twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಾಲಿಯ ಸೂಪರ್ ಸ್ಟಾರ್ ಸೌಮಿತ್ರಾ ಚಟರ್ಜಿ ಕೋವಿಡ್‌ಗೆ ಬಲಿ

    |

    ಬೆಂಗಾಲಿ ಭಾಷಾ ಸಿನಿಮಾದ ಸೂಪರ್ ಸ್ಟಾರ್, ದಂತಕತೆ ಎಂದೇ ಕರೆಯಲಾಗುವ ನಟ ಸೌಮಿತ್ರಾ ಚಟರ್ಜಿ ಭಾನುವಾರ (ನವೆಂಬರ್ 15) ಕೊನೆ ಉಸಿರೆಳೆದಿದ್ದಾರೆ.

    ಸೌಮಿತ್ರಾ ಚಟರ್ಜಿ ಅವರಿಗೆ ಒಂದು ತಿಂಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು, 85 ವರ್ಷ ವಯಸ್ಸಿನ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರನ್ನು ಅಕ್ಟೋಬರ್ 6 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ಸೌಮಿತ್ರಾ ಚಟರ್ಜಿ, ಬೆಂಗಾಲಿ ಭಾಷೆಯ ಮೊದಲ ಸೂಪರ್ ಸ್ಟಾರ್, 1956 ರಲ್ಲಿ ಸೌಮಿತ್ರಾ ಅವರು ಮೊದಲು ಕ್ಯಾಮೆರಾ ಎದುರಿಸಿದ್ದು, ಆಸ್ಕರ್ ಗೌರವಾನ್ವಿತ ಸತ್ಯಜಿತ್ ರೇ ಅವರ ನಿರ್ದೇಶನದ ಅಪುರ್ ಸಂಸಾರ್ ಸಿನಿಮಾಕ್ಕಾಗಿ. ಅಲ್ಲಿಂದ ಹಿಂತಿರುಗಿ ನೋಡಿದ್ದೇ ಇಲ್ಲ ಸೌಮಿತ್ರಾ.

     Legendary Bengali Super Star Soumitra Chatterjee Passed Away

    ಭಾರತದ ಅತ್ಯುತ್ತಮ ನಿರ್ದೇಶಕ ಸತ್ಯಜಿತ್ ರೇ ಅವರ 14 ಸಿನಿಮಾಗಳಲ್ಲಿ ಸೌಮಿತ್ರಾ ಚಟರ್ಜಿ ನಟಿಸಿದ್ದರು. 1970-80 ರ ಸಮಯದಲ್ಲಿ ಬೆಂಗಾಲಿ ಸಿನಿಮಾ ಎಂದರೆ ಸೌಮಿತ್ರ ಚಟರ್ಜಿ ಎಂಬಂಥಹಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೌಮಿತ್ರಾ ನಟಿಸಿದ ಬಹುತೇಕ ಸಿನಿಮಾಗಳೆಲ್ಲವೂ ಹಿಟ್ ಎನಿಸಿಕೊಂಡಿದ್ದವು.

    ಸತ್ಯಜಿತ್ ರೇ ಮಾತ್ರವಲ್ಲದೆ, ಬೆಂಗಾಲಿ ನಿರ್ದೇಶಕರುಗಳಾದ ಮೃನಾಲಿ ಸೇನ್, ತಪನ್ ಸಿನ್ಹಾ ಅಂಥಹಾ ಸೂಕ್ಷ್ಮ ಸಿನಿಮಾ ನಿರ್ದೇಶಕರುಗಳೊಟ್ಟಿಗೂ ಹಲವಾರು ನೆನಪುಳಿಯುವ ಸಿನಿಮಾಗಳನ್ನು ನೀಡಿದ್ದಾರೆ ಸೌಮಿತ್ರ ಚಟರ್ಜಿ.

    Recommended Video

    ಸೈಬರ್ ರಾಣೆ ಮೆಟ್ಟಿಲೇರಿದ Vinod Raj | Filmibeat Kannada

    ಮೂರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ಸೌಮಿತ್ರಾ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಸಹ ಪಡೆದಿದ್ದಾರೆ. ಅದು ಮಾತ್ರವಲ್ಲದೆ, ಫ್ರಾನ್ಸ್‌ನ ಅತ್ಯುನ್ನತ ನಾಗರೀಕ ಪ್ರಶಸ್ತಿಯನ್ನೂ ಸಹ ಸೌಮಿತ್ರಾ ಪಡೆದುಕೊಂಡಿದ್ದಾರೆ.

    English summary
    Legendary Bengali movie actor Soumitra Chatterjee passed away due to COVID 19. He acted in more than 100 movies in Bengali.
    Sunday, November 15, 2020, 14:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X