»   » ಗಾಂಧಿನಗರದ ಈ ಮೂರು ನಿರ್ದೇಶಕರ ಖುಷಿಗೆ ಒಂದೇ ಕಾರಣ.!

ಗಾಂಧಿನಗರದ ಈ ಮೂರು ನಿರ್ದೇಶಕರ ಖುಷಿಗೆ ಒಂದೇ ಕಾರಣ.!

Posted By:
Subscribe to Filmibeat Kannada
ಗಾಂಧಿನಗರದ ಈ ಮೂರು ನಿರ್ದೇಶಕರ ಖುಷಿಗೆ ಒಂದೇ ಕಾರಣ | Filmibeat Kannada

ಒಂದು ಸಿನಿಮಾಗೆ ಕಥೆ ಮತ್ತು ನಿರ್ದೇಶಕ ಬಹಳ ಮುಖ್ಯ. ಸಿನಿಮಾ ಹುಟ್ಟುವುದೇ ಒಬ್ಬ ನಿರ್ದೇಶಕನಿಂದ. ಅದೇ ರೀತಿ ಕನ್ನಡದಲ್ಲಿಯೂ ಅನೇಕ ಪ್ರತಿಭಾವಂತ ನಿರ್ದೇಶಕರು ಇದ್ದಾರೆ. ಅದರಲ್ಲಿ ಮೂರು ನಿರ್ದೇಶಕರು ಈಗ ದಶಕದ ಸಂಭ್ರಮದಲ್ಲಿ ಇದ್ದಾರೆ.

ಸ್ಯಾಂಡಲ್ ವುಡ್ ನ ಸ್ಟಾರ್ ಡೈರೆಕ್ಟರ್ ಗಳಾದ ದುನಿಯಾ ಸೂರಿ, ಶಶಾಂಕ್ ಮತ್ತು ಆರ್.ಚಂದ್ರು ಈಗ ಹತ್ತು ವರ್ಷ ಪೂರೈಸಿರುವ ಖುಷಿಯಲ್ಲಿದ್ದಾರೆ. ಈ ಹಿನ್ನಲೆಯಲ್ಲಿ ಈ ಮೂರು ನಿರ್ದೇಶಕರ ಸಿನಿಮಾಗಳ ಸಣ್ಣ ವಿವರ ಇಲ್ಲಿದೆ ಓದಿ...

ದುನಿಯಾ ಸೂರಿ

ನಿರ್ದೇಶಕ ಸೂರಿ, ದುನಿಯಾ ಸೂರಿ ಅಂತಲೇ ಗಾಂಧಿನಗರದಲ್ಲಿ ಫೇಮಸ್. ಸಿನಿಮಾದಿಂದ ಸಿನಿಮಾಗೆ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿರುವ ಸೂರಿ ಈಗ 10 ವರ್ಷವನ್ನು ಚಿತ್ರರಂಗದಲ್ಲಿ ಕಳೆದಿದ್ದಾರೆ. ಸೂರಿ ನಿರ್ದೇಶನದ ಮೊದಲ ಸಿನಿಮಾ 'ದುನಿಯಾ' 2007ರಲ್ಲಿ ಬಂದಿದ್ದು, ಈಗ ಸೂರಿ ದಶಕದ ನಿರ್ದೇಶಕನಾಗಿದ್ದಾರೆ.

ಸೂರಿ ಸಿನಿಮಾಗಳು

'ದುನಿಯಾ' ನಂತರ ಸೋಲು ಗೆಲುವು ಎರಡನ್ನು ಸೂರಿ ನೋಡಿದ್ದಾರೆ. 'ಇಂತಿ ನಿನ್ನ ಪ್ರೀತಿಯ', 'ಜಂಗ್ಲಿ' ಚಿತ್ರಗಳು ಅಷ್ಟಾಗಿ ಜನರಿಗೆ ಹಿಡಿಸಲಿಲ್ಲ. ಆದರೆ 'ಕೆಂಡಸಂಪಿಗೆ', 'ದೊಡ್ಮನೆ ಹುಡುಗ' ಚಿತ್ರಗಳು ಸೂಪರ್ ಹಿಟ್ ಆಗಿವೆ. ಸದ್ಯ ಸೂರಿ 'ಕಡ್ಡಿಪುಡಿ' ಬಳಿಕ ಮತ್ತೆ ಶಿವಣ್ಣನ ಜೊತೆ 'ಟಗರು' ಚಿತ್ರ ಮಾಡುತ್ತಿದ್ದಾರೆ.

ಶಶಾಂಕ್

ಕನ್ನಡದ ಮತ್ತೊಬ್ಬ ನಿರ್ದೇಶಕ ಶಶಾಂಕ್ ಕೂಡ ಹತ್ತು ವರ್ಷ ಕಂಪ್ಲೀಟ್ ಮಾಡಿದ್ದಾರೆ. 2007ರಲ್ಲಿ ಪ್ರಜ್ವಲ್ ದೇವರಾಜ್ ನಟನೆಯ 'ಸಿಕ್ಸರ್' ಸಿನಿಮಾದ ಮೂಲಕ ಶಶಾಂಕ್ ಸ್ವತಂತ್ರ ನಿರ್ದೇಶಕರಾದರು.

ಶಶಾಂಕ್ ಸಿನಿಮಾಗಳು

ಮೊದಲ ಚಿತ್ರದ ಸೋಲಿನ ನಂತರ 'ಮೊಗ್ಗಿನ ಮನಸ್ಸು' ಚಿತ್ರ ಮಾಡಿದ ಶಶಾಂಕ್ ದೊಡ್ಡ ಗೆಲುವು ಸಾಧಿಸಿದರು. ಆ ನಂತರ 'ಕೃಷ್ಣನ್ ಲವ್ ಸ್ಟೋರಿ', 'ಜರಾಸಂಧ', 'ಬಚ್ಚನ್', 'ಕೃಷ್ಣಲೀಲಾ' ಮತ್ತು 'ಮುಂಗಾರು ಮಳೆ 2' ಚಿತ್ರಗಳನ್ನು ಶಶಾಂಕ್ ನಿರ್ದೇಶನ ಮಾಡಿದರು. ಸದ್ಯ 'ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಅವರು ಬಿಜಿ ಇದ್ದಾರೆ.

ಆರ್.ಚಂದ್ರು

'ತಾಜ್ ಮಹಲ್' ಖ್ಯಾತಿಯ ನಿರ್ದೇಶಕ ಆರ್.ಚಂದ್ರು ಚಿತ್ರರಂಗಕ್ಕೆ ಬಂದು 10 ವರ್ಷ ಆಗಿದೆ. ಈ ಹಿನ್ನಲೆಯಲ್ಲಿ ಅವರು ತಮ್ಮ 'ಕನಕ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ದಶಕ ಪೂರೈಸಿದ ನಿರ್ದೇಶಕರಿಗೆ ಸನ್ಮಾನ ಮಾಡಿದರು.

ಮತ್ತೆ 'ಕೆಂಡಸಂಪಿಗೆ' ಹಿಂದೆ ಹೊರಟ ನಿರ್ದೇಶಕ ಸೂರಿ

ಆರ್.ಚಂದ್ರು ಸಿನಿಮಾಗಳು

'ತಾಜ್ ಮಹಲ್', 'ಪ್ರೇಮ್ ಕಹಾನಿ', 'ಮೈಲಾರಿ', 'ಬ್ರಹ್ಮ', ಕೋಕೋ, 'ಚಾರ್ ಮಿನರ್', 'ಲಕ್ಷ್ಮಣ' ಚಿತ್ರಗಳು ಚಂದ್ರು ಅಕೌಂಟ್ ನಲ್ಲಿದೆ. ಸದ್ಯ ದುನಿಯಾ ವಿಜಯ್ ಮತ್ತು ಚಂದ್ರು ಕಾಂಬಿನೇಶನ್ ನಲ್ಲಿ 'ಕನಕ' ಸಿನಿಮಾ ಬರುತ್ತಿದೆ.

English summary
List of Kannada Directors who completed 10 years in Sandalwood. ಹತ್ತು ವರ್ಷ ಸಿನಿಮಾ ಜರ್ನಿ ಪೂರಿಸಿದ ಕನ್ನಡದ ನಿರ್ದೇಶಕರ ಪಟ್ಟಿ ಇಲ್ಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada