For Quick Alerts
  ALLOW NOTIFICATIONS  
  For Daily Alerts

  ಶ್ರೀಗಳಿಗೆ 'ಭಾರತ ರತ್ನ' ಕೊಡಿಸುವ ಯೋಗ್ಯತೆ ಯಾರಿಗೂ ಇಲ್ಲ: ಲೀಲಾವತಿ

  |
  Siddaganga Swamiji : ಡಾ ಶಿವಕುಮಾರ ಸ್ವಾಮೀಜಿಗಳನ್ನ ನೆನೆದು ಕಣ್ಣೀರಿಟ್ಟ ವಿನೋದ್ ರಾಜ್ ಕುಮಾರ್ ಹಾಗು ಲೀಲಾವತಿ

  'ನಡೆದಾಡುವ ದೇವರು' ಡಾ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು ಎಂಬುದು ಇಡೀ ಕನ್ನಡ ನಾಡಿನ ಜನರ ಆಸೆ ಮತ್ತು ಬೇಡಿಕೆಯಾಗಿದೆ. ಬಡವರು, ಮಕ್ಕಳ ಕಲ್ಯಾಣಕ್ಕಾಗಿ ದಶಕಗಳ ಕಾಲ ಶ್ರೀಗಳು ಮಾಡಿದ ಕೆಲಸಗಳು, ಅವರು ನೀಡಿದ ಕೊಡುಗೆಯನ್ನ ಕೇಂದ್ರ ಸರ್ಕಾರಕ್ಕೆ ಗೌರವಿಸಿ ಖುದ್ದು ಘೋಷಣೆ ಮಾಡಬೇಕಿತ್ತು.

  ಬಟ್, ಇದುವರೆಗೂ ಆ ರೀತಿಯಾದ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. ಸಹಜವಾಗಿ ಇದು ಸಾರ್ವಜನಿಕರಿಗೆ ಬೇಸರಕ್ಕೆ ಕಾರಣವಾಗಿದೆ.

  ಶ್ರೀಗಳ ಅಂತಿಮ ದರ್ಶನ ಪಡೆದ ಪುನೀತ್: ಯಶ್, ಸುದೀಪ್, ಉಪ್ಪಿ ಸಂತಾಪ ಶ್ರೀಗಳ ಅಂತಿಮ ದರ್ಶನ ಪಡೆದ ಪುನೀತ್: ಯಶ್, ಸುದೀಪ್, ಉಪ್ಪಿ ಸಂತಾಪ

  ಈ ಬಗ್ಗೆ ಮಾತನಾಡಿದ ಹಿರಿಯ ನಟಿ ಲೀಲಾವತಿ ಅವರು ''ಶ್ರೀಗಳು ಏನೂ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ, ಅವರೇ ಒಂದು ರತ್ನ, ಶ್ರೀಗಳಿಗೆ 'ಭಾರತ ರತ್ನ' ಕೊಡಿಸುವ ಯೋಗ್ಯತೆ ಯಾರಿಗೂ ಇಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಲೀಲಾವತಿ ಏನಂದ್ರು ಎಂದು ಪೂರ್ತಿ ತಿಳಿಯಲು ಮುಂದೆ ಓದಿ.....

  ಅವರಿಗೇಕೆ ಬೇಕು ಭಾರತ ರತ್ನ?

  ಅವರಿಗೇಕೆ ಬೇಕು ಭಾರತ ರತ್ನ?

  ''ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಯಾಕೆ ಕೊಡಬೇಕು ಭಾರತ ರತ್ನ. ಅವರು ಜಗತ್ತಿನ ಪಾಲಿಗೆ ಒಂದು ಅಮೂಲ್ಯವಾದ ರತ್ನ. 'ಭಾರತ ರತ್ನ' ಕೊಡೋದು ದೊಡ್ಡ ವಿಷ್ಯನಾ. ಭಾರತ ರತ್ನಕ್ಕಿಂತ ದೊಡ್ಡ ರತ್ನ ಇದ್ರೆ ಕೊಡೋಕು ಸಾಧ್ಯ'' - ಲೀಲಾವತಿ

  ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಚಿತ್ರರಂಗದ ಗಣ್ಯರು ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಚಿತ್ರರಂಗದ ಗಣ್ಯರು

  ಮತ್ತೆ ಹುಟ್ಟಿ ಬಂದಿರ್ತಾರೆ

  ಮತ್ತೆ ಹುಟ್ಟಿ ಬಂದಿರ್ತಾರೆ

  ''ಕೋಟ್ಯಾಂತರ ಮಕ್ಕಳಿಗೆ ವಿದ್ಯೆ ನೀಡಿದವರು. ಅನೇಕ ಬಡವರ ಹೊಟ್ಟೆಗೆ ಊಟ ಹಾಕಿದವರು. ಇಂತಹ ವ್ಯಕ್ತಿಗಳು ಮತ್ತೆ ಹುಟ್ಟಬೇಕು. ಬಹುಶಃ ಈಗಾಗಲೇ ಮತ್ತೆ ಎಲ್ಲಿಯಾದರೂ ಹುಟ್ಟಿರ್ತಾರೆ. ಅವರೇ ದೇವರು. ಭಾರತ ರತ್ನಕ್ಕಿಂತ ದೊಡ್ಡ ರತ್ನ ಅವರು'' ಎಂದು ಲೀಲಾವತಿ ನುಡಿದಿದ್ದಾರೆ.

  ಶ್ರೀಗಳ ಅಂತಿಮ ದರ್ಶನ ಪಡೆಯಲು ಶಿವಣ್ಣನಿಗೆ ಸಾಧ್ಯ ಆಗಲಿಲ್ಲ ಶ್ರೀಗಳ ಅಂತಿಮ ದರ್ಶನ ಪಡೆಯಲು ಶಿವಣ್ಣನಿಗೆ ಸಾಧ್ಯ ಆಗಲಿಲ್ಲ

  ಬೆಲೆ ಕಟ್ಟಲಾಗದ ರತ್ನ

  ಬೆಲೆ ಕಟ್ಟಲಾಗದ ರತ್ನ

  ''ಭಾರತ ರತ್ನಕ್ಕಿಂತ ಶ್ರೇಷ್ಠ ರತ್ನ ಶ್ರೀಗಳು. ಅವರೊಂದು ಅಮೂಲ್ಯವಾದ ರತ್ನ. ಅವರಿಗೆ ಬೆಲೆ ಕಟ್ಟಲಾಗದು. ಬೆಲೆ ಕಟ್ಟೋಕೆ ಆಗೋರಿಗೆ ಮಾತ್ರ ನಾಮಕರಣ ಮಾಡೋಕೆ ಸಾಧ್ಯ. ಇವರಿಗೆ ಯಾರೂ ನಾಮಕರಣ ಮಾಡಲು ಸಾಧ್ಯವಿಲ್ಲ'' ಎಂದು ವಿನೋದ್ ರಾಜ್ ಅಭಿಪ್ರಾಯ ಪಟ್ಟಿದ್ದಾರೆ.

  'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್ 'ಸಿದ್ದಗಂಗಾ ಶ್ರೀಗಳಿಂದ ಈ ವಸ್ತುವನ್ನು ಕಿತ್ತುಕೊಂಡು ಬಂದಿದ್ದೆ' - ಜಗ್ಗೇಶ್

  ದೇವರಿಗೆ ಸನ್ಮಾನ ಮಾಡುವ ಯೋಗ್ಯತೆ ಮನುಷ್ಯನಿಗಿಲ್ಲ

  ದೇವರಿಗೆ ಸನ್ಮಾನ ಮಾಡುವ ಯೋಗ್ಯತೆ ಮನುಷ್ಯನಿಗಿಲ್ಲ

  ''ನಡೆದಾಡುವ ದೇವರು ಅವರು ಅಂದ್ಮೇಲೆ ದೇವರಿಗೆ ಸನ್ಮಾನ ಮಾಡುವ ಯೋಗ್ಯತೆ ಮನುಷ್ಯನಿಗಿಲ್ಲ. ಆ ದೇವರೇ ಬರಬೇಕು ಅಥವಾ ಅವರೇ ದೇವರು. ಅದಕ್ಕೆ ಅವರು ಭಾರತ ರತ್ನ ತೆಗೆದುಕೊಳ್ಳದೇ ಹೋದರು'' ಎಂದು ವಿನೋದ್ ರಾಜ್ ಹೇಳಿದ್ದಾರೆ.

  ಲೀಲಾವತಿ ಮತ್ತು ವಿನೋದ್ ರಾಜ್ ಮಾತನಾಡಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

  English summary
  Actress leelavathi and vinod raj condolence to dr shivakumara swamiji death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X