»   » ಅಜ್ಜನಿಗೆ ತಕ್ಕ ಮೊಮ್ಮಗ ವಿನಯ್ ರಾಜ್ ಕುಮಾರ್

ಅಜ್ಜನಿಗೆ ತಕ್ಕ ಮೊಮ್ಮಗ ವಿನಯ್ ರಾಜ್ ಕುಮಾರ್

By: ಜೀವನರಸಿಕ
Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಕುಟುಂಬದ ವ್ಯಕ್ತಿಗಳಲ್ಲಿ ಸಹಜವಾಗಿ ಸದ್ಗುಣ ಸಂಪನ್ನತೆ ಕೂಡಿ ಬರುತ್ತೆ ಅಂತ ಸ್ಯಾಂಡಲ್ ವುಡ್ ಕೊಂಡಾಡ್ತಿದೆ. ಇದಕ್ಕೆ ಕಾರಣವಾಗಿರೋದು ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್.

ಮೇ 7ಕ್ಕೆ ತಮ್ಮ 25ನೇ ಹುಟ್ಟುಹಬ್ಬ ಆಚರಿಸಿಕೊಂಡ ವಿನಯ್ ರಾಜ್ ಕುಮಾರ್ ಗೆ ತಂದೆ ರಾಘವೇಂದ್ರ ರಾಜ್ ಕುಮಾರ್ ರು.5 ಲಕ್ಷ ರುಪಾಯಿ ಕೊಡ್ತೀನಿ ಮಗನೆ ಹುಟ್ಟಿದ ಹಬ್ಬಕ್ಕೆ ಏನಾದ್ರೂ ನಿನಗಿಷ್ಟವಾಗಿದ್ದು ತೆಗೆದುಕೋ ಅಂದ್ರಂತೆ. [ಭೂಕಂಪ ಸಂತ್ರಸ್ತರಿಗೆ ಶಿವಣ್ಣ, ವಿನಯ್ ನೆರವಿನ ಹಸ್ತ]

Like grandfather, like grandson Vinay Rajkumar

ಸ್ವಲ್ಪ ಹೊತ್ತು ಯೋಚಿಸಿದ ವಿನಯ್ ರಾಜ್ ಕುಮಾರ್, ಆ ದುಡ್ಡು ನನಗೇನು ಬೇಡ. ಅದನ್ನು ನೇಪಾಳದ ಭೂಕಂಪ ಸಂತ್ರಸ್ತರಿಗೆ ಕೊಟ್ಟು ಬಿಡೋಣ ಅಂತ ಹೇಳಿದ್ರಂತೆ. ಮಗನ ನಿರ್ಧಾರ ನೋಡಿ ಖುಷಿಯಾದ ರಾಘಣ್ಣ, ಶಿವರಾಜ್ ಕುಮಾರ್ ಮತ್ತು ಪುನೀತ್ ಜೊತೆ ಮಾತನಾಡಿ ರಾಜ್ ಕುಟುಂಬದ ಕಡೆಯಿಂದ ರು.10 ಲಕ್ಷ ಹಣವನ್ನ ಕೊಡೋ ನಿರ್ಧಾರ ಮಾಡಿದ್ದಾರೆ.

Like grandfather, like grandson Vinay Rajkumar

ಶಿವಣ್ಣ, ರಾಘಣ್ಣ ಹಾಗೂ ಅವರ ಪುತ್ರ ವಿನಯ್ ರಾಜ್ ಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರುವಾರ (ಮೇ.7) ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿಯಾಗಿ, ಪ್ರಧಾನಮಂತ್ರಿಗಳ ಪರಿಹಾರ ನಿಧಿ ಹೆಸರಿಗೆ ಬರೆದ ರು.10 ಲಕ್ಷದ ಚೆಕ್ (ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್ ಅವರು ತಲಾ ರು.5 ಲಕ್ಷ) ಸಿದ್ದರಾಮಯ್ಯ ಅವರಿಗೆ ಹಸ್ತಾಂತರಿಸಿದರು. ಒಟ್ಟಾರೆಯಾಗಿ ವಿನಯ್ ರಾಜ್ ಅವರ ಅರ್ಥಪೂರ್ಣ ಹುಟ್ಟುಹಬ್ಬ ಅಲ್ಲವೇ?

English summary
Kannada films legendary actor late Dr.Rajkumar grandson Vinay Rajkumar celebrates his 25th birthday in a meaningful manner. His father gives Rs.5 lakhs as pocket money, but he donates it to Nepal Earthquake Relief Fund. Onece agin he proves the saying, "Like Father, Like Son, Like Grandson".

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada