ ಮೊದಲ ಬಾರಿಗೆ ನಿರ್ದೇಶನಕ್ಕಿಳಿದ ರಾಜ್ ಕುಟುಂಬದ ಕುಡಿ!

'ಅನಂತು v/s ನುಸ್ರತ್' ಚಿತ್ರಕ್ಕೆ ಈಗ ನಾಯಕಿಯ ಆಯ್ಕೆ ನಡೆದಿದೆ. ಚಿತ್ರಕ್ಕೆ ನ್ಯೂಜಿಲ್ಯಾಂಡ್ ಚೆಲುವೆ ಲತಾ ಹೆಗಡೆ ನಾಯಕಿಯಾಗಿದ್ದಾರೆ. ಸದ್ಯ 'ಆ ದಿನಗಳು' ಚೇತನ್ ಜೊತೆಗೆ 'ಅತಿರಥ' ಸಿನಿಮಾದಲ್ಲಿ ಲತಾ ಹೆಗಡೆ ನಟಿಸುತ್ತಿದ್ದಾರೆ. ಚಿತ್ರತಂಡ ಸಿನಿಮಾದ 'ನುಸ್ರತ್' (ನಾಯಕಿಯ ಪಾತ್ರ) ಪಾತ್ರಕ್ಕೆ ಲತಾ ಹೆಗಡೆ ಅವರನ್ನು ಆಯ್ಕೆ ಮಾಡಿದ್ದು, ಕೊನೆಯ ಹಂತದ ಮಾತುಕತೆ ನಡೆಯುತ್ತಿದೆಯಂತೆ.

Latha Hegde is selected to play lead opposite Vinay Rajkumar in 'Ananthu vs Nusruth'.

'ಅನಂತು v/s ನುಸ್ರತ್' ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಲಾಯರ್ ಆಗಿ ಕಾಣಿಸಿಕೊಂಡಿದ್ದಾರೆ. ಸುಧೀರ್‍ ಶಾನುಭೋಗ್ ಅವರು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಕೆಂಪೇಗೌಡ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿ ಒಂದು ವಿಭಿನ್ನ ಚಿತ್ರ ಇರಬಹುದು ಎಂದು ಎಲ್ಲರ ಗಮನ ಸೆಳೆಯುತ್ತಿದೆ.

English summary
Actress Latha Hegde is selected to play lead opposite Kannada Actor Vinay Rajkumar in 'Ananthu vs Nusruth' movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada