For Quick Alerts
  ALLOW NOTIFICATIONS  
  For Daily Alerts

  ಚಿಕ್ಕ ವಯಸ್ಸಿನಲ್ಲೇ ಅಪಘಾತದಲ್ಲಿ ಮೃತಪಟ್ಟ ಕನ್ನಡದ ಸ್ಟಾರ್ ಕಲಾವಿದರು

  |

  ಸ್ಯಾಂಡಲ್ ವುಡ್ ಖ್ಯಾತ ನಟ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸಂಚಾರಿ ವಿಜಯ್ ಹಠಾತ್ ಸಾವು ಇಡೀ ಚಿತ್ರರಂಗಕ್ಕೆ ಆಘಾತ ತಂದಿದೆ. ಜೂನ್ 12ರಂದು ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಂಚಾರಿ ವಿಜಯ್ ತಲೆಗೆ ಬಲವಾದ ಏಟುಬಿದ್ದಿತ್ತು. ವಿಜಯ್ ಬ್ರೈನ್ ಡೆಡ್ ಆಗಿದ್ದು, ಬದುಕುವ ಸಾಧ್ಯತೆ ತೀರ ಕಡಿಮೆ ಎಂದು ವೈದ್ಯರು ಹೇಳಿದ ಬಳಿಕ, ವಿಜಯ್ ಅಂಗಾಂಗ ದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದರು.

  ಜೂನ್ 14 ರಾತ್ರಿ ವಿಜಯ್ ಅಂಗಾಂಗ ದಾನದ ಬಳಿಕ ವೈದ್ಯರು ಅಧಿಕೃತವಾಗಿ ಸಂಚಾರಿ ವಿಜಯ್ ಸಾವನ್ನು ಘೋಷಿಸಿದರು. ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿ ಪಡೆದು, ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ವಿಜಯ್ ಇನ್ನು ನೆನಪು ಮಾತ್ರ. ಸಂಚಾರಿ ವಿಜಯ್ ಹಾಗೆ ಚಿಕ್ಕ ವಯಸ್ಸಿನಲ್ಲೇ ಅಪಘಾತದಲ್ಲಿ ಮರಣಹೊಂದಿದ ಕನ್ನಡ ಕಲಾವಿದರ ಬಗ್ಗೆ ವಿವರ ಇಲ್ಲಿದೆ.

  ಶಂಕರ್ ನಾಗ್

  ಶಂಕರ್ ನಾಗ್

  ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ, ನಿರ್ದೇಶಕ ಶಂಕರ್ ನಾಗ್ ಸೆಪ್ಟಂಬರ್ 30, 1990ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟರು. ಜೋಕುಮಾರ ಸ್ವಾಮಿ ನಾಟಕವನ್ನು ಸಿನಿಮಾ ಮಾಡಬೇಕೆಂಬ ಆಸೆ ಶಂಕರ್ ನಾಗ್ ರವರಿಗೆ ಇತ್ತು. ಅಕ್ಟೋಬರ್ 1 ರಂದು 'ಜೋಕುಮಾರ ಸ್ವಾಮಿ' ಚಿತ್ರದ ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಇದರ ಪ್ರಯುಕ್ತ ಸೆಪ್ಟೆಂಬರ್ 30, 1990 ರಂದು ದಾವಣಗೆರೆಗೆ ಹೊರಟಿದ್ದ ಶಂಕರ್ ನಾಗ್ ವಾಪಸ್ ಬರಲೇ ಇಲ್ಲ.

  ನಟ ಸುನಿಲ್

  ನಟ ಸುನಿಲ್

  ಜುಲೈ 25, 1994ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕನ್ನಡದ ಪ್ರತಿಭಾವಂತ ನಟ ಸುನಿಲ್ ಮರೆಯಾದರು. ಅದ್ಭುತ ಸಿನಿಮಾಗಳ ಮೂಲಕ ಕನ್ನಡ ಸಿನಿ ಅಭಿಮಾನಿಗಳನ್ನು ರಂಜಿಸುತ್ತಿದ್ದ ಸುನಿಲ್ ಸಾವು ಇಡೀ ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿತ್ತು.

  ಚಿತ್ರದುರ್ಗದ ಸಮೀಪ ಅಪಘಾತ

  ಚಿತ್ರದುರ್ಗದ ಸಮೀಪ ಅಪಘಾತ

  ನಟ ಸುನಿಲ್, ನಟಿ ಮಾಲಾಶ್ರೀ ಮತ್ತು ಸುನಿಲ್ ಸಹೋದರ ಸಚಿನ್ ಪ್ರಯಾಣ ಮಾಡುತ್ತಿದ್ದ ಕಾರು ಚಿತ್ರದುರ್ಗ ಸಮೀಪ ಮಾದನಾಯಕ ಹಳ್ಳಿಯಲ್ಲಿ ಅಪಘಾತವಾಗಿತ್ತು. ಎದುರಿನಿಂದ ಬಂದ ಲಾರಿ ಸುನಿಲ್ ಇದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತ ಪಟ್ಟಿದ್ದರು. ಸುನಿಲ್ ಆಸ್ಪತ್ರೆಯಲ್ಲಿ ನಿಧನಹೊಂದಿರು. ಮಾಲಾಶ್ರೀ ಮತ್ತು ಸುನಿಲ್ ಸಹೋದರ ಸಚಿನ್ ಆಪಾಯದಿಂದ ಪಾರಾಗಿದ್ದರು. ನಾಲ್ಕು ವರ್ಷಗಳ ಅಂತರದಲ್ಲಿ ಸ್ಯಾಂಡಲ್ ವುಡ್ ನ ಇಬ್ಬರು ಧ್ರುವ ತಾರೆಯರು ಮರೆಯಾಗಿದ್ದರು.

  ನಗುಮೊಗದ ಸಂಚಾರಿ ವಿಜಯ್ ಜೀವನಚರಿತ್ರೆ | Filmibeat Kannada
  ನಟಿ ಸೌಂದರ್ಯ

  ನಟಿ ಸೌಂದರ್ಯ

  90ರ ದಶಕದ ಜನಪ್ರಿಯ ನಟಿಯರಲ್ಲಿ ಸೌಂದರ್ಯ ಕೂಡ ಒಬ್ಬರು. ಬಹುಭಾಷಾ ನಟಿ ಸೌಂದರ್ಯ ಸಾವು ಅಭಿಮಾನಿಗಳಿಗೆ ಇಂದಿಗೂ ಮರೆಯಲಾಗದ ನೋವು. 2004ರಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದ ಸ್ಟಾರ್ ನಟಿ ಸೌಂದರ್ಯ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣದಿಂದ ಆಂಧ್ರಪ್ರದೇಶದ ಕರೀಂನಗರಕ್ಕೆ ಚುನಾವಣೆ ಪ್ರಚಾರಕ್ಕೆ ಹೊರಟಿದ್ದರು. ಸಹೋದರ ಅಮರನಾಥ್ ಕೂಡ ಜೊತೆಯಲ್ಲಿದ್ದರು. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಹೊತ್ತಿ ಉರಿಯಲು ಆರಂಭಿಸಿತು. ನೋಡನೋಡುತ್ತಿದ್ದಂತೆ ನಟಿ ಸೌಂದರ್ಯ ಸುಟ್ಟು ಕರಕಲಾಗಿ ಹೋಗಿದ್ದರು.

  English summary
  List of Kannada Actors who died in Accident at Young age.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X