For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್‌ 22, 23ರಂದು ಬಿಡುಗಡೆಯಾಗುವ ಚಿತ್ರಗಳ‌ ಪಟ್ಟಿ ಇಲ್ಲಿದೆ

  |

  2022ರ ಅಂತಿಮ‌ ತಿಂಗಳಾದ ಡಿಸೆಂಬರ್‌ನ ನಾಲ್ಕನೇ ಶುಕ್ರವಾರ ಸಮೀಪಿಸಿದೆ. ಈ ವರ್ಷಪೂರ್ತಿ ವಿವಿಧ ಇಂಡಸ್ಟ್ರಿಯ ಅನೇಕ ಚಿತ್ರಗಳು ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ‌. ಸಿನಿಮಾ ಕ್ಷೇತ್ರದ ಪಾಲಿಗೆ ಗೋಲ್ಡನ್ ಇಯರ್ ಆಗಿ ಪರಿಣಮಿಸಿರುವ ಈ ವರ್ಷದಲ್ಲಿ ಅಂತಿಮ ಎರಡು ವಾರಗಳು ಮಾತ್ರ ಬಾಕಿ ಉಳಿದಿದ್ದು ಯಾವ ಚಿತ್ರಗಳು ಈ ವರ್ಷಾಂತ್ಯದ ಸಮಯದಲ್ಲಿ ಮೋಡಿ ಮಾಡಲಿವೆ ಎಂಬ ಕುತೂಹಲ ಮೂಡಿದೆ‌.

  ಕನ್ನಡದಲ್ಲಿ ಶಿವ ರಾಜ್ ಕುಮಾರ್ ಹಾಗೂ ಎ ಹರ್ಷ ಜೋಡಿಯ ನಾಲ್ಕನೇ ಚಿತ್ರ 'ವೇದಾ' ಇದೇ ಶುಕ್ರವಾರ ತೆರೆ ಕಾಣ್ತಿದೆ. ಇನ್ನು ಈ ವಾರ ಶುಕ್ರವಾರ ಮಾತ್ರವಲ್ಲದೆ ಗುರುವಾರ ಅಂದರೆ ನಾಳೆ ( ಡಿಸೆಂಬರ್ 22 ) ಸಹ ಹಲವಾರು ಚಿತ್ರಗಳು ತೆರೆ ಕಾಣುತ್ತಿವೆ ವಿಶಾಲ್ ಅಭಿನಯದ ತಮಿಳು ಚಿತ್ರ 'ಲಾಠಿ' ಕೂಡ ನಾಳೆಯೇ ತೆರೆಗೆ ಬರ್ತಿದೆ.

  ಕಳೆದ ವಾರವಷ್ಟೇ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಅವತಾರ್ ದ ವೇ ಆಫ್ ವಾಟರ್ ಚಿತ್ರವನ್ನು ಈ ವಾರದಲ್ಲಿ ಸಿಗುವ ಸಾಲು ಸಾಲು ಕ್ರಿಸ್ಮಸ್ ರಜೆಯಂದು ವೀಕ್ಷಿಸಲು ತೆರಳುವ ಸಿನಿ ರಸಿಕರನ್ನು ಈ ವಾರ ಬಿಡುಗಡೆಯಾಗುವ ದೇಶಿ ಸಿನಿಮಾಗಳು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಲಿವೆಯಾ ಕಾದು ನೋಡಬೇಕಿದೆ.

  ಈ ವಾರ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಕೆಳಕಂಡಂತಿದೆ..

  ಡಿಸೆಂಬರ್ 22ರ ಗುರುವಾರ ಬಿಡುಗಡೆಯಾಗುವ ಚಿತ್ರಗಳು: ಕನೆಕ್ಟ್ ( ತಮಿಳು, ತೆಲುಗು ), ಲಾಠಿ ( ತಮಿಳು, ತೆಲುಗು ) ಹಾಗೂ ಕಾಪ‌ ( ಮಲಯಾಳಂ )

  ಡಿಸೆಂಬರ್ 23ರ ಶುಕ್ರವಾರ ಬಿಡುಗಡೆಯಾಗುವ ಚಿತ್ರಗಳು: ವೇದಾ ( ಕನ್ನಡ ), ಧಮಾಕಾ ( ತೆಲುಗು ), 18 ಪೇಜಸ್ ( ತೆಲುಗು ), ಸರ್ಕಸ್ (‌ಹಿಂದಿ), ಓ‌ ಮೇರಿ ಲೈಲಾ (ಮಲಯಾಳಂ), ನಾಲಮ್ ಮೂರ ( ಮಲಯಾಳಂ), ಹೊಸ ದಿನಚರಿ (ಕನ್ನಡ), ಎಂಜಾಯ್ (ತಮಿಳು), ಪೇಯಾ ಕಾಣೊಮ್ ( ತಮಿಳು), ಪ್ರಾಜೆಕ್ಟ್ ಸಿ ( ತಮಿಳು )

  English summary
  List of films releasing on December 22nd and 23rd. Take a look
  Wednesday, December 21, 2022, 21:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X