For Quick Alerts
  ALLOW NOTIFICATIONS  
  For Daily Alerts

  ಈ ಹಿಂದೆ 60 ವರ್ಷವಾಗಿದ್ದರೆ ಮಾತ್ರ ಕರ್ನಾಟಕ ರತ್ನ ಪ್ರಶಸ್ತಿ; ಪುನೀತ್‌ಗಾಗಿ ಬದಲಾದ ಹಲವು ನಿಯಮಗಳಿವು!

  |

  ಪುನೀತ್ ರಾಜ್‌ಕುಮಾರ್ ಅವರಿಗೆ ಇಂದು ( ನವೆಂಬರ್ 1 ) ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕಳೆದ ವರ್ಷದ ನವೆಂಬರ್ ತಿಂಗಳಲ್ಲೇ ಘೋಷಿಸಿದ್ದರು. ಸದ್ಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪುನೀತ್ ಅವರಿಗೆ ಈ ಉನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

  ಅಂದಹಾಗೆ ಕರ್ನಾಟಕ ಪ್ರಶಸ್ತಿಗೆ ಭಾಜನರಾಗುವುದೆಂದರೆ ಸಾಮಾನ್ಯ ವಿಷಯವಲ್ಲ. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಮಾಡಿದ ಸಾಧಕರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಆರಿಸಿ ನೀಡಲಾಗುತ್ತದೆ. ಮೊದಲಿಗೆ ಕುವೆಂಪು ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅಪಾರ ಸಾಧನೆಯನ್ನು ಗುರುತಿಸಿ ಪ್ರಥಮ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

  ನಂತರ ಎರಡು ದಿನಗಳ ಬಳಿಕ ಡಾ ರಾಜ್‌ಕುಮಾರ್ ಅವರಿಗೂ ಸಹ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಹೀಗೆ ಕುವೆಂಪು ಅವರಿಂದ ಹಿಡಿದು ಪುನೀತ್ ರಾಜ್‌ಕುಮಾರ್ ಅವರವರೆಗೂ ಒಟ್ಟು ಹತ್ತು ಸಾಧಕರಿಗೆ ಕರ್ನಾಟಕ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದು, ಈ ಬಾರಿ ಪುನೀತ್ ರಾಜ್‌ಕುಮಾರ್ ಅವರಿಗೆ ಪ್ರಶಸ್ತಿ ನೀಡಲು ಇದ್ದ ನಿಯಮ ಹಾಗೂ ಮಾನದಂಡಗಳಲ್ಲಿ ಕೆಲ ತಿದ್ದುಪಡಿಗಳನ್ನು ತಂದಿದೆ. ಆ ತಿದ್ದುಪಡಿಗಳೇನು ಎಂಬುದರ ಕುರಿತ ಮಾಹಿತಿಗಳು ಈ ಕೆಳಕಂಡಂತಿವೆ.

  ಕರ್ನಾಟಕ ರತ್ನ ಪ್ರಶಸ್ತಿಯಲ್ಲಿ ಏನೇನಿರುತ್ತೆ?

  ಕರ್ನಾಟಕ ರತ್ನ ಪ್ರಶಸ್ತಿಯಲ್ಲಿ ಏನೇನಿರುತ್ತೆ?

  ಇಲ್ಲಿಯವರೆಗೂ ನೀಡಿರುವ ಕರ್ನಾಟಕ ರತ್ನ ಪ್ರಶಸ್ತಿಗಳ ಪೈಕಿ ಯಾರಿಗೂ ಸಹ ಮರಣೋತ್ತರವಾಗಿ ನೀಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಬದಲಾವಣೆ ತರಲಾಗಿದೆ. ಇನ್ನು ಈ ಹಿಂದೆ ಕರ್ನಾಟಕ ಪ್ರಶಸ್ತಿಯನ್ನು ಕರ್ನಾಟಕದಲ್ಲಿ ಜನಿಸಿ ಸಾಧನೆ ಮಾಡಿದ ಕನಿಷ್ಟ

  60 ವರ್ಷ ವಯಸ್ಸಿನ ಸಾಧಕರಿಗೆ ಮಾತ್ರ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಬೇಕು ಎಂಬ ಮಾನದಂಡವಿತ್ತು. ಆದರೆ ಅಪ್ಪು ವಿಷಯದಲ್ಲಿ ಈ ಎರಡೂ ಮಾನದಂಡವನ್ನು ರಾಜ್ಯ ಸರ್ಕಾರ ತಿದ್ದಿದ್ದು ಪುನೀತ್ ರಾಜ್‌ಕುಮಾರ್ ಅವರ ಸಾದನೆಗೆ ಗೌರವ ಸಲ್ಲಿಸಿದೆ.

  ಕರ್ನಾಟಕ ರತ್ನ ಪ್ರಶಸ್ತಿಯಲ್ಲಿ ಏನೇನಿರುತ್ತೆ?

  ಕರ್ನಾಟಕ ರತ್ನ ಪ್ರಶಸ್ತಿಯಲ್ಲಿ ಏನೇನಿರುತ್ತೆ?

  ಕರ್ನಾಟಕ ರತ್ನ ಪ್ರಶಸ್ತಿಯು ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ಸಂಪೂರ್ಣವಾಗಿ ಬೆಳ್ಳಿಯಿಂದ ಕೂಡಿರಲಿದ್ದು, ಇದರ ಜತೆಗೆ ಐವತ್ತು ಗ್ರಾಂ ಚಿನ್ನದ ಪದಕ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಗುತ್ತದೆ. ಪ್ರಶಸ್ತಿ ಪಡೆಯುವ ಗಣ್ಯರಿಗೆ ರಾಜ್ಯದ ಮುಖ್ಯಮಂತ್ರಿಗಳು ಶಾಲನ್ನು ಹೊದಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಾರೆ.

  ಪ್ರಶಸ್ತಿ ಗೆದ್ದವರ ಪಟ್ಟಿ

  ಪ್ರಶಸ್ತಿ ಗೆದ್ದವರ ಪಟ್ಟಿ

  ಕರ್ನಾಟಕ ರತ್ನ ಪ್ರಶಸ್ತಿ ಗೆದ್ದಿರುವ ಎಲ್ಲಾ ಹತ್ತು ಸಾಧಕರ ಪಟ್ಟಿ ಇಲ್ಲಿದೆ

  1. ಕುವೆಂಪು - 1992 - ಸಾಹಿತ್ಯ

  2. ರಾಜ್‌ಕುಮಾರ್ - 1992 - ಚಲನಚಿತ್ರ

  3. ಎಸ್. ನಿಜಲಿಂಗಪ್ಪ - 1999 - ರಾಜಕೀಯ

  4. ಸಿ.ಎನ್. ಆರ್. ರಾವ್ - 2000 - ವಿಜ್ಞಾನ

  5. ದೇವಿ ಪ್ರಸಾದ್ ಶೆಟ್ಟಿ - 2001 - ವೈದ್ಯಕೀಯ

  6. ಭೀಮಸೇನ ಜೋಷಿ - 2005 - ಸಂಗೀತ

  7. ಶ್ರೀ ಶಿವಕುಮಾರ ಸ್ವಾಮಿಗಳು - 2007 - ಸಾಮಾಜಿಕ ಸೇವೆ

  8. ದೇ ಜವರೇ ಗೌಡ - 2008 - ಸಾಹಿತ್ಯ

  9. ಡಿ. ವಿರೇಂದ್ರ ಹೆಗ್ಗಡೆ - 2009 - ಸಾಮಾಜಿಕ ಸೇವೆ

  10. ಪುನೀತ್ ರಾಜ್‌ಕುಮಾರ್ - 2022 - ಸಾಮಾಜಿಕ ಸೇವೆ ಹಾಗೂ ಚಲನಚಿತ್ರ

  English summary
  List of changes made in rules of Karnataka Ratna to present it for Puneeth Rajkumar. Take a look
  Tuesday, November 1, 2022, 19:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X