»   » ದರ್ಶನ್, ಸುದೀಪ್ ಅವರಿಗೆ ಅಭಿಮಾನಿಯೊಬ್ಬನ ಪತ್ರ

ದರ್ಶನ್, ಸುದೀಪ್ ಅವರಿಗೆ ಅಭಿಮಾನಿಯೊಬ್ಬನ ಪತ್ರ

By: ಅಭಿಮಾನಿ
Subscribe to Filmibeat Kannada

ಕಿಚ್ಚ ಸುದೀಪಣ್ಣ
ದಚ್ಚು ಬಾಸ್...

ಅಣ್ಣ ನಿಮ್ ಸಿನಿಮಾ ಸೂಪರ್. ನೀವ್ ಸ್ಕ್ರೀನ್ ಮೇಲೆ ಬಂದ್ರೆ ನಮ್ ಕಾಲು ನೆಲದ ಮೇಲೆ ನಿಲ್ಲೋದೇ ಇಲ್ಲ. ನಿಮ್ಮ ಫೈಟ್ಸು, ಡೈಲಾಗು, ಆಕ್ಟಿಂಗು ಎಲ್ಲ ಸೂಪರ್. ನೀವ್ ಮಾಡಿರೋ ಒಂದೊಂದ್ ಸಿನಿಮಾನೂ ನಾಲ್ಕು, ಐದು ಸಾರಿ ನೋಡಿದ್ದೀನಿ. ಅದೇನೋ ಖುಷಿ ಒಂದ್ಸಾರಿ ನೋಡಿದ್ರೆ ಮತ್ತೆ ನೋಡ್ಬೇಕು ಅನ್ಸುತ್ತೆ. ಅದೆಲ್ಲ ಅಭಿಮಾನಕ್ಕೋ ಏನೋ.

ಆದ್ರೆ ಒಂದ್ ವಿಷ್ಯ. ನಿಮ್ ಸಿನಿಮಾ ಅಂದ್ರೆ ಹಿಂದೆ ಮುಂದೆ ನೋಡ್ದೆ ಫಸ್ಟ್ ಡೇ ಫಸ್ಟ್ ಶೋ ಥಿಯೇಟರ್ ಗೆ ನುಗ್ಗಿ ನೋಡೋರ್ ನಾವು. ನಮ್ಮ ಕಿಚ್ಚ ನಮ್ಮ ದಚ್ಚು ಸಿನಿಮಾ ಹೇಗಿದ್ರೂ ನಮಗಿಷ್ಟ. ಆದರೆ ಎಲ್ಲರಿಗೂ ಇಷ್ಟ ಆಗ್ಬೇಕು ಅಂತ ಇಲ್ವಲ್ಲಾ. [ಮೈಸೂರಲ್ಲಿ ಮನೆಮನೆಗೆ ಹಾಲು ಮಾರ್ತಿದ್ರು ದರ್ಶನ್]

Sudeep and Darshan

ಇದನ್ನ ಯಾಕ್ ಹೇಳ್ತಿದ್ದೀನಿ ಅಂದ್ರೆ; ಇತ್ತೀಚೆಗೆ ನಮ್ಮೂರ್ ಥಿಯೇಟರ್ ನಲ್ಲಿ 'ಮಾಣಿಕ್ಯ' ಸಿನಿಮಾ ನೋಡಿ ಹೊರಗಡೆ ಬಂದವರೊಬ್ಬರು ಹೇಳಿದ ಮಾತು ಕೇಳಿ ನಿಮ್ಗೆ ಇದನ್ನ ಹೇಳ್ಬೇಕು ಅನ್ನಿಸ್ತು. ಮಾಣಿಕ್ಯ ಸಿನಿಮಾ ಏನೋ ಓಕೆ ಆದ್ರೆ ಹೀರೋಯಿನ್ ಬೇರೆ ಇರಬೇಕಿತ್ತು ಅಂತಿದ್ರು.

ಒಬ್ಬರಾದ್ರೂ ಸೂಟಾಗೋದ್ ಬೇಡ್ವಾ, ಆಗ ಹೌದಲ್ವಾ ಯಾರೂ ನಿಮ್ಗೆ ಸೂಟಾಗ್ತಿಲ್ಲ ಅಂತ ನಂಗೂ ಅನ್ನಿಸ್ತು. ಅವರು ಹೀರೋಯಿನ್ ಗಳ ಬಗ್ಗೆ ಇನ್ನೂ ಏನೇನೋ ಹೇಳಿದ್ರು. ಆದ್ರೆ ಅದನ್ನೆಲ್ಲಾ ಹೇಳಕ್ಕಾಗಲ್ಲ. ಇನ್ನು ದರ್ಶನಣ್ಣ ನಿಮ್ ಬೃಂದಾವನ ಸಿನಿಮಾ ಎಲ್ಲರಿಗೂ ಇಷ್ಟ ಆಗ್ದೇ ಇರೋದಕ್ಕೂ ಇದೇ ಕಾರಣ ಅಂತ ನಂಗೆ ಮೊದ್ಲೇ ಅನ್ನಿಸಿತ್ತು.

ಹೌದಲ್ವಾ ನಿಮ್ಮ ಅಭಿಮಾನಿಗಳು ನಮ್ಗೇನೋ ನೀವ್ ಏನ್ ಮಾಡಿದ್ರೂ ಇಷ್ಟಾನೇ. ಆದ್ರೆ ಸಿನಿಮಾ ನೋಡೋಕೆ ಬರೋ ಎಲ್ಲರಿಗೂ ಇಷ್ಟ ಆಗ್ಬೇಕು ಅಂತ ಇಲ್ಲ ಅಲ್ವಾ. ಅದಕ್ಕೆ ಅಣ್ಣ ಇನ್ನಾದ್ರೂ ಹಿಂಗ್ ಮಾಡ್ಬೇಡಿ. ನಿಮಗೆ ಸೂಟಾಗೋ ಹೀರೋಯಿನ್ನನ್ನ ಆಯ್ಕೆ ಮಾಡ್ಕೊಳ್ಳಿ...ನಿಮ್ಮನ್ನ ಪ್ರೀತಿಸೋ ನಿಮ್ಮ ದೊಡ್ಡ ಅಭಿಮಾನಿ.

English summary
Challenging Star Darshan and Kichcha Sudeep's one of the fan writes a letter and suggests both of them are not selecting perfect heroines.
Please Wait while comments are loading...