»   » ದುರಂತದಲ್ಲಿ ಕೊನೆಯಾದ ಕನ್ನಡ ಚಿತ್ರರಂಗದ ನಟ ನಟಿಯರ ಬದುಕು

ದುರಂತದಲ್ಲಿ ಕೊನೆಯಾದ ಕನ್ನಡ ಚಿತ್ರರಂಗದ ನಟ ನಟಿಯರ ಬದುಕು

Posted By:
Subscribe to Filmibeat Kannada

ಸಾವು ಯಾರಿಗೆ ಯಾವಾಗ ಹೇಗೆ ಬರುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಯಾರೇ ಆದರೂ ಒಂದಲ್ಲ ಒಂದು ದಿನ ಸಾವಿಗೆ ಸೋಲಲೇಬೇಕು. ಇನ್ನೂ ಬಾಳಿ ಬದುಕಬೇಕಾದ ಕನ್ನಡ ಚಿತ್ರರಂಗದ ಕೆಲವು ದೊಡ್ಡ ನಟ ನಟಿಯರು ಅಕಾಲಿಕ ಮರಣ ಹೊಂದಿದ್ದಾರೆ.

ಕನ್ನಡದ ಈ ತಾರೆಯರ ಅಕಾಲಿಕ ಸಾವು ನ್ಯಾಯವೇ?

ಇಂದು ನಿಧನರಾದ ನಟ ಹಾಗೂ ಸಿಸಿಎಲ್ ಕ್ರಿಕೆಟ್ ಆಟಗಾರ ಧ್ರುವ ಶರ್ಮಾ ರವರಿಂದಹಿಡಿದು ಶಂಕರ್ ನಾಗ್, ಕಲ್ಪನಾ, ಮಂಜುಳಾ ಸೇರಿದಂತೆ ಅನೇಕರು ದುರಂತದಲ್ಲಿ ತಮ್ಮ ಬದುಕನ್ನು ಕೊನೆಗಾಣಿಸಿದ್ದಾರೆ. ಆ ರೀತಿ ಸಣ್ಣ ವಯಸ್ಸಿನಲ್ಲೇ ಬಾರದ ಊರಿಗೆ ಪ್ರಯಾಣ ಬೆಳೆಸಿದ ನಟ ನಟಿಯರ ದುರಂತ ಕಥೆ ಇಲ್ಲಿದೆ ಓದಿ...

ಶಂಕರ್ ನಾಗ್

ಕರಾಟೆ ಕಿಂಗ್ ಶಂಕರ್ ನಾಗ್ ಅವರು ಸೆಪ್ಟೆಂಬರ್ 30, 1990ರಂದು (36ನೇ ವಯಸ್ಸಿನಲ್ಲಿ) ದಾವಣಗೆರೆಯ ಆನಗೋಡು ಹಳ್ಳಿಯಲ್ಲಿ ಕಾರು ಅಪಘಾತದಿಂದ ಕೊನೆಯುಸಿರೆಳೆದರು. 'ಜೋಕುರಸ್ವಾಮಿ' ಚಿತ್ರದ ಚಿತ್ರೀಕರಣಕ್ಕೆ ಧಾರವಾಡದಿಂದ ಬರುತ್ತಿದ್ದ ವೇಳೆ ಶಂಕರ್ ನಾಗ್ ದುರ್ಮರಣಕ್ಕೀಡಾಗಿದ್ದರು.ಅವರ ಸಾವಿನ ಸುದ್ದಿ ಇಡೀ ಕನ್ನಡಚಿತ್ರರಂಗಕ್ಕೆದಂಗುಬಡಿಸಿತ್ತು.

ಕಲ್ಪನಾ

ಕನ್ನಡದ ಮಿನುಗು ತಾರೆ ಕಲ್ಪನಾ 03.05.1979ರಲ್ಲಿ (36ನೇ ವಯುಸ್ಸಿನಲ್ಲಿ) ಆತ್ಮಹತ್ಯೆ ಮಾಡಿಕೊಂಡರು. ತಮ್ಮ ಮದುವೆ ಸಂಬಂಧ ಮುರಿದು ಬಿದ್ದ ಕಾರಣ ಸಂಕೇಶ್ವರದ ಬಳಿ ಕಲ್ಪನಾ ಆತ್ಮಹತ್ಯೆಗೆ ಶರಣಾದರು. ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲ್ಪನಾ ಫಿಲ್ಮಫೇರ್ ಮತ್ತು ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರು.

ಸುನೀಲ್

ಕನ್ನಡದ ಯುವ ನಟ ಸುನಿಲ್ ರಸ್ತೆ ಅಪಘಾತದಲ್ಲಿ ನಿಧನರಾದರು. ಮಂಗಳೂರು ಮೂಲದವರಾಗಿದ್ದ ಇವರನ್ನು ನಟ, ನಿರ್ಮಾಪಕ ದ್ವಾರಕೀಶ್ ಚಿತ್ರರಂಗಕ್ಕೆ ಪರಿಚಯಮಾಡಿಸಿದ್ದರು.ನಟಿ ಮಾಲಾಶ್ರೀ ಜೊತೆ ಸುನಿಲ್ ಅವರುಅನೇಕ ಸಿನಿಮಾ ಮಾಡಿದ್ದರು.

ಮಂಜುಳಾ

ಮಂಜುಳಾ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ. ಆದರೆ ಬಣ್ಣದ ಜಗತ್ತಿನಿಂದ ದೂರ ಉಳಿದು ತಾನಾಯಿತು ತನ್ನ ಸಂಸಾರವಾಯಿತೆಂದು ಇದ್ದ ಮಂಜುಳಾ ಬೆಂಕಿ ಆಕಸ್ಮಿಕದಲ್ಲಿ ಮರಣ ಹೊಂದಿದರು. ಆಗ ಮಂಜುಳಾ ಅವರಿಗಿನ್ನೂ 35 ವರ್ಷ ವಯಸ್ಸಾಗಿತ್ತು.

ಸಿಲ್ಕ್ ಸ್ಮಿತಾ

ಹೆಸರಾಂತ ನಟಿ ಸಿಲ್ಕ್ ಸ್ಮಿತಾ ವಿಜಯಲಕ್ಷ್ಮಿ ತಮ್ಮ 35ನೇ ವಯಸ್ಸಿನಲ್ಲಿ ಸಾವನಪ್ಪಿದರು. ಚೆನ್ನೈನ ಅಪಾರ್ಟ್ಮೆಂಟ್ ಒಂದರಲ್ಲಿ ನಿಗೂಢವಾಗಿ ಸಿಲ್ಕ್ ಸ್ಮಿತಾ ಶವವಾಗಿ ದೊರೆತರು. ಕನ್ನಡ ಸೇರಿ ನಾಲ್ಕು ಭಾಷೆಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಸಿಲ್ಕ್ ಸ್ಮಿತಾ ನಟಿಸಿದ್ದಾರೆ.

ರಾಜೇಶ್

ರಿಯಾಲಿಟಿ ಶೋ ಮೂಲಕ ಜನಪ್ರಿಯತೆಗಳಿಸಿದ್ದ ರಾಜೇಶ್ ಅಕಾಲಿಕ ಮರಣ ಹೊಂದಿದ್ದರು. ಮಾನಸಿಕವಾಗಿ ಅಸ್ವಸ್ಥನಾಗಿದ್ದ ಈತ ತಮ್ಮ ನಿವಾಸದ ಮೂರನೇ ಮಹಡಿಯಿಂದ ನೆಲಕ್ಕೆ ಬಿದ್ದು ಸಾವನ್ನಪ್ಪಿದ್ದ.

ಹೇಮಶ್ರೀ

ಕಿರುತೆರೆಯಲ್ಲಿ 35ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಹೇಮಶ್ರೀ ಚಿಕ್ಕವಯಸ್ಸಿನಲ್ಲಿಯೇ ಪ್ರಾಣ ಬಿಟ್ಟರು. ಕ್ಲೋರೋಫಾರಂನಿಂದಲೇ ಹೇಮಶ್ರೀ ಸಾವನಪ್ಪಿದರು ಎಂದು ವೈದ್ಯರು ಸ್ಪಷ್ಟ ಪಡಿಸಿದ್ದರು.

GST Effect 2017 : Sandalwood Celebrities Suffers | Filmibeat Kannada

'ಮಾಸ್ತಿಗುಡಿ' ದುರಂತ

'ಮಾಸ್ತಿಗುಡಿ' ಸಿನಿಮಾದಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ನಡೆದ ಘಟನೆಯನ್ನು ಕನ್ನಡ ಚಿತ್ರರಂಗ ಮರೆಯುವುದಕ್ಕೆ ಸಾಧ್ಯ ಇಲ್ಲ. ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಿ ಖಳನಟರಾದ ಅನಿಲ್ ಕುಮಾರ್ ಮತ್ತು ರಾಘವ ಉದಯ್ ಸಾವಿಗೀಡಾದರು.

English summary
List of leading Kannada cinema stars who died in young age.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada