»   » 'ಸಿಂಹದ ಮರಿ' ಶಿವರಾಜ್ ಕುಮಾರ್ ಮನೆಯಲ್ಲಿ 'ಮರಿ ಹುಲಿ' ಪ್ರಥಮ್.!

'ಸಿಂಹದ ಮರಿ' ಶಿವರಾಜ್ ಕುಮಾರ್ ಮನೆಯಲ್ಲಿ 'ಮರಿ ಹುಲಿ' ಪ್ರಥಮ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಮುಗಿದ್ಮೇಲೆ ಎಲ್ಲಾ ನ್ಯೂಸ್ ಚಾನೆಲ್ ಗಳಲ್ಲೂ ಪ್ರಥಮ್ ಮುಖವೇ ಕಾಣ್ತಿದೆ. ಅಷ್ಟರಮಟ್ಟಿಗೆ, 'ಬಿಗ್ ಬಾಸ್' ಗೆದ್ದ ಮೇಲೆ 'ಒಳ್ಳೆ ಹುಡುಗ' ಪ್ರಥಮ್ ಸಿಕ್ಕಾಪಟ್ಟೆ ಬಿಜಿಯಾಗ್ಬಿಟ್ಟಿದ್ದಾರೆ.['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ಇದೇ ಗ್ಯಾಪ್ ನಲ್ಲಿ ನೆಚ್ಚಿನ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರನ್ನ ಮೀಟ್ ಮಾಡಿ ಆಶೀರ್ವಾದ ಪಡೆದಿದ್ದಾರೆ ಪ್ರಥಮ್. ಅದಕ್ಕೆ ಸಾಕ್ಷಿ ಈ ಫೋಟೋಗಳು....

'ಸಿಂಹದ ಮರಿ' ಮನೆಯಲ್ಲಿ 'ಮರಿ ಹುಲಿ'

'ಬಿಗ್ ಬಾಸ್' ಮನೆಯಿಂದ ಹೊರ ಬಂದ ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ನಾಗವಾರದ ಮನೆಗೆ ತೆರಳಿದ ಪ್ರಥಮ್, ಶಿವಣ್ಣನ ಜೊತೆ ಕೆಲ ಕಾಲ ಹರಟಿದರು. ಜೊತೆಗೆ ಟ್ರೋಫಿ ತೋರಿಸಿ ಸಂಭ್ರಮ ಪಟ್ಟರು.[ಪ್ರಥಮ್ 'ದೇವ್ರಾಣೆ' ಇರೋದೇ ಹೀಗೆ.. 'ಚಾಲೆಂಜ್' ಮಾಡ್ತೀವಿ..!]

ಶಿವಣ್ಣ ಫುಲ್ ಖುಷ್.!

ಪ್ರಥಮ್ 'ಬಿಗ್ ಬಾಸ್' ಗೆದ್ದಿರುವ ಬಗ್ಗೆ ಶಿವಣ್ಣ ಕೂಡ ಹರ್ಷ ವ್ಯಕ್ತ ಪಡಿಸಿದ್ದಾರೆ. ಇದೇ ವೇಳೆ ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಇದ್ದರು.

ಪ್ರಥಮ್ ಗಾಗಿ ವಿಡಿಯೋ ಬೈಟ್ ನೀಡಿದ್ದ ಶಿವಣ್ಣ.!

ಪ್ರಥಮ್ ಇನ್ನೂ 'ಬಿಗ್ ಬಾಸ್' ಮನೆಯಲ್ಲಿ ಇರುವಾಗಲೇ, 'ಒಳ್ಳೆ ಹುಡುಗ'ನಿಗೆ ಶಿವಣ್ಣ ವಿಡಿಯೋ ಬೈಟ್ ಮೂಲಕ ವಿಶ್ ಮಾಡಿದ್ದು ನಿಮಗೆ ನೆನಪಿದ್ಯಾ.?

ಅಂದು ಶಿವಣ್ಣ ಹೇಳಿದ್ದೇನು.?

'ಹಾಯ್ ಪ್ರಥಮ್... ನಾನು 'ಬಿಗ್ ಬಾಸ್' ನೋಡ್ತಿದ್ದೀನಿ. ಯು ಆರ್ ಪ್ಲೇಯಿಂಗ್ ವೆರಿ ವೆಲ್. ಎಲ್ಲಾ ಕಂಟೆಸ್ಟೆಂಟ್ಸ್ ತುಂಬಾ ಚೆನ್ನಾಗಿ ಆಡ್ತಿದ್ದಾರೆ. ನೀನಂತೂ ತುಂಬಾ ಕ್ಲೆವರ್, ಓಪನ್ ಹಾರ್ಟೆಡ್ ಆಗಿ ಆಡ್ತಿದ್ದೀಯಾ. ಶೋನ ಗೆದ್ದು ಬಾ. Ofcourse, ಎಲ್ಲರ ಆಶೀರ್ವಾದ ಇದೆ. ಎಲ್ಲರೂ ನೋಡ್ತಿದ್ದಾರೆ. ನೀನು ಖಂಡಿಸಿದರೂ, ನಾನು ನಿನ್ನ ಪ್ರೀತಿಸುತ್ತೇನೆ. ಆಲ್ ದಿ ಬೆಸ್ಟ್ ಪ್ರಥಮ್'' ಅಂತ ಅಂದು ಶಿವಣ್ಣ ಹೇಳಿದ್ದರು. ವಿಡಿಯೋ ಇಲ್ಲಿದೆ ನೋಡಿ....

English summary
After Winning Bigg Boss Kannada 4, 'Olle Huduga' Pratham met Kannada Actor Shiva Rajkumar. Check out the pics.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada