»   » ರಜನಿಕಾಂತ್ 'ಲಿಂಗಾ' ಇನ್ನೊಂದು ಹೊಸ ದಾಖಲೆ

ರಜನಿಕಾಂತ್ 'ಲಿಂಗಾ' ಇನ್ನೊಂದು ಹೊಸ ದಾಖಲೆ

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಲಿಂಗಾ' ಚಿತ್ರ ಬಿಡುಗಡೆಗೂ ಮುನ್ನವೇ ಅತೀವ ಕುತೂಹಲ ಕೆರಳಿಸಿದೆ. ಈ ಚಿತ್ರದ ನಿರ್ಮಾಪಕರು ಕನ್ನಡಿಗರೇ ಆದ ರಾಕ್ ಲೈನ್ ವೆಂಕಟೇಶ್ ಎಂಬುದು ಒಂದು ಕಾರಣವಾದರೆ, ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಕರ್ನಾಟಕದಲ್ಲಿ ನಡೆದಿದೆ ಎಂಬುದು ಇನ್ನೊಂದು ವಿಶೇಷ.

ಇತ್ತೀಚೆಗೆ ಸೆನ್ಸಾರ್ ಆಗಿರುವ ಚಿತ್ರಕ್ಕೆ 'ಯು' ಸರ್ಟಿಫಿಕೇಟ್ ಸಿಕ್ಕಿದೆ. ರಜನಿಕಾಂತ್ ಅವರ ಹುಟ್ಟುಹಬ್ಬದ ದಿನ (ಡಿಸೆಂಬರ್ 12) ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ. 'ಲಿಂಗಾ' ಚಿತ್ರ 5000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದ್ದು ಇನ್ನೊಂದು ಹೊಸ ದಾಖಲೆ ಬರೆಯುತ್ತಿದೆ.

Lingaa Creates New Record, Set To Hit 5000 Screens

ಈ ಚಿತ್ರವನ್ನು ಏಕಕಾಲಕ್ಕೆ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸರಿಸುಮಾರು ರು.100 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದು. ಎರೋಸ್ ಇಂಟರ್ ನ್ಯಾಶನಲ್ ಸಂಸ್ಥೆ ಚಿತ್ರದ ವಿತರಣೆ ಹಕ್ಕುಗಳನ್ನು ಪಡೆದಿದೆ.

ಮೂರು ಗಂಟೆಗಳ ಕಾಲಾವಧಿಯ ಈ ಚಿತ್ರ ನಾನ್ ಸ್ಟಾಪ್ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುತ್ತದೆ ಚಿತ್ರತಂಡ. ಈಗಾಗಲೆ ಚಿತ್ರದ ಟ್ರೇಲರ್ ಗೆ ಯೂಟ್ಯೂಬ್ ನಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರಕ್ಕಾಗಿ ರಜನಿಕಾಂತ್ ಸಂಭಾವನೆಯೇ ಎಲ್ಲರನ್ನೂ ಚಕಿತಗೊಳಿಸುವಂತಿದೆ.

ಈ ಚಿತ್ರದಲ್ಲಿನ ಸಾಕಷ್ಟು ಎಮೋಷನಲ್ ಸನ್ನಿವೇಶಗಳು ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್. ಅನುಷ್ಕಾ ಶೆಟ್ಟಿ ಮೈಮಾಟ, ಸೋನಾಕ್ಷಿ ಸಿನ್ಹಾ ಸಯ್ಯಾಟ ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. (ಏಜೆನ್ಸೀಸ್)

English summary
Lingaa, which received a clean 'U' certificate from the Censor Board much to the delight of all Rajinikanth fans will scorch its way into an overwhelming 5000 screens all across the world which is a record for any Tamil film. The movie's producer Rockline Venkatesh who confirmed the news has said that the film will definitely have an emotional connect with the audiences.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada