»   » 'ಪ್ರೀತಿಯೊಂದೇ ಜೀವನ ಅಲ್ಲ' ಕ್ರಿಯಾಶೀಲ ಕಿರುಚಿತ್ರ

'ಪ್ರೀತಿಯೊಂದೇ ಜೀವನ ಅಲ್ಲ' ಕ್ರಿಯಾಶೀಲ ಕಿರುಚಿತ್ರ

Posted By:
Subscribe to Filmibeat Kannada

ಕಳೆದ ವಾರ ಕಿರು ಚಿತ್ರ 'ಲೈಫ್ ಈಸ್ ಲವ್, ಲವ್ ಈಸ್ ನಾಟ್ ಲೈಫ್' ಪತ್ರಿಕಾ ಪ್ರದರ್ಶನವನ್ನು ನಟ, ನಿರ್ಮಾಪಕ ಅರವಿಂದ್ ಏರ್ಪಾಡು ಮಾಡಿದ್ದರು. 30 ನಿಮಿಷದಲ್ಲಿ ಪ್ರೀತಿ ಹಾಗೂ ಜೀವನದ ಬಗ್ಗೆ ರಸವತ್ತಾಗದ ಕ್ರಿಯಾಶೀಲ ನಿರೂಪಣೆ ಹಾಗೂ ನಾಲ್ಕು ಹಾಡುಗಳನ್ನು ಒಳಗೊಂಡ ಕಿರು ಚಿತ್ರ ಅರವಿಂದ್ ಟಾಕೀಸ್ ಕಡೆಯಿಂದ ತಯಾರಾಗಿದೆ.

ಜೀವನದಲ್ಲಿ ಪ್ರೀತಿ ಎಂಬುದು ಒಂದು ಘಟ್ಟ. ಪ್ರೀತಿಯೊಂದೇ ಜೀವನ ಅಲ್ಲ ಎಂಬ ಎಳೆಯಿಟ್ಟುಕೊಂಡು ಕಥೆ ರಚಿಸಿರುವವರು ಅರವಿಂದ್. ಮೂಲತಃ ಸಿವಿಲ್ ಇಂಜಿನೀರ್ ಆಗಿರುವ ಅರವಿಂದ್ ಅವರ ಬಹುದಿನಗಳ ಕನಸು ಈ ಕಿರು ಚಿತ್ರ. ಇದರಲ್ಲಿ ಅವರು ಮೂರು ಪಾತ್ರಗಳನ್ನು ನಿಭಾಯಿಸಿದ್ದಾರೆ.

Life is Love, Love is not Life

ಒಂದು ಪೂರ್ಣ ಪ್ರಮಾಣದ ಚಿತ್ರ ಮಾಡುವುದಕ್ಕೆ ಪೂರ್ವತಯಾರಿಯಂತೆ ಅವರು ಈ ಕಿರು ಚಿತ್ರವನ್ನು ತಯಾರಿಸಿ ಅನುಭವ ಪಡೆದುಕೊಂಡಿದ್ದಾರೆ. ಮೂರು ಕ್ಯಾಮರಗಳಲ್ಲಿ, ಎರಡು ದಿನಗಳಲ್ಲಿ ಈ ಕಿರು ಚಿತ್ರವನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರದ ಸಂಗೀತ ನಿರ್ದೇಶಕ ದಿನೇಶ್ ಆರು ಘಂಟೆಗಳಲ್ಲಿ ಸಂಗೀತ ನಿರ್ದೇಶನ ಮಾಡಿ ಕಲೆಗಾರಿಕೆ ತೋರಿಸಿದ್ದಾರೆ.

'ಲೈಫ್ ಈಸ್ ಲವ್, ಲವ್ ಈಸ್ ನಾಟ್ ಲೈಫ್' ಕಿರು ಚಿತ್ರದ ನಿರ್ದೇಶಕರು ಮಿಥುನ್. 15 ಸಿನಿಮಾಗಳಿಗೆ ಸಹಾಯಕರಾಗಿ ದುಡಿದಿರುವ ಇವರು, 2500 ಕಂತುಗಳ ಅನೇಕ ಧಾರವಾಹಿಗಳಿಗೆ ನಿರ್ದೇಶನ ಮಾಡಿದ ಭಾರೀ ಅನುಭವ ಹೊಂದಿದ್ದಾರೆ.

ಈ ಕಿರುಚಿತ್ರಕ್ಕೆ ಬಹುತೇಕ ಕೆಲಸವನ್ನು ಅರವಿಂದ್ ಅವರೇ ಮಾಡಿರುವುದರಿಂದ ಅವರಿಗೇ ಕ್ರೆಡಿಟ್ ಸಲ್ಲಬೇಕು ಎಂದು ಮಿಥುನ್ ವಿನಮ್ರತೆಯಿಂದ ಹೇಳಿಕೊಳ್ಳುತ್ತಾರೆ. ಈ ಕ್ರಿಯಾಶೀಲ ಕಿರು ಚಿತ್ರದ ಕಥಾನಾಯಕಿ ಶ್ರೀಪ್ರಿಯ. ಇದು ಅವರ ಪಾಲಿಗೆ ಮೊದಲ ಅನುಭವವಂತೆ. ಆದರೂ ಲೀಲಾಜಾಲವಾಗಿ ಅಭಿನಯಿಸಿದ್ದಾರೆಂಬುದು ಚಿತ್ರ ತಂಡದ ಅಭಿಪ್ರಾಯ. (ಫಿಲ್ಮಿಬೀಟ್ ಕನ್ನಡ)

ಈ ಕಿರುಚಿತ್ರಕ್ಕೆ ಬಹುತೇಕ ಕೆಲಸವನ್ನು ಅರವಿಂದ್ ಅವರೇ ಮಾಡಿರುವುದರಿಂದ ಅವರಿಗೇ ಕ್ರೆಡಿಟ್ ಸಲ್ಲಬೇಕು ಎಂದು ಮಿಥುನ್ ವಿನಮ್ರತೆಯಿಂದ ಹೇಳಿಕೊಳ್ಳುತ್ತಾರೆ. ಈ ಕ್ರಿಯಾಶೀಲ ಕಿರು ಚಿತ್ರದ ಕಥಾನಾಯಕಿ ಶ್ರೀಪ್ರಿಯ. ಇದು ಅವರ ಪಾಲಿಗೆ ಮೊದಲ ಅನುಭವವಂತೆ. ಆದರೂ ಲೀಲಾಜಾಲವಾಗಿ ಅಭಿನಯಿಸಿದ್ದಾರೆಂಬುದು ಚಿತ್ರ ತಂಡದ ಅಭಿಪ್ರಾಯ. (ಫಿಲ್ಮಿಬೀಟ್ ಕನ್ನಡ)

English summary
'Life is Love, Love is not Life' short Movie by directed by Mithun. The movie is alls about love and life. The actress Sripirya plays a lady lead role in the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada