»   » ಶಂಕರನಾಗ್ ನಮ್ಮೊಂದಿಗಿಲ್ಲದ 25ನೇ ಹುಟ್ಟುಹಬ್ಬ: ವಿ ಮಿಸ್ ಯು ಶಂಕ್ರಣ್ಣ

ಶಂಕರನಾಗ್ ನಮ್ಮೊಂದಿಗಿಲ್ಲದ 25ನೇ ಹುಟ್ಟುಹಬ್ಬ: ವಿ ಮಿಸ್ ಯು ಶಂಕ್ರಣ್ಣ

Posted By: ಶ್ರೀನಿವಾಸ ಜಿ ಬಿ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಇಂದು (ನ 9) ನಾಡು ಕಂಡ ಮಹಾನ್ ಕಲಾವಿದ ಶಂಕರನಾಗ್ ಅವರ ಜನ್ಮದಿನ, ನಮ್ಮೊಂದಿಗಿಲ್ಲದ 25ನೇ ವರ್ಷ. ಶಂಕರನಾಗ್ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾ, ನಮ್ಮ ಓದುಗ ಶ್ರೀನಿವಾಸ್ ಬರೆದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. (ಸಂ)

  ಅತಿ ಚಿಕ್ಕ ವಯಸ್ಸಿನಲ್ಲಿ ಅತಿ ದೊಡ್ಡ ಸಾಧನೆಗೆ ಹೆಸರಾದವರು ದೇಶ ಕಂಡ ಅಪ್ರತಿಮ ಕಲಾವಿದ ದಿವಂಗತ ಶಂಕರನಾಗ್. ನವೆಂಬರ್ 9, 1954 ರಂದು ಜನಿಸಿದ ಶಂಕರನಾಗ್, ಸೆಪ್ಟಂಬರ್ 1990 ರಂದು ರಸ್ತೆ ಅಪಘಾತದಲ್ಲಿ ನಿಧನರಾದರು. ದೈಹಿಕವಾಗಿ ಅವರು ಇಲ್ಲದೇ ಅಭಿಮಾನಿಗಳು ಆಚರಿಸಿಕೊಳ್ಳುತ್ತಿರುವ 25ನೇ ವರ್ಷದ ಹುಟ್ಟುಹಬ್ಬ.

  ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದಲ್ಲೇ ಹೆಸರುವಾಸಿ ನಿರ್ದೇಶಕ, ನಿರ್ಮಾಪಕ, ಉತ್ತಮ ನಟನೆಂದು ಪ್ರಸಿದ್ದಿ ಪಡೆದ ಶಂಕರನಾಗ್ ಅವರ ಅತಿ ಅಲ್ಪ ಕಾಲದಲ್ಲಿ ಪಡೆದ ಪ್ರಸಿದ್ದಿ.ಕೀರ್ತಿ, ಜನಬಲ ಆಕಾಶದಷ್ಟು. (ಶಂಕರ್ ನಾಗ್ ಕನಸು ಕಂಡಿದ್ದು ನಮಗಾಗಿ)

  ತನ್ನ ಮೊಟ್ಟ ಮೊದಲ ಚಿತ್ರಕ್ಕೆ ಸ್ವರ್ಣ ಕಮಲ ಪದಕವನ್ನ ಪಡೆದ ಶಂಕರ್, ನಾಟಕರಂಗದಲ್ಲೂ ವಿಭಿನ್ನ ಪ್ರಯೋಗಗಳನ್ನು ಮಾಡಿ ಅಲ್ಲೂ ಯಶಸ್ಸಿನ ಕುದುರೆಯನ್ನು ಏರಿದಂತಹ ವ್ಯಕ್ತಿ. ಪ್ರಶಸ್ತಿ ಎಂಬುದು ಶಂಕರ್ ಅವರಿಗೆ ಸಾಮಾನ್ಯವಾಗಿತ್ತು ಅದಕ್ಕಾಗಿ ಅವರು ಎಂದೂ ಅದರ ಹಿಂದೆ ಬಿದ್ದವರಲ್ಲ.

  ಆಥವಾ ಈಗಿನವರ ತರಹ ಅದಕ್ಕಾಗಿ ಲಾಬಿ ನೆಡೆಸಿದವರಲ್ಲ. ಚಿತ್ರರಂಗಕ್ಕೆ ಬಂದ ಕೇವಲ ಹತ್ತು ವರ್ಷದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಅಸಾಧ್ಯವಾದ ಸಾಧನೆಯನ್ನು ಮಾಡಿದಂತಹ ವ್ಯಕ್ತಿ. 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಶಂಕರನಾಗ್, ತನ್ನ ವೃತ್ತಿ ಬದುಕಿನಲ್ಲಿ ಮಾಡಿದಂತಹ ಸಾಧನೆ ಅತಿರಥ ಮಹಾರಥರಿಗೂ ಸವಾಲು ಎಸೆಯುವಂತಹದ್ದು.

  ಮನೆ ಮಂದಿಯೆಲ್ಲಾ ಮುಜುಗರವಿಲ್ಲದೆ ವೀಕ್ಷಿಸಬಹುದಾದಂತಹ, ಸದಭಿರುಚಿಯ, ಸಂದೇಶವಿರುತ್ತಿದ್ದ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ಶಂಕರನಾಗ್ ಸೈ ಎನಿಸಿಕೊಂಡಿದ್ದರು. ಈಗಿನ ಚಿತ್ರಗಳ ಹಾಗೆ ಯಥಾವತ್ ನಕಲನ್ನು ಮಾಡಿಯೋ ಅಥವಾ ಪೂರಾ ಭಟ್ಟಿಇಳಿಸಿ ಬೆನ್ನು ತಟ್ಟಿಸಿಕೊಳ್ಳುವ ಜಾಯಮಾನ ಅವರದಾಗಿರಲಿಲ್ಲ.

  ಅವರು ನಿರ್ಮಿಸಿದ ಮಾಲ್ಗುಡಿ ಡೇಸ್ ಧಾರಾವಾಹಿ ಶಂಕರನಾಗ್ ಅವರಿಗೆ ದೇಶಾದ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಶಂಕರ್ ಅಭಿನಯಿಸಿದ ಚಿತ್ರಗಳು ನಿರ್ಮಾಪಕರಿಗೆ ಎಂದು ಮೋಸವನ್ನೂ ಮಾಡಲಿಲ್ಲ. ಮುಂದೆ ಓದಿ..

  ಸಂಭಾವನೆಯ ಬಗ್ಗೆ ತಲೆಕೆಡಿಸಿಕೊಳ್ಳದ ಶಂಕರನಾಗ್

  ಸಂಭಾವನೆಯ ವಿಷಯದಲ್ಲೂ ತಲೆಕೆಡಿಸಿಕೊಳ್ಳದೇ, ಇಮೇಜಿಗೆ ಜೋತು ಬೀಳದ ಸದಾ ವಿಭಿನ್ನ ಪ್ರಯೋಗಗಳನ್ನು ಮಾಡುತ್ತ ನಿಂತಲ್ಲಿ ನಿಲ್ಲದೇ ಪಾದರಸದಂತಹ ವ್ಯಕ್ತಿತ್ವದ ಶಂಕರನಾಗ್, ಏನಾದರು ಮಾಡುತ್ತಿರು ತಮ್ಮಾ ನೀ ಸುಮ್ಮನಿರಬ್ಯಾಡ ಎಂದು ಯುವಪೀಳಿಗೆಗೆ ಹೇಳುತ್ತಲೇ ಇದ್ದರು.

  ಸಂಕೇತ್ ಸ್ಟುಡಿಯೋ

  ಕನ್ನಡ ಚಿತ್ರರಂಗ ನಿಂತ ನೀರಾಗಬಾರದು ಎಂದು ಹಗಲು ರಾತ್ರಿ ದುಡಿತದ ನಡುವೆ ಸಂಕೇತ್ ಸ್ಟುಡಿಯೋವನ್ನು ಹುಟ್ಟುಹಾಕಿದ್ದ ಶಂಕರನಾಗ್, ಚೆನ್ನೈಗೆ ಹಾರುತ್ತಿದ್ದ ನಿರ್ಮಾಪಕರಿಗೆ ನೆರವಾದರು. ಜೊತೆಗೆ, ಸಂಕೇತ್ ನಾಟಕ ತಂಡವನ್ನ ಕಟ್ಟಿ ಆ ಮೂಲಕ ಅನೇಕ ಹೊಸ ಪ್ರತಿಭೆಗಳನ್ನು ಕರ್ನಾಟಕ ಮತ್ತು ಚಿತ್ರರಂಗಕ್ಕೆ ಪರಿಚಯಿಸಿದರು.

  ಸ್ವಾರ್ಥ ಕಲಾವಿದನಾಗದ ಶಂಕರನಾಗ್

  ಸ್ವಾರ್ಥ ಕಲಾವಿದನಾಗದೇ, ಎಲ್ಲರನ್ನೂ ಸಮಾನವಾಗಿ ಕಾಣುತಿದ್ದರಿಂದಲೇ ಚಿತ್ರರಂಗದಲ್ಲಿ ಮತ್ತು ಅಭಿಮಾನಿ ಬಳಗದಲ್ಲಿ ಈ ಮಟ್ಟಿನ ಹೆಸರು ಪಡೆಯಲು ಶಂಕ್ರಣ್ಣನಿಗೆ ಸಾಧ್ಯವಾಯಿತು. ಅವರಿಂದ ಉಪಯೋಗ ಪಡೆದ ಜನರು ಚಿತ್ರರಂಗದಲ್ಲಿ ಸಾವಿರಾರು, ಅವರನ್ನ ನೆನೆಸದ ಜನರು ಚಿತ್ರರಂಗದಲ್ಲಿ ಇಲ್ಲವೇ ಇಲ್ಲ.

  ಕೇವಲ ಹತ್ತು ವರುಷದಲ್ಲಿ 3 ರಾಷ್ಟ್ರೀಯ ಪ್ರಶಸ್ತಿ

  ಶಂಕರ್ ಅವರು ಆಕಾಶದಲ್ಲಿ ಮಿನುಗುತ್ತಿರುವ ಧ್ರುವ ನಕ್ಷತ್ರ. ಕೇವಲ ತನ್ನ ಮಾತು ಮತ್ತು ವಿಶಿಷ್ಟವಾದ ನಡಿಗೆಯಿಂದ ಜನಪ್ರಿಯನಾದ ವ್ಯೆಕ್ತಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ವಿರಳ. ಶಂಕರ್ ಅವರಂತಹ ವ್ಯಕ್ತಿ ಮತ್ತೊಮ್ಮೆ ಹುಟ್ಟಲಾರರು. ಮತ್ತೊಬ್ಬ ಹುಟ್ಟಿ ಬಂದರೆ ಅವರು ಶಂಕರ್ ಆಗಿರುತ್ತಾರೆ. ಚಿತ್ರರಂಗದಲ್ಲಿ ಇದ್ದ ಕೇವಲ ಹತ್ತು ವರುಷದಲ್ಲಿ 3 ರಾಷ್ಟ್ರೀಯ ಹಾಗು ಲೆಕ್ಕವಿಲ್ಲದಷ್ಟು ಇತರ ಪ್ರಶಸ್ತಿ ತೆಗೆದುಕೊಂಡು, ಚಿತ್ರೋದ್ಯಮದ ಪಾದರಸವೆಂದೇ ಹೆಸರಾಗಿದ್ದ ಶಂಕರನಾಗ್, ಬಹುಷಃ ಇಂದು ಇದ್ದಿದ್ದರೆ ಚಿತ್ರರಂಗದ ಸ್ವರೂಪವೇ ಬದಲಾಗುತ್ತಿತ್ತೇನೋ?

  ಶಂಕರ್ ಇಂದು ಕೇವಲ ನೆನೆಪು

  ಕಾಲವೆಂಬ ವಿಧಿಗೆ ಇದು ಸಹಿಸಲು ಆಸಾಧ್ಯವಾಗಿ ತನ್ನೊಡನೆ ಅದಮ್ಯ ಕಾಲದ ಚೇತನವನ್ನು ಕರುಣೆ ತೋರಿಸದೇ ಎಳೆದುಕೊಂಡು ಹೋಯಿತು. 'ಬದುಕು ಜಟಕಾಬಂಡಿ ವಿಧಿ ಇದರ ಸಾಹೇಬ', 'ಕುದುರೆ ನೀನ್ ಅವನ್ ಪೇಳ್ದಂತ್ತೆ ನಡೆ ಮದಿವೆಗೆ ಇಲ್ಲ ಮಸಣಕೆ' ಎಂಬಂತೆ ಕರ್ನಾಟಕದ ಸಮಸ್ತ ಜನರನ್ನು ಬಿಟ್ಟು ಮಸಣಕೆ ಹೋದ ಶಂಕರ್ ಇಂದು ಕೇವಲ ನೆನೆಪು ಮಾತ್ರ.

  ನಮ್ಮೊಂದಿಗಿಲ್ಲದ 25ನೇ ಜನ್ಮದಿನಾಚರಣೆ

  ಒಂದಾನೊಂದು ಕಾಲದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿ ಸೀತಾ-ರಾಮುವಾಗಿ ಬೆಳೆದು, ಆಟೋರಾಜನಾಗಿ ಮೆರೆದು, ತರ್ಕಕ್ಕೆ ತಕ್ಕ ಉತ್ತರ ನೀಡಿ, ಸಾಂಗ್ಲಿಯಾನನಾಗಿ ಕರ್ನಾಟಕದ ತುಂಬಾ ಜಯಭೇರಿ ಬಾರಿಸಿ, ಭಾರಿ ಭರ್ಜರಿ ಭೇಟೆಯನ್ನು ಆಡಿ, ನೋಡಿ ಸ್ವಾಮಿ ನಾವ್ ಇರೋದೆ ಹೀಗೆ ಎಂದು ಹೇಳಿ, ಇದು ಸಾದ್ಯ ಎಂದು ತೋರಿಸಿ, ಭಲೇ ಚತುರನೆನೆಸಿಕೊಂಡು ಹೊಸಜೀವನವನ್ನು ಪ್ರಾರಂಭಿಸುವ ಮುನ್ನವೆ ತನ್ನ ಪ್ರಾಣವನ್ನು ಆಕ್ಸಿಡೆಂಟ್ ನಲ್ಲಿ ಅರ್ಪಿಸಿ, ಜೊತೆ ಜೊತೆಯಲಿ ಇರುವೆನು ಹೀಗೆ ಎಂಬ ಮಾತನ್ನು ಉಳಿಸಿಕೊಳ್ಳದೆ, ಮಿಂಚಿನ ಓಟದಲ್ಲಿ ಕಣ್ಮರೆಯಾಗಿ ಹೋದ ಶಂಕರ್ ಅವರ ಸಾವು ನ್ಯಾಯವೇ? ನ್ಯಾಯ ಎಲ್ಲಿದೆ? ಕೊನೆಗೂ ವಿಧಿ ತನ್ನ ಸೇಡನ್ನು ಮೂಗನ ಮೇಲೆ ತೀರಿಸಿಕೊಂಡಿತು. ಕನ್ನಡ ಚಿತ್ರರಂಗಕ್ಕೆ ಎಂದೂ ಆರದಗಾಯವನ್ನು ಶಂಕರ್ ಅವರ ಸಾವು ಮಾಡಿಹೋಯಿತು.

  English summary
  Legendary film icon Shankar Nag's 62nd Birthday, a memory

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more