»   » ಸ್ಯಾಂಡಲ್ ವುಡ್ ಸಿನಿಮಾರಂಗದ ಸುಂದರ ಸಹೋದರಿಯರು ಇವರೇ ನೋಡಿ

ಸ್ಯಾಂಡಲ್ ವುಡ್ ಸಿನಿಮಾರಂಗದ ಸುಂದರ ಸಹೋದರಿಯರು ಇವರೇ ನೋಡಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಈಗ ಅಕ್ಕ ತಂಗಿಯರ ಜೋಡಿ ಮೋಡಿ ಮಾಡುತ್ತಿದೆ. ಒಟ್ಟಿಗೆ ಬೆಳೆದು ಸ್ಕೂಲ್, ಕಾಲೇಜಿನಲ್ಲಿ ಮಾರ್ಕ್ ಗಾಗಿ ಪೈಪೋಟಿ ನಡೆಸುತ್ತಿದ್ದ ಇವರು ಈಗ ಚಿತ್ರರಂಗದಲ್ಲಿಯೂ ಒಬ್ಬರಿಗೆ ಒಬ್ಬರು ಸ್ಪರ್ಧೆ ನೀಡುತ್ತಿದ್ದಾರೆ.

ಈಗಾಗಲೇ ಅನೇಕ ಅಕ್ಕ ತಂಗಿಯರ ಜೋಡಿ ಬೆಳ್ಳಿ ಪರದೆ ಮೇಲೆ ಮಿಂಚಿದೆ. ಸದ್ಯ ಅದೇ ರೀತಿ ನಟಿ ರಚಿತಾ ರಾಮ್, ಸಂಜನಾ, ಆಶಿಕಾ, ಸೋನು ಗೌಡ ಸೇರಿದಂತೆ ಕನ್ನಡದ ಸಾಕಷ್ಟು ನಟಿಯರ ಸಹೋದರಿಯರು ಸಿನಿಮಾ ಸೀರಿಯಲ್ ಅಂತ ಸಖತ್ ಆಗಿ ಮಿಂಚುತ್ತಿದ್ದಾರೆ . ಮುಂದೆ ಓದಿ..

ರಚಿತಾ ರಾಮ್ - ನಿತ್ಯಾ ರಾಮ್

ಡಿಂಪಲ್ ಕ್ವೀನ್ ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ಕೂಡ ಈಗಾಗಲೇ ಸಿನಿಮಾ ಮಾಡಿದ್ದಾರೆ. ಸದ್ಯ ತಂಗಿ ರಚಿತಾ ರಾಮ್ ಬಿಗ್ ಸ್ಕ್ರೀನ್ ನಲ್ಲಿ ದೊಡ್ಡ ಸ್ಟಾರ್ ಆಗಿದ್ದರೆ, ಅಕ್ಕ ನಿತ್ಯಾ ರಾಮ್ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ.

ಸಂಜನಾ ಗರ್ಲಾನಿ - ನಿಕ್ಕಿ ಗರ್ಲಾನಿ

ಒಂದು ಕಡೆ ಸಿನಿಮಾ ಇನ್ನೊಂದು ಕಡೆ ತಮ್ಮ ವಿವಾದದ ಮೂಲಕ ಸಂಜನಾ ಯಾವಾಗಲು ಸುದ್ದಿಯಲ್ಲಿ ಇರುತ್ತಾರೆ. ಇತ್ತ ಅವರ ತಂಗಿ ನಿಕ್ಕಿ ಗರ್ಲಾನಿ ತಮಿಳು ಮತ್ತು ಮಲೆಯಾಳಂ ನಲ್ಲಿ ಸಾಕಷ್ಟು ಚಿತ್ರಗಳನ್ನು ಮಾಡಿದ್ದಾರೆ.

ಆಶಿಕಾ - ಅನುಷಾ

'ಮುಗುಳುನಗೆ' ಚೆಲುವೆ ಆಶಿಕಾ ಸ್ಯಾಂಡಲ್ ವುಡ್ ನಲ್ಲಿ ದಿನೇ ದಿನೇ ಮಿಂಚುತ್ತಿದ್ದಾರೆ. ಅವರ ಅಕ್ಕ ಅನುಷಾ ಸಹ ಈ ಹಿಂದೆ 'ಸೋಡಾಬುಡ್ಡಿ' ಚಿತ್ರ ಮಾಡಿದ್ದು, ಸದ್ಯ ಅನುಷಾ 'ಒನ್ಸ್ ಮೋರ್ ಕೌರವ' ಸಿನಿಮಾದಲ್ಲಿ ನಟಿಸಿದ್ದಾರೆ.

ಸೋನು ಗೌಡ - ನೇಹ ಗೌಡ

'ಇಂತಿ ನಿನ್ನ ಪ್ರೀತಿಯ' ಖ್ಯಾತಿಯ ಸೋನು ಗೌಡ ಸಿನಿಮಾರಂಗದಲ್ಲಿ ಹೆಸರು ಮಾಡಿದ್ದರೆ, ಅವರ ಸಹೋದರಿ ನೇಹ ಗೌಡ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ್ದಾರೆ.

ಅದ್ವಿತಿ ಶೆಟ್ಟಿ - ಅಶ್ವಿತಿ ಶೆಟ್ಟಿ

ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ 'ರಾಮಾಚಾರಿ' ಟ್ವಿನ್ಸ್ ಅಂತ್ತಾನೆ ಫೇಮಸ್ ಆಗಿದ್ದಾರೆ. ಸದ್ಯ ಈ ಅವಳಿ ಸಹೋದರಿಯರು 'ಎರಡು ಕನಸು' ಧಾರಾವಾಹಿ ಸೇರಿದಂತೆ ಕೆಲ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಟಾಲಿವುಡ್ ನಲ್ಲಿ

ಕನ್ನಡ ಮಾತ್ರವಲ್ಲದೆ ಟಾಲಿವುಡ್ ನಲ್ಲಿಯೂ ಅಕ್ಕ ತಂಗಿಯರ ಸಿನಿಮಾ ಯಾತ್ರೆ ಇಂದಿಗೂ ಮುಂದುವರೆಯುತ್ತಿದೆ. ಅದರಲ್ಲಿ ಶೃತಿ ಹಾಸನ್ ಮತ್ತು ಅಕ್ಷರ ಹಾಸನ್, ಕಾಜಲ್ ಅಗರ್ವಾಲ್ ಮತ್ತು ನಿಶಾ ಅಗರ್ವಾಲ್ ಸಹೋದರಿಯರ ಜೋಡಿ ಸಖತ್ ಮೋಡಿ ಮಾಡಿದೆ.

ಬಾಲಿವುಡ್ ನಲ್ಲಿ

ಬಾಲಿವುಡ್ ನಲ್ಲಿ ಕರೀನಾ ಕಪೂರ್, ಕಂಗಾನ, ಶಿಲ್ಪಾ ಶೆಟ್ಟಿ ಅವರೊಂದಿಗೆ ಅವರ ಸಹೋದರಿಯರು ಕೂಡ ಮೋಡಿ ಮಾಡಿದ್ದಾರೆ.

Read more about: rachita ram sanjana sonu gowda
English summary
List of Kannada actress sisters.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada