For Quick Alerts
  ALLOW NOTIFICATIONS  
  For Daily Alerts

  ಹಿಂದಿಗೆ ರಿಮೇಕ್ ಆಗ್ತಿದೆ ಕನ್ನಡ ಮತ್ತೊಂದು ಹಿಟ್ ಸಿನಿಮಾ

  |

  ದಕ್ಷಿಣ ಭಾರತದ ಅನೇಕ ಸಿನಿಮಾಗಳು ಹಿಂದಿಯಲ್ಲಿ ರಿಮೇಕ್ ಆಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಸೌತ್‌ನಲ್ಲಿ ಹಿಟ್ ಆಗುತ್ತಿದ್ದಂತೆ ಬಾಲಿವುಡ್‌ನಲ್ಲಿ ರಿಮೇಕ್ ಮಾಡಲು ಸಜ್ಜಾಗಿರುತ್ತಾರೆ. ಅದರಲ್ಲೂ ತೆಲುಗು ಮತ್ತು ತಮಿಳಿನ ಅನೇಕ ಸಿನಿಮಾಗಳು ಬಾಲಿವುಡ್ ಕಡೆ ಮುಖಮಾಡಿವೆ. ಸೌತ್ ನಿಂದ ಹಿಂದಿಗೆ ರಿಮೇಕ್ ಆಗುತ್ತಿರುವ ಸಿನಿಮಾಗಳ ಲಿಸ್ಟ್‌ನಲ್ಲಿ ಕನ್ನಡದ ಕೆಲವು ಸಿನಿಮಾಗಳು ಸಹ ಇವೆ.

  ಇದೀಗ ಚಂದನವನದಿಂದ ಮತ್ತೊಂದು ಸಿನಿಮಾ ಬಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಅದು ಮತ್ಯಾವ ಸಿನಿಮಾವಲ್ಲ, 'ಸಂಕಷ್ಟಕರ ಗಣಪತಿ'. 2018ರಲ್ಲಿ ಬಂದ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ವಿಮರ್ಷಾತ್ಮಕವಾಗಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ವಿಭಿನ್ನ, ವಿನೂತನ ಸಿನಿಮಾಗೆ ಪ್ರೇಕ್ಷಕರು ಸಹ ಫಿದಾ ಆಗಿದ್ದರು. ಅಂದಹಾಗೆ ಈ ಸಿನಿಮಾಗೆ ಅರ್ಜುನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದರು. ಕಿರುಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದ ಅರ್ಜುನ್ ಸಂಕಷ್ಟಕರ ಗಣಪತಿ ಸಿನಿಮಾ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದರು. ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಂಡಿದ್ದರು.

  ಕನ್ನಡಿಗನ ಜೀವನ ಆಧರಿಸಿದ ಹಿಂದಿ ಸಿನಿಮಾಕ್ಕೆ ನ್ಯಾಯಾಲಯ ತಡೆಕನ್ನಡಿಗನ ಜೀವನ ಆಧರಿಸಿದ ಹಿಂದಿ ಸಿನಿಮಾಕ್ಕೆ ನ್ಯಾಯಾಲಯ ತಡೆ

  ಚಿತ್ರದಲ್ಲಿ ಲಿಖಿತ್ ಶೆಟ್ಟಿ ನಾಯಕನಾಗಿ ಮಿಂಚಿದ್ದರು. ಈ ಚಿತ್ರದ ಮೂಲಕ ಒಂದು ಅಪರೂಪದ ಖಾಯಿಲೆ ಬಗ್ಗೆಯೂ ನಿರ್ದೇಶಕರು ವಿವರಣೆ ನೀಡಿದ್ದರು. ನಾಯಕನಿಗೆ ತನ್ನ 'ಕರ' (ಕೈ) ತನಗೆ ಹೇಗೆಲ್ಲಾ ತೊಂದರೆ ಕೊಡುತ್ತದೆ ಅನ್ನೋದನ್ನೇ ಇಟ್ಟುಕೊಂಡು 'ಸಂಕಷ್ಟ'ಕರ'ಗಣಪತಿ' ಚಿತ್ರಕಥೆಯನ್ನ ಹೆಣೆದು ಅಭಿಮಾನಿಗಳ ಮುಂದಿಟ್ಟಿದ್ದರು. ಕಾನ್ಸೆಪ್ಟ್ ಎಷ್ಟು ಫ್ರೆಶ್ ಆಗಿತ್ತೋ, ನಿರೂಪಣಾ ಶೈಲಿ ಹಾಗೂ ಚಿತ್ರಕಥೆ ಕೂಡ ಅಷ್ಟೇ ಫ್ರೆಶ್ ಆಗಿತ್ತು.

  ಇದೀಗ ಈ ಸಿನಿಮಾ ಹಿಂದಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ಬಾಲಿವುಡ್ ಗೆ ರಿಮೇಕ್ ಆಗುತ್ತಿರುವ ಬಗ್ಗೆ ಸ್ವತಃ ನಿರ್ದೇಶಕ ಅರ್ಜುನ್ ಕುಮಾರ್ ಬಹಿರಂಗ ಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅಱ್ಜುನ್ ಕುಮಾರ್, "ಸಂಕಷ್ಟಕರ ಗಣಪತಿ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ಕರ್ವಾನ್ ಮತ್ತು ರಶ್ಮಿ ರಾಕೆಟ್ ಸಿನಿಮಾ ಖ್ಯಾತಿಯ ನಿರ್ಮಾಪಕ ಆಕಾರ್ಶ್ ಖುರಾನ ರಿಮೇಕ್ ಮಾಡುತ್ತಿದ್ದಾರೆ. ಹಿಂದಿಯಲ್ಲಿ ಚಿತ್ರಕ್ಕೆ ಬಾಯಿನ್ ಹಾಥ್ ಕಾ ಖೇಲ್ ಎಂದು ಟೈಟಲ್ ಇಡಲಾಗಿದೆ. ಆಕರ್ಶ್ ಖುರಾನ ಜೊತೆ ಸನ್ನಿ ಖನ್ನಾ ಮತ್ತು ವಿಕಾಸ್ ಶರ್ಮಾ ನಿರ್ಮಾಣ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.

  Likhith Shetty and Arjun Kumas Sankastahara Ganapathi set to re-made in Hindi

  ಅಂದಹಾಗೆ ಚಿತ್ರದ ಪ್ರಮುಖ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಬಹಿರಂಗ ಪಡಿಸಿಲ್ಲ. ಇತ್ತೀಚಿಗಷ್ಟೆ ಸಂಕಷ್ಟಕರ ಗಣಪತಿ ಸಿನಿಮಾದ ರಿಮೇಕ್ ಹಕ್ಕನ್ನು ಆಕರ್ಶ್ ಖುರಾನ ಖರೀದಿ ಮಾಡಿದ್ದರು. ಈಗಾಗಲೇ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಿದೆ. ಲಿಖಿತ್ ಶೆಟ್ಟಿ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಬಾಲಿವುಡ್ ಜನಪ್ರಿಯ ನಟ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾರು ಎನ್ನುವ ಅಧಿಕೃತ ಮಾಹಿತಿ ಸದ್ಯದಲ್ಲೇ ಬಹಿರಂಗವಾಗುವ ಸಾಧ್ಯತೆ ಇದೆ.

  ಚಿತ್ರದಲ್ಲಿ ಲಿಖಿತ್ ಶೆಟ್ಟಿಗೆ ನಾಯಕಿಯಾಗಿ ಶ್ರುತಿ ಗೊರಾಡಿಯಾ ಕಾಣಿಸಿಕೊಂಡಿದ್ದರು. ನಾಗಭೂಷಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಇದೇ ತಂಡ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಸಿನಿಮಾ ಬ್ಯಾನರ್‌ನಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಚಿತ್ರಕ್ಕೆ ಫ್ಯಾಮಿಲಿ ಪ್ಯಾಕ್ ಎಂದು ಹೆಸರಿಡಲಾಗಿದೆ. ಇತ್ತೀಚಿಗಷ್ಟೆ ಪುನೀತ್ ರಾಜ್ ಕುಮಾರ್ ಚಿತ್ರೀಕರಣ ಸೆಟ್‌ಗೆ ಬೇಟಿ ನೀಡಿದ್ದರು. ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೊಂದು ಹಾಸ್ಯ ಭರಿತ ಸಿನಿಮಾವಾಗಿದ್ದು, ಈಗಾಗಲೇ ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿದೆ.

  English summary
  Likhith Shetty and Arjun Kuma's Sankastahara Ganapathi set to re-made in Hindi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X