twitter
    For Quick Alerts
    ALLOW NOTIFICATIONS  
    For Daily Alerts

    ಆರಂಭದಲ್ಲಿ ಗೆದ್ದರೂ ನಂತರ ಸಕ್ಸಸ್ ಕಾಣುವಲ್ಲಿ ಸೋತ ಕನ್ನಡದ ಆರು ನಟರಿವರು!

    By ಫಿಲ್ಮಿ ಡೆಸ್ಕ್
    |

    ಕನ್ನಡ ಚಿತ್ರರಂಗ ಪ್ರತಿಭೆ ಇದ್ದವರಿಗೆ ಸದಾ ಅವಕಾಶ ನೀಡುವ ಇಂಡಸ್ಟ್ರಿ. ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ಸಿನಿಮಾ ಕ್ಷೇತ್ರಕ್ಕೆ ಅನೇಕ ಕನಸುಗಳನ್ನು ಹೊತ್ತು ಬರುವವರಿಗೆ ಸ್ಟಾರ್ ಪಟ್ಟ ಕೊಟ್ಟಿರುವ ಚಿತ್ರರಂಗಗಳ ಪೈಕಿ ನಮ್ಮ ಕನ್ನಡ ಚಿತ್ರರಂಗ ಕೂಡ ಒಂದು. ಇದಕ್ಕೆ ತಾಜಾ ಉದಾಹರಣೆ ಎಂದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಿಷಬ್ ಶೆಟ್ಟಿ.

    ಇನ್ನು ನಟರು ಮಾತ್ರವಲ್ಲದೇ ನಟಿಯರ ವಿಚಾರದಲ್ಲಿಯೂ ಕನ್ನಡ ಚಿತ್ರರಂಗ ಒಳ್ಳೆಯ ಅವಕಾಶ ಕೊಡುವುದರಲ್ಲಿ ಎತ್ತಿದ ಕೈ. ನಿರ್ದೇಶಕರ ವಿಷಯದಲ್ಲಿಯೂ ಕನ್ನಡ ಚಿತ್ರರಂಗ ಇದೇ ರೀತಿಯ ಹೆಸರನ್ನು ಕಾಪಾಡಿಕೊಂಡಿದೆ. ಹೀಗೆ ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಯಿಂದ ಅವಕಾಶ ಗಿಟ್ಟಿಸಿಕೊಂಡವರ ಪೈಕಿ ಇಂದಿಗೂ ಗಟ್ಟಿಯಾಗಿ ನೆಲೆ ನಿಂತವರೂ ಇದ್ದಾರೆ. ಅದೇ ರೀತಿ ಅವಕಾಶ ಪಡೆದು ಮೊದಲಿಗೆ ಸಕ್ಸಸ್ ಕಂಡು ನಂತರದ ದಿನಗಳಲ್ಲಿ ಮಂಕಾದವರೂ ಸಹ ಇದ್ದಾರೆ.

    ಹೌದು, ಈ ಕೆಳಕಂಡ ಆರು ನಟರು ಕನ್ನಡ ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡು ತಮ್ಮ ಆರಂಭದ ಚಿತ್ರಗಳಲ್ಲಿ ದೊಡ್ಡ ಮಟ್ಟದ ಹಿಟ್ ನೀಡಿ ನಂತರದ ಚಿತ್ರಗಳಲ್ಲಿ ಮಂಕಾಗಿದ್ದಾರೆ.

    ನೆನಪಿರಲಿ ಪ್ರೇಮ್

    ನೆನಪಿರಲಿ ಪ್ರೇಮ್

    2004ರಲ್ಲಿ ಬಿಡುಗಡೆಗೊಂಡ ಪ್ರಾಣ ಎಂಬ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಪ್ರತಿಭಾವಂತ ನಟ ಪ್ರೇಮ್ ತದನಂತರದ ವರ್ಷದಲ್ಲಿ ಬಿಡುಗಡೆಗೊಂಡ ನೆನಪಿರಲಿ ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡರು. ಈ ಚಿತ್ರದ ಬೆನ್ನಲ್ಲೇ ಬಂದ ಜೊತೆ ಜೊತೆಯಲಿ, ಪಲ್ಲಕ್ಕಿ ಚಿತ್ರಗಳೂ ಸಹ ಹಿಟ್ ಆದವು. ಈ ಚಿತ್ರಗಳ ಬಳಿಕ ಬಂದ ಚಿತ್ರಗಳ ಪೈಕಿ ಚಾರ್ಮಿನಾರ್ ಹಾಗೂ ಚೌಕ ಚಿತ್ರಗಳನ್ನು ಬಿಟ್ಟು ಉಳಿದ ಚಿತ್ರಗಳಾವುವೂ ದೊಡ್ಡ ಮಟ್ಟದ ಹೆಸರು ಮಾಡಲೇ ಇಲ್ಲ.

    ಸುನಿಲ್ ರಾವ್

    ಸುನಿಲ್ ರಾವ್

    ಏಳು ಸುತ್ತಿನ ಕೋಟೆ, ಮೈಸೂರ್ ಜಾಣ, ಶಾಂತಿ ಕ್ರಾಂತಿ ಸೇರಿದಂತೆ ಆರು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದ್ದ ಸುನಿಲ್ ರಾವ್ ಎಕ್ಸ್ ಕ್ಯೂಸ್ ಮಿ ಎಂಬ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಟನಾಗಿ ಬೃಹತ್ ಬ್ರೇಕ್ ಸಿಕ್ಕಿತು. ಈ ಯಶಸ್ಸಿನ ಬೆನ್ನಲ್ಲೇ ರಮ್ಯಾ ಕೃ‍ಷ್ಣ ರೀತಿಯ ದೊಡ್ಡ ನಟಿಯ ಜತೆ ಅವಕಾಶವನ್ನೂ ಸಹ ಸುನಿಲ್ ಪಡೆದುಕೊಂಡರು. ಆದರೆ ಸುನಿಲ್ ಕಂಡ ಈ ಯಶಸ್ಸಿನ ಅರ್ಧದಷ್ಟು ಯಶಸ್ಸೂ ಸಹ ನಂತರದ ಚಿತ್ರಗಳಲ್ಲಿ ಸಿಗಲೇ ಇಲ್ಲ.

    ಪ್ರಜ್ವಲ್ ದೇವರಾಜ್

    ಪ್ರಜ್ವಲ್ ದೇವರಾಜ್

    ಸಿನಿಮಾ ಕ್ಷೇತ್ರದಲ್ಲಿ ಫಸ್ಟ್ ಬಾಲ್ ಸಿಕ್ಸರ್ ಬಾರಿಸುವ ಲಕ್ ಎಲ್ಲರಿಗೂ ಇರುವುದಿಲ್ಲ. ಆದರೆ ಪ್ರಜ್ವಲ್ ದೇವರಾಜ್ ವಿಷಯದಲ್ಲಿ ಹಾಗಾಗಲಿಲ್ಲ. 'ಸಿಕ್ಸರ್' ಎಂಬ ಚೊಚ್ಚಲ ಚಿತ್ರದಲ್ಲಿಯೇ ಫಸ್ಟ್ ಬಾಲ್ ಸಿಕ್ಸರ್ ಬಾರಿಸಿದರು. ಬೆನ್ನಲ್ಲೇ ತೆರೆ ಕಂಡ ಗೆಳೆಯ ಚಿತ್ರ ಕೂಡ ಸೂಪರ್ ಹಿಟ್ ಆಯಿತು. ಇದಾದ ಬಳಿಕ ಪ್ರಜ್ವಲ್ ದೇವರಾಜ್ ಹತ್ತಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಪೈಕಿ ಹಲವು ಚಿತ್ರಗಳು ದೊಡ್ಡ ಮಟ್ಟದ ನಿರೀಕ್ಷೆಯನ್ನೂ ಹುಟ್ಟುಹಾಕಿ ನಿರಾಸೆ ಮೂಡಿಸಿದ್ದವು. ಇನ್ನು ಇತ್ತೀಚೆಗಷ್ಟೆ ಬಿಡುಗಡೆಗೊಂಡ ಜೆಂಟಲ್‌ಮನ್ ಚಿತ್ರದ ಮೂಲಕ ತುಸು ಸದ್ದು ಮಾಡಿದ್ದ ಪ್ರಜ್ವಲ್ ದೇವರಾಜ್ ಇನ್ನೂ ದೊಡ್ಡ ಮಟ್ಟಕ್ಕೆ ಸದ್ದು ಮಾಡಬೇಕಿದೆ.

    ಯೋಗೇಶ್

    ಯೋಗೇಶ್

    ದುನಿಯಾ ಚಿತ್ರದಲ್ಲಿ ಲೂಸ್ ಮಾದ ಪಾತ್ರ ಮಾಡಿ ಚಿತ್ರರಂಗ ಪ್ರವೇಶಿಸಿದ ನಟ ಯೋಗೇಶ್ ನಂದ ಲವ್ಸ್ ನಂದಿತ ಚಿತ್ರದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದಿದ್ದರು. ಹೀಗೆ ಮೊದಲ ಚಿತ್ರದಲ್ಲೇ ಸಂಚಲನ ಸೃಷ್ಟಿಸಿದ್ದ ನಟ ಯೋಗೇಶ್ ನಂತರ ಅಭಿಮಯಿಸಿದ ಹಲವಾರು ಚಿತ್ರಗಳು ಒಳ್ಳೆಯ ಬೆಳೆ ಬೆಳೆಯಲಿಲ್ಲ. ಬಳಿಕ ಅಂಬಾರಿ ಚಿತ್ರ ಯೋಗೇಶ್‌ಗೆ ದೊಡ್ಡ ಬ್ರೇಕ್ ಕೊಟ್ಟಿತು. ಇದಾದ ಬಳಿಕ ಬಂದ ಕೆಲ ಚಿತ್ರಗಳು ಮಂಕಾದವು. ಪುನೀತ್ ಜತೆ ನಟಿಸಿದ ಹುಡುಗರು ಹಾಗೂ ಸಿದ್ಲಿಂಗು ಬಿಟ್ಟರೆ ಯೋಗೇಶ್ ಅಭಿನಯದ ಉಳಿದ ಚಿತ್ರಗಳು ಸದ್ದು ಮಾಡಲಿಲ್ಲ. ಸದ್ಯ ಹೆಡ್ ಬುಷ್ ಚಿತ್ರದಿಂದ ಮತ್ತೆ ಚಿತ್ರರಂಗದ ಕಡೆ ಮುಖ ಮಾಡಿರುವ ಯೋಗಿ ಕಮ್‌ಬ್ಯಾಕ್ ಹಿಟ್ ನೀಡಬೇಕಿದೆ.

    ದಿಗಂತ್

    ದಿಗಂತ್

    ಮಿಸ್ ಕ್ಯಾಲಿಫೋರ್ನಿಯಾ ಸೇರಿದಂತೆ ಕೆಲ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ದಿಗಂತ್‌ಗೆ ಐಡೆಂಟಿಟಿ ತಂದುಕೊಟ್ಟದ್ದು ಮುಂಗಾರು ಮಳೆ ಸಿನಿಮಾದ ಪಾತ್ರ. ನಂತರ ದಿಗಂತ್ ಅವರನ್ನು ಹರಸಿ ಹಲವು ಚಿತ್ರಗಳ ಆಫರ್ ಕೂಡ ಬಂದವು, ದಿಗಂತ್ ಬಣ್ಣ ಕೂಡ ಹಚ್ಚಿದ್ರು. ಮನಸಾರೆ, ಪಂಚರಂಗಿ ಚಿತ್ರಗಳು ಸದ್ದು ಮಾಡಿದ್ದು ಬಿಟ್ಟರೆ ಪೂರ್ಣ ಪ್ರಮಾಣದ ನಟನಾಗಿ ಅಭಿನಯಿಸಿದ ಉಳಿದ ಚಿತ್ರಗಳು ಕೈಹಿಡಿಯಲಿಲ್ಲ. ಗಾಳಿಪಟ ಚಿತ್ರದ ಮೂಲಕ ದೊಡ್ಡ ಪ್ರಶಂಸೆ ಪಡೆದುಕೊಂಡಿದ್ದ ದಿಗಂತ್ ಇತ್ತೀಚೆಗೆ ಬಿಡುಗಡೆಗೊಂಡ ಗಾಳಿಪಟ 2 ಚಿತ್ರದಲ್ಲೂ ಪ್ರೇಕ್ಷಕರ ಮನ ಗೆದ್ದಿದ್ದರು.

    ಚೇತನ್ ಅಹಿಂಸಾ

    ಚೇತನ್ ಅಹಿಂಸಾ

    ಚೇತನ್ ಅಹಿಂಸಾ ಅಕ ಚೇತನ್ ಅಹಿಂಸಾ ಆ ದಿನಗಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಮೊದಲ ಚಿತ್ರದಲ್ಲಿಯೇ ಸಕ್ಸಸ್ ಕಂಡಿದ್ದ ಇವರು ನಂತರ ಬಿರುಗಾಳಿ ಹಾಗೂ ಮೈನಾ ಮೂಲಕ ಸದ್ದು ಮಾಡಿದ್ದರು. ಇದನ್ನು ಹೊರತುಪಡಿಸಿದರೆ ಚೇತನ್ ಅಹಿಸಾ ಅಭಿನಯದ ಉಳಿದ ಚಿತ್ರಗಳು ಸದ್ದು ಮಾಡಲಿಲ್ಲ. ಸದ್ಯ ಚಿತ್ರರಂಗದಿಂದ ಕೊಂಚ ದೂರ ಉಳಿದಿರುವ ಚೇತನ್ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾರೆ.

    English summary
    List of Kannada actors who failed to carry their initial success forward. Take a look
    Saturday, November 19, 2022, 19:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X