For Quick Alerts
  ALLOW NOTIFICATIONS  
  For Daily Alerts

  ನನ್ನ ಹಣೆಬರಹ ಇದ್ದಂಗೆ ನಡೆಯಲಿ: ನಟಿ ಶ್ರುತಿ

  By Rajendra
  |
  <ul id="pagination-digg"><li class="next"><a href="/news/not-playing-drama-actress-shruthi-077603.html">Next »</a></li></ul>

  ಎಲ್ಲಾ ಮುಗಿದ ಮೇಲೆ ಮಾತನಾಡಿ ಪ್ರಯೋಜನವಿಲ್ಲ. ನಾನು ಅನುಭವಿಸಿರುವ ನೋವು ನನಗೇ ಗೊತ್ತು. ನನ್ನ ಹಣೆಬರಹ ಇದ್ದಂಗೆ ನಡೆಯಲಿ. ನನ್ನ ನಂಬಿಕೆ ಹುಸಿಯಾಯಿತು. ಮಂಜುಳಾ, ಚಂದ್ರಚೂಡ್ ಜೀವನ ಸರಿಹೋಗಲಿ. ಇಬ್ಬರ ಜೀವನ ಸುಖಕರವಾಗಿರಲಿ ಎಂದು ಆಶಿಸುತ್ತೇನೆ ಎಂದು ಶ್ರುತಿ ಅವರು ತಮ್ಮ ಎರಡನೇ ಮದುವೆ ರದ್ದಾದ ಮೇಲೆ ಪ್ರತಿಯಿಸಿದ್ದಾರೆ.

  ನಮ್ಮ ಜೀವನ ಸರಿಮಾಡಲು ಯಾರೂ ಬಯಸಲಿಲ್ಲ. ನಮ್ಮನ್ನು ಯಾರೂ ಒಂದುಗೂಡಿದಲಿಲ್ಲ. ಒಗ್ಗೂಡಿಸಲು ನನ್ನ ಮುಂದೆ ಯಾರೂ ಬರಲಿಲ್ಲ. ಈಗ ಸಾಕಷ್ಟು ನೋವು ಭಾರ ಕಡಿಮೆಯಾಗಿದೆ. ಯಾರೋ ಮಾಡಿದ ತಪ್ಪಿನಿಂದ ನಾನು ಅನುಭವಿಸಿದೆ. ನನ್ನಿಂದ ಇನ್ನೊಬ್ಬರಿಗೆ ಅನ್ಯಾಯವಾಗುತ್ತದೆ ಎಂದರೆ ನಾನು ಸಹಿಸಕ್ಕೆ ಆಗಲ್ಲ. ಇದು ಯಾರು ಮಾಡಿದ ತಪ್ಪು ಎಂಬುದು ಎಲ್ಲರಿಗೂ ಗೊತ್ತಿದೆ.

  ಯಾಕೆ ಹೀಗೆ ಆಯ್ತು ಎಂಬುದು ಎಲ್ಲರಿಗೂ ಗೊತ್ತಿತ್ತು. ಈ ವಿಚಾರದಲ್ಲಿ ನಾನು ನಿರಪರಾಧಿ. ನಾನು ಶೋಷಿತಳು ಅಷ್ಟೇ. ನನ್ನಿಂದ ಇನ್ನೊಂದು ಹೆಣ್ಣಿಗೆ ಈ ರೀತಿ ದ್ರೋಹ ಆಗಲು ಸಾಧ್ಯವೇ ಇಲ್ಲ. ನಾನು ಆ ರೀತಿ ಮಾಡುವ ಹೆಣ್ಣೂ ಅಲ್ಲ.

  ಈಗ ಎಲ್ಲಾ ಆದ ಮೇಲೆ ಮಾತನಾಡಿ ಏನು ಪ್ರಯೋಜನ. ಅನುಭವಿಸಿದ್ದು ಆಯಿತು. ನನ್ನಿಂದ ಇನ್ನೊಬ್ಬರಿಗೆ ತೊಂದರೆಯಾಗುತ್ತಿತ್ತು ಎಂದು ನನಗೆ ಅನ್ನಿಸುತ್ತಿತ್ತು. ಈ ಒಂದು ಜಡ್ಜ್ ಮೆಂಟ್ ನಿಂದ ಆ ತೊಂದರೆ ಈ ದಿನ ತಪ್ಪಿದೆ. ನನ್ನ ನೋವು ನನಗೆ ಸಹಜವಾಗಿ ಇದ್ದೇ ಇದೆ. ಯಾವ ಹೆಣ್ಣಿಗೆ ತಾನೆ ಇರಲ್ಲ ಹೇಳಿ.

  ನಾನಾಗಿರುವುದಕ್ಕೆ ಗಟ್ಟಿಯಾಗಿ ಬದುಕಿದ್ದೀನಿ ಅಷ್ಟೇ. ಈ ರೀತಿ ಎರಡನೇ ಮದುವೆಯಾಗುವಾಗ ಜೀವನದಲ್ಲಿ ಏನೋ ಸರಿಹೋಗಬಹುದು ಎಂಬ ಆಶಾಭಾವನೆ ಇಟ್ಟುಕೊಂಡಿರುತ್ತೀವಿ. ಅದು ಮುರಿದುಬೀಳುವುದಿರಲಿ. ಇಷ್ಟೊಂದು ನೋವುಗಳನ್ನು ತಂದುಕೊಡುತ್ತದೆ, ಮಾನಸಿಕವಾಗಿ ಹಿಂಸೆ ತಂದುಕೊಡುತ್ತದೆ ಎಂದು ಅಂದುಕೊಂಡಿರಲಿಲ್ಲ.

  ಹೊಸ ಮದುವೆ ಬಗ್ಗೆ ಸಾಕಷ್ಟು ನಿರೀಕ್ಷೆಗಳು, ಕನಸುಗಳು ಇದ್ದವು. ಡೈವೋರ್ಸ್ ಆದ ಮೇಲೆ ನಾನು ಎರಡು ವರ್ಷ ಕಾದಿದ್ದೇನೆ. ಆನಂತರವಷ್ಟೇ ಎರಡನೇ ಮದುವೆ ನಿರ್ಧಾರಕ್ಕೆ ಬಂದಿದ್ದು. ಕೆಲವು ಸಲ ಏನು ಮಾಡಕ್ಕಾಗಲ್ಲ. ನಮ್ಮ ಹಣೆಬರಹದಲ್ಲಿ ಏನು ಬರೆದಿರುತ್ತದೋ ಏನೋ.

  <ul id="pagination-digg"><li class="next"><a href="/news/not-playing-drama-actress-shruthi-077603.html">Next »</a></li></ul>
  English summary
  After Bangalore family court annuled Kannada actress Shruti second marriage with journalist-turned-filmmaker Chandrachud, she reacts on courts judgement. She said leave me my faith. Chandrachud’s first wife Manjula, a teacher, approaching the family court alleging that the filmmaker had not divorced from her before marrying Shruthi, which is illegal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X