For Quick Alerts
  ALLOW NOTIFICATIONS  
  For Daily Alerts

  ಇಮ್ರಾನ್ 'ಉಪ್ಪು-ಹುಳಿ'ಗೆ 'ಖಾರ' ಹಾಕಲಿರುವ ಹೊಸ ಹೀರೋ ಯಾರು.?

  By Suneetha
  |

  ಸ್ಯಾಂಡಲ್ ವುಡ್ ನ ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ ಅವರು ನಟಿ ಮಾಲಾಶ್ರೀ ಅವರ ಜೊತೆ ಕೋಳಿ ಜಗಳ ಆಡಿ, ತದನಂತರ ಎಲ್ಲವೂ ಸುಖಾಂತ್ಯ ಕಂಡಿದ್ದು ಹಳೇ ವಿಷಯ.

  ನಂತರ ಇಬ್ಬರು ಒಂದಾಗಿ 'ಜೀ ಕನ್ನಡ' ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದರು. ಇದೀಗ ಮತ್ತೆ 'ಉಪ್ಪು-ಹುಳಿ-ಖಾರ' ಟ್ರ್ಯಾಕ್ ಗೆ ಮರಳಿರುವ ಇಮ್ರಾನ್ ಅವರು ತಮ್ಮ ಚಿತ್ರಕ್ಕೆ ಹೊಸ ನಾಯಕನನ್ನು ಆಯ್ಕೆ ಮಾಡಿದ್ದಾರೆ.

  ಸದಾ ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಡ್ಯಾನ್ಸ್ ಮಾಸ್ಟರ್ ಕಮ್ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರು ಈ ಬಾರಿ ಕೂಡ ಹೊಸ ಪ್ರತಿಭೆಯನ್ನು ತಮ್ಮ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ.['ಉಪ್ಪು ಹುಳಿ ಖಾರ' ತಿನ್ನೋಕೆ ರೆಡಿಯಾದ ಇಮ್ರಾನ್ ಸರ್ದಾರಿಯಾ]

  ಈ ಮೊದಲು ಇಮ್ರಾನ್ ಅವರ ಗರಡಿಯಲ್ಲಿ ಪಳಗಿದ ನಟಿ ಶ್ರುತಿ ಹರಿಹರನ್ ಅವರು ಇದೀಗ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿ ಜನಪ್ರಿಯ ನಟಿಯಾಗಿ ಹೊರಹೊಮ್ಮಿದ್ದಾರೆ.

  ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಶರತ್ ಎಸ್ ಅವರು. ಅಷ್ಟಕ್ಕೂ ಈ ಶರತ್ ಎಸ್ ಯಾರು?, ಅನ್ನೋದನ್ನ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....

  ಶರತ್ ಎಸ್

  ಶರತ್ ಎಸ್

  ಖ್ಯಾತ ನೃತ್ಯಪಟುವಾಗಿರುವ 26 ವರ್ಷ ವಯಸ್ಸಿನ ಶರತ್ ಎಸ್ ಅವರು ವೃತ್ತಿಯಲ್ಲಿ ಸತತ ಎಂಟು ವರ್ಷಗಳಿಂದ ನೃತ್ಯ ತರಬೇತುದಾರರಾಗಿದ್ದಾರೆ.[ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!]

  ಲೈಫ್ ಸೂಪರ್ ಗುರು ವಿನ್ನರ್

  ಲೈಫ್ ಸೂಪರ್ ಗುರು ವಿನ್ನರ್

  'ಜೀ ಕನ್ನಡ' ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲೈಫ್ ಸೂಪರ್ ಗುರು' ರಿಯಾಲಿಟಿ ಶೋನ ವಿನ್ನರ್ ಪಟ್ಟವನ್ನು ಕೂಡ ಶರತ್ ಅವರು ತಮ್ಮ ಮುಡಿಗೇರಿಸಿಕೊಂಡಿದ್ದರು.[ಸಂಧಾನ ಸಕ್ಸಸ್: ಒಂದಾದ ಮಾಲಾಶ್ರೀ-ಇಮ್ರಾನ್ ಸರ್ದಾರಿಯಾ]

  ನಿರೂಪಕ ಕೂಡ

  ನಿರೂಪಕ ಕೂಡ

  ಅಲ್ಲದೇ 'ಜೀ ಕನ್ನಡ' ವಾಹಿನಿಯಲ್ಲಿ ಬರುತ್ತಿದ್ದ 'ನಮ್ ದೇಶದ್ ಕಥೆ' ಎಂಬ ಕಾರ್ಯಕ್ರಮಕ್ಕೆ ಕೂಡ ಶರತ್ ಅವರು ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ.

  ಬೆಳ್ಳಿತೆರೆಗೆ ಪದಾರ್ಪಣೆ

  ಬೆಳ್ಳಿತೆರೆಗೆ ಪದಾರ್ಪಣೆ

  ಇದೀಗ ಇಮ್ರಾನ್ ಸರ್ದಾರಿಯಾ ಅವರ 'ಉಪ್ಪು-ಹುಳಿ-ಖಾರ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿರುವ ಶರತ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

  ಅನುಶ್ರೀ ಜೊತೆ ಡ್ಯುಯೆಟ್

  ಅನುಶ್ರೀ ಜೊತೆ ಡ್ಯುಯೆಟ್

  ಈ ಚಿತ್ರದಲ್ಲಿ ನಟಿ ಕಮ್ ನಿರೂಪಕಿ ಅನುಶ್ರೀ ಅವರ ಜೊತೆ ಶರತ್ ಅವರು ಡ್ಯುಯೆಟ್ ಹಾಡಲಿದ್ದಾರೆ.

  ಪ್ರೇಮ್ ಮತ್ತು ಮಾನ್ವಿತಾ ಹರಿಶ್ ಗೆ ಡ್ಯಾನ್ಸ್ ಮಾಸ್ಟರ್

  ಪ್ರೇಮ್ ಮತ್ತು ಮಾನ್ವಿತಾ ಹರಿಶ್ ಗೆ ಡ್ಯಾನ್ಸ್ ಮಾಸ್ಟರ್

  ಅಂದಹಾಗೆ ಶರತ್ ಅವರು ನಟ ಪ್ರೇಮ್ ಮತ್ತು ನಟಿ ಮಾನ್ವಿತಾ ಹರೀಶ್ ಅವರಿಗೆ ವೈಯಕ್ತಿಕವಾಗಿ ನೃತ್ಯ ತರಬೇತಿಯನ್ನು ನೀಡಿದ್ದಾರೆ.

  ಮೂರು 'ಶ್ರೀ'ಗಳ ಜೊತೆ ಇಮ್ರಾನ್

  ಮೂರು 'ಶ್ರೀ'ಗಳ ಜೊತೆ ಇಮ್ರಾನ್

  ಈ ಚಿತ್ರದಲ್ಲಿ ನಟಿ ಮಾಲಾಶ್ರಿ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಜೊತೆಗೆ ನಟಿ ಅನುಶ್ರೀ ಮತ್ತು ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಅವರು ಕೂಡ ಮುಖ್ಯ ನಾಯಕಿಯರಾಗಿ ಮಿಂಚಿದ್ದಾರೆ.

  English summary
  'Life Super Guru' winner Sharath's Sandalwood debut in Imran Sardhariya's second directorial Kannada Movie 'Uppu Huli Kara'. Sharath paired opposite Actress Anushree in the film, plays one of the leads.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X