»   » 'ಲೀಡರ್' ನಲ್ಲಿ ಶಿವಣ್ಣ ನ ಪಾತ್ರ ಏನು ಗೊತ್ತೇ?

'ಲೀಡರ್' ನಲ್ಲಿ ಶಿವಣ್ಣ ನ ಪಾತ್ರ ಏನು ಗೊತ್ತೇ?

Posted By:
Subscribe to Filmibeat Kannada

'ಶ್ರೀಕಂಠ' ಸಿನಿಮಾ ದಲ್ಲಿ ಸಾಮಾನ್ಯ ಮನುಷ್ಯನ ಗೆಟಪ್ ಹಾಕಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, 'ಲೀಡರ್' ಚಿತ್ರದಲ್ಲಿ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತಿತ್ತು. ಈ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.['ಸಿಂಹದ ಮರಿ' ಶಿವರಾಜ್ ಕುಮಾರ್ ಮನೆಯಲ್ಲಿ 'ಮರಿ ಹುಲಿ' ಪ್ರಥಮ್.!]

'ಲೀಡರ್' ಚಿತ್ರದ ಎರಡು ಮಹತ್ವದ ದೃಶ್ಯಗಳನ್ನು ಸೆರೆ ಹಿಡಿಯಲು ಕಾಶ್ಮೀರದ ಗುಲ್ಮಾರ್ಗ ಪ್ರದೇಶದಲ್ಲಿ ಬೀಡುಬಿಟ್ಟಿರುವ ಶಿವಣ್ಣ, ಕರ್ನಾಟಕ ಯೋಧರ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ. ಹ್ಯಾಟ್ರಿಕ್ ಹೀರೋ 'ಲೀಡರ್' ಚಿತ್ರದಲ್ಲಿ ಯಾವ ವೇಷ ಧರಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

'ಲೀಡರ್' ನಲ್ಲಿ ಶಿವಣ್ಣನ ಪಾತ್ರ ಏನು?

ಶಿವಣ್ಣ 'ಲೀಡರ್' ಚಿತ್ರದಲ್ಲಿ ಯಾವ ಗೆಟಪ್ ಧರಿಸಿದ್ದಾರೆ ಎಂಬ ಬಗ್ಗೆ ಇದುವರೆಗೆ ಚಿತ್ರತಂಡವಾಗಲಿ, ಶಿವಣ್ಣ ಆಗಲಿ ಯಾರು ಸಹ ಮಾಹಿತಿ ಬಿಟ್ಟು ಕೊಟ್ಟಿರಲಿಲ್ಲ. ಆದರೆ ಈಗ ಈ ಕುತೂಹಲಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ.['ದಿ ವಿಲನ್' ಜೊತೆ ಶೃತಿ ಹರಿಹರನ್‌ ಗೆ ಏನು ಕೆಲಸ?]

ಲೀಡರ್ ಹುಟ್ಟು ಹಾಕುವವನೇ ನಿಜವಾದ 'ಲೀಡರ್'

'ಶ್ರೀಕಂಠ' ಸಿನಿಮಾದಲ್ಲಿ ಸಾಮಾನ್ಯ ಮನುಷ್ಯನಾಗಿ ಅಭಿನಯಿಸಿದ್ದ ಶಿವಣ್ಣ, ಈಗ ಸಾಮಾನ್ಯರನ್ನು ಕಾಯುವ ಮಿಲಿಟರಿ ಕಮಾಂಡೋ ವೇಷ ಧರಿಸಿದ್ದಾರೆ.

ಮೊದಲ ಬಾರಿಗೆ ಸ್ನೋ ಬೈಕ್ ಆಕ್ಷನ್ ನಲ್ಲಿ ಶಿವರಾಜ್ ಕುಮಾರ್

'ಲೀಡರ್' ಚಿತ್ರತಂಡ ಕಾಶ್ಮೀರದಲ್ಲಿ ದೊಡ್ಡ ಫೈಟ್ ಒಂದನ್ನು ಸೆರೆ ಹಿಡಿಯಲು ಬೀಡು ಬಿಟ್ಟಿದೆ. ಇದೇ ಮೊದಲ ಬಾರಿಗೆ ಶಿವಣ್ಣ ಸ್ನೋ ಬೈಕ್ ಆಕ್ಷನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ದೃಶ್ಯಕ್ಕಾಗಿ ಹೈದರಾಬಾದ್ ಮತ್ತು ಬೆಂಗಳೂರಿನ 50 ಜನ ಫೈಟರ್ ಗಳು ಗುಲ್ಮಾರ್ಗ ಕ್ಕೆ ಹೊರಟಿದ್ದಾರಂತೆ.

ಸೈನಿಕನಾಗಿ ಚಿನ್ನಾರಿ ಮುತ್ತ

'ಲೀಡರ್' ಚಿತ್ರದಲ್ಲಿ ಶಿವಣ್ಣ ಕಮಾಂಡೋ ಆಗಿದ್ದರೇ, ಅವರ ಜೊತೆಗೆ ವಿಜಯ ರಾಘವೇಂದ್ರ ಮತ್ತು ಗುರು ಜಗ್ಗೇಶ್ ಸಹ ಸೈನಿಕರ ಸಮವಸ್ತ್ರ ಧರಿಸಿದ್ದಾರೆ.

ಇಬ್ಬರು ಬಿಗ್ ಸ್ಟಾರ್ ಗಳು ಕಮಾಂಡೋ ಗಳಾಗಿ ತೆರೆ ಮೇಲೆ

ಈ ವರ್ಷದ ಬಹು ನಿರೀಕ್ಷಿತ 'ಹೆಬ್ಬುಲಿ' ಚಿತ್ರದಲ್ಲಿ ಸುದೀಪ್ ಮಿಲಿಟರಿ ಕಮಾಂಡೋ ಗೆಟಪ್ ಧರಿಸಿರುವುದು ಗೊತ್ತೇ ಇದೆ. ಈಗ ಶಿವಣ್ಣ ಸಹ ಮಿಲಿಟರಿ ಕಮಾಂಡೋ ವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸ್ಯಾಂಡಲ್ ವುಡ್ ನ ಇಬ್ಬರು ಬಿಗ್ ಸ್ಟಾರ್ ಗಳು ಈ ವರ್ಷ ಮಿಲಿಟರಿ ಕಮಾಂಡೋ ಗಳಾಗಿ ತೆರೆ ಮೇಲೆ ಬರುತ್ತಿರುವುದು ಒಂದು ರೀತಿಯ ವಿಶೇಷತೆ ಆಗಿದೆ.

English summary
Narasimha directorial 'Leader' Movie's Shivarajkumar Look Revealed. Here you can know Shivarajkumar Role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada