»   » ಕನ್ನಡದ ಈ ನಿರ್ದೇಶಕ ಹೀರೋಯಿನ್ ಗಳ ಪಾಲಿಗೆ ಅದೃಷ್ಟವಂತ.!

ಕನ್ನಡದ ಈ ನಿರ್ದೇಶಕ ಹೀರೋಯಿನ್ ಗಳ ಪಾಲಿಗೆ ಅದೃಷ್ಟವಂತ.!

Posted By:
Subscribe to Filmibeat Kannada
Mahesh Babu, Kannada Director called as lucky director for these Heroines

ಕನ್ನಡದ ಒಬ್ಬ ನಿರ್ದೇಶಕ ನಟಿಯರ ಪಾಲಿಗೆ ಸಖತ್ ಲಕ್ಕಿ. ಯಾಕಂದ್ರೆ ಈ ನಿರ್ದೇಶಕ ಪರಿಚಯಿಸಿದ ನಟಿಯರೆಲ್ಲ ಸ್ಟಾರ್ ಆಗಿದ್ದಾರೆ. ಆ ನಿರ್ದೇಶಕ ಬೇರೆ ಯಾರೂ ಅಲ್ಲ 'ಆಕಾಶ್' ಮತ್ತು 'ಅರಸು' ಚಿತ್ರಗಳ ಖ್ಯಾತಿಯ ಮಹೇಶ್ ಬಾಬು.

ಮಹೇಶ್ ಬಾಬು ಕನ್ನಡದಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಗಳ ಪೈಕಿ ಅತಿ ಹೆಚ್ಚು ಸಿನಿಮಾಗಳಲ್ಲಿ ಹೊಸ ನಟಿಯರಿಗೆ ಅವಕಾಶ ನೀಡಿದ್ದಾರೆ. ಮಹೇಶ್ ಬಾಬು ಸಿನಿಮಾ ಮಾಡಿದ ಮೇಲೆ ಆ ನಟಿಯರಿಗೆ ಅದೃಷ್ಟ ಖುಲಾಯಿಸುತ್ತಿದೆ. ಒಂದರ ಹಿಂದೆ ಒಂದರಂತೆ ಸಿನಿಮಾಗಳ ಅವಕಾಶ ಬರುತ್ತಿದೆ.

ಅಂದಹಾಗೆ, ಮಹೇಶ್ ಬಾಬು ಪರಿಚಯಿಸಿದ ಇಂದು ಸ್ಟಾರ್ ಆಗಿರುವ ನಟಿಯರು ಯಾರು ಎಂಬುದು ಇಲ್ಲಿದೆ ಓದಿ...

'ಐಂದ್ರಿತಾ ರೇ'

ಮಹೇಶ್ ಬಾಬು ನಿರ್ದೇಶನದ 'ಮೆರವಣಿಗೆ' ಸಿನಿಮಾದ ಮೂಲಕ ಐಂದ್ರಿತಾ ರೇ ಸಿನಿಜರ್ನಿ ಶುರುವಾಯಿತು. ಈ ಚಿತ್ರದ ನಂತರ ಐಂದ್ರಿತಾ ರೇ ಕನ್ನಡ ಚಿತ್ರರಂಗದ ಬೇಡಿಕೆಯ ನಟಿಯರಲ್ಲಿ ಒಬ್ಬರಾದರು.

ಕೃತಿ ಕರಬಂಧ

ನಟಿ ಕೃತಿ ಕರಬಂಧ ಅವರನ್ನು ಕೂಡ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದ್ದು ಮಹೇಶ್ ಬಾಬು. ಅದು 'ಚಿರು' ಚಿತ್ರದ ಮೂಲಕ. 'ಚಿರು' ಚಿತ್ರದಲ್ಲಿ ನಟಿಸಿದ ಕೃತಿ ನಂತರ ಶಿವಣ್ಣ, ಉಪೇಂದ್ರ, ಯಶ್ ರೀತಿಯ ಸ್ಟಾರ್ ನಟರ ಜೊತೆ ನಟಿಸಿದರು.

ಆಶಿಕಾ ರಂಗನಾಥ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ ನಟಿ ಆಶಿಕಾಗೆ ಸಖತ್ ಡಿಮ್ಯಾಂಡ್ ಹುಟ್ಟಿಕೊಂಡಿದೆ. ಮಹೇಶ್ ಬಾಬು ನಿರ್ದೇಶನದ 'ಕ್ರೇಜಿ ಬಾಯ್' ಚಿತ್ರದ ಮೂಲಕ ಆಶಿಕಾ ಚಿತ್ರರಂಗಕ್ಕೆ ಕಾಲಿಟ್ಟಿರು. ಆದರೆ ಸದ್ಯ ಈಗ 'ಮಾಸ್ ಲೀಡರ್', 'ಮುಗುಳುನಗೆ', 'ರಾಜು ಕನ್ನಡ ಮೀಡಿಯಂ', 'ರೋಬೋ 2' ಮತ್ತು 'ಗರುಡ' ಸೇರಿದಂತೆ ಸಾಕಷ್ಟು ಸಿನಿಮಾದ ಅವಕಾಶ ಸಿಕ್ಕಿದೆ.

ಲತಾ ಹೆಗಡೆ

ಸದ್ಯ ಮಹೇಶ್ ಬಾಬು 'ಅತಿರಥ' ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ನ್ಯೂಜಿಲ್ಯಾಂಡ್ ಬೆಡಗಿ ಲತಾ ಹೆಗಡೆ ಕಾಣಿಸಿಕೊಂಡಿದ್ದಾರೆ. ಆದರೆ ಈಗ ಈ ಚಿತ್ರದ ಬಿಡುಗಡೆಗೆ ಮೊದಲೇ ಲತಾ ಹೆಗಡೆ ವಿನಯ್ ರಾಜ್ ಕುಮಾರ್ ಅವರ ಮೂರನೇ ಚಿತ್ರದ ನಾಯಕಿ ಆಗಿದ್ದಾರೆ.

ಸುರ್ವೀನ್ ಚಾವ್ಲಾ

ವಿಶೇಷ ಅಂದರೆ ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಸುರ್ವೀನ್ ಚಾವ್ಲಾ ಅವರನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದು ನಿರ್ದೇಶಕ ಮಹೇಶ್ ಬಾಬು. ಶಿವಣ್ಣ ನಟನೆಯ 'ಪರಮೇಶ ಪಾನ್ ವಾಲ' ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ ಸುರ್ವೀನ್ ಚಾವ್ಲಾ ನಂತರ ಹಿಂದಿಯಲ್ಲಿ 'ಹೇಟ್ ಸ್ಟೋರಿ 2' ಸೇರಿದಂತೆ ಅನೇಕ ಚಿತ್ರಗಳನ್ನು ಮಾಡಿದ್ದರು.

English summary
Here is the List of Kannada Actresses introduced by Kannada Director Mahesh Babu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada