»   » ಪ್ರೇಮಿಗಳ ದಿನಕ್ಕೆ ಕಾದಿವೆ ಸಾಲುಸಾಲು ಪ್ರೇಮಕಥೆಗಳು

ಪ್ರೇಮಿಗಳ ದಿನಕ್ಕೆ ಕಾದಿವೆ ಸಾಲುಸಾಲು ಪ್ರೇಮಕಥೆಗಳು

By: ಜೀವನರಸಿಕ
Subscribe to Filmibeat Kannada

ಸಿನಿಮಾ ಅಂದಮೇಲೆ ಅಲ್ಲೊಂದು ಲವ್ ಸ್ಟೋರಿ ಇರಲೇಬೇಕು. ಇನ್ನು ಲವ್ ಸ್ಟೋರಿಗಳೇ ಸಿನಿಮಾ ಆಗೋದು ಹೆಚ್ಚು. ಇಂತಹಾ ಲವ್ ಸ್ಟೋರಿಗಳನ್ನ ತೆರೆಮೇಲೆ ನೋಡೊಕೆ ಪ್ರಶಸ್ತವಾದ ದಿನ ಅಂದ್ರೆ ಅದು ಫೆಬ್ರವರಿ 14. ಈ ವ್ಯಾಲಂಟೈನ್ಸ್ ಡೇ ದಿನ ಸಿನಿಮಾ ರಿಲೀಸ್ ಮಾಡ್ಬೇಕು ಅಂತ ಅದೆಷ್ಟೋ ನಿರ್ಮಾಪಕರು ತುದಿಗಾಲಲ್ಲಿ ನಿಂತಿರುತ್ತಾರೆ.

ಕಳೆದ ವರ್ಷ ವ್ಯಾಲಂಟೈನ್ಸ್ ಡೇ ಜೊತೆಗೇ ಬಂದಿದ್ದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಯಶಸ್ವಿಯಾಗಿತ್ತು. ಈ ವರ್ಷ ಕೂಡ ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಿನಿಮಾಗಳು ಪ್ರೇಮಿಗಳ ದಿನ ಥಿಯೇಟರ್ಗೆ ಎಂಟ್ರಿಕೊಡೋಕೆ ಕಾಯ್ತಾ ಇವೆ.

ಸಿನಿಮಾಗಳೇನೋ ಸಾಲು ಸಾಲು ಕಾಯ್ತಾ ಇವೆ ಆದ್ರೆ ಥಿಯೇಟರ್ಗಳು ಖಾಲಿ ಇರ್ತವಾ? ಅಷ್ಟೂ ಸಿನಿಮಾಗಳಿಗೆ ಥಿಯೇಟರ್ ಸಿಕ್ಕುತ್ತಾ ಅನ್ನೋ ಪ್ರಶ್ನೆ ಚಿತ್ರಪಂಡಿತರದ್ದು. ಪ್ರೇಮಿಗಳ ದಿನಕ್ಕೆ ಕಾಯ್ತಾ ಇರೋ ಚಿತ್ರಗಳು ಯಾವೆಲ್ಲ ಅನ್ನೋದನ್ನ ನೀವೂ ಒಂದ್ಸಾರಿ ನೋಡ್ತಾ ಹೋಗಿ.

ಪ್ರೇಮಿಗಳ ದಿನಕ್ಕೆ ರವಿಮಾಮನ ಕ್ರೇಜಿಸ್ಟಾರ್

ರವಿಚಂದ್ರನ್ ಸಿನಿಮಾ ಬರುತ್ತೆ ಅಂದ್ರೆ ಪ್ರೇಮಿಗಳಿಗೆ ಮತ್ತು ಚಿತ್ರಪ್ರೇಮಿಗಳಿಗೆ ಹಬ್ಬ. ರವಿಮಾಮನ ಸಿನಿಮಾ ಅಂದ್ರೆ ಅದು ಪ್ರೇಮಿಗಳ ಸಿನಿಮಾ ಅಂತ ಮತ್ತೆ ಹೇಳಬೇಕಾಗಿಲ್ಲ. ಇನ್ನು ಮತ್ತೆ ಇಲ್ಲಿ ಮಲ್ಲ ಸಿನಿಮಾದ ಜೋಡಿ ಪ್ರಿಯಾಂಕಾ ಕ್ರೇಜಿಸ್ಟಾರ್ ಜೋಡಿಯಾಗ್ತಿದ್ದು ಚಿತ್ರಪ್ರೇಮಿಗಳು ಒಂದ್ಸಾರಿ ಥಿಯೇಟರ್ ಕಡೆ ಹೋಗಿ ಬರೋದು ಕನ್ಫರ್ಮ್.

'ರೋಜ್' ಪ್ರೀತಿಯ ರಾಯಭಾರಿ

ಅಜಯ್ ರಾವ್, ಶ್ರಾವ್ಯಾ ಅಭಿನಯದ ರೋಜ್ ಸಿನಿಮಾ ಕೂಡ ಪ್ರೀತಿಯ ಕಥೆ ಹೊಂದಿರುವ ಪ್ರೇಮಿಗಳ ಸಿನಿಮಾ. ಪ್ರೇಮಿಗಳ ದಿನಕ್ಕೆ ಚಿತ್ರ ಬಿಡುಗಡೆಗೆ ಚಿತ್ರತಂಡ ರೆಡಿಯಾಗಿದೆ.

ಪ್ರೇಮಿಗಳ ದಿನಕ್ಕೆ ರಂಗನ್ ಸ್ಟೈಲ್ ರಂಗು

ಸಿಸಿಎಲ್ ನ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಮಿಂಚುತ್ತಿರುವ 'ಜಾಲಿಡೇಸ್' ಪ್ರದೀಪ್ ಮತ್ತು ಕನ್ನಿಕಾ ತಿವಾರಿ ಅಭಿನಯದ 'ರಂಗನ್ ಸ್ಟೈಲ್' ಪ್ರೇಮಿಗಳ ದಿನಕ್ಕೆ ರಂಗು ತುಂಬಿಕೊಳ್ಳಲಿದೆ. ಪ್ರದೀಪ್ ಜೊತೆ ಕಿಚ್ಚ ಸುದೀಪ್ ಗೆಸ್ಟ್ ರೋಲ್ ಮಾಡಿದ್ದು ಕಿಚ್ಚನನ್ನ ನೋಡೋಕೆ ಅಭಿಮಾನಿಗಳು ಕಾದಿರೋದಂತೂ ಸತ್ಯ..

ಅಜಿತ್ ಫೆಬ್ರವರಿ 14ಕ್ಕೆ ತಯಾರಿ

ಚಿರಂಜೀವಿ ಸರ್ಜಾ ಅಭಿನಯದ ತಮಿಳಿನ 'ಪೈಯ್ಯಾ' ಚಿತ್ರದ ರೀಮೇಕ್ ಪ್ರೇಮಿಗಳ ದಿನಕ್ಕೆ ತೆರೆಗಿಳಿಯೋಕೆ ಥಿಯೇಟರ್ಗಳ ಹುಡುಕಾಟ ಶುರು ಮಾಡ್ತಿದೆ.

ಪ್ರೇಮಿಗಳಿಗೆ ಹೊಸ ರಂಗು ದಿಲ್ ರಂಗೀಲಾ

'ಶ್ರಾವಣಿ ಸುಬ್ರಹ್ಮಣ್ಯ' ಯಶಸ್ಸನ್ನ ಎನ್ ಕ್ಯಾಶ್ ಮಾಡಿಕೊಳ್ಳಲಿರೋ ಪ್ರೀತಂ ಗುಬ್ಬಿ ನಿರ್ದೇಶನದ 'ದಿಲ್ ರಂಗೀಲಾ' ಸಿನಿಮಾ ದಿಲ್ ಖುಷ್ ಮಾಡೋಕೆ ಫೆಬ್ರವರಿ 14ಕ್ಕೆ ತೆರೆಗೆ ಬರೋ ತಯಾರಿಯಲ್ಲಿದೆ.

ಹೊಸಬರ ಸಿನಿಮಾಗಳಿವೆ..

ಪ್ರೇಮಿಗಳ ದಿನಕ್ಕೆ ಒಂದಷ್ಟು ಹೊಸಬರ ಸಿನಿಮಾಗಳೂ ಥಿಯೇಟರ್ಗಳ ಹುಡುಕಾಟದಲ್ಲಿವೆ. ಆದ್ರೆ ಇಷ್ಟೂ ಸಿನಿಮಾಗಳಿಗೆ ಥಿಯೇಟರ್ ಸಿಗುತ್ತಾ ಅನ್ನೋದೇ ಇಲ್ಲಿ ಪ್ರಶ್ನೆ. ಸಿಕ್ಕಿದರೂ ಯಾವ ಸಿನಿಮಾಗೆ ಹೋಗೋದು ಎಂದು ಪ್ರೇಮಿಗಳಿಗೂ ಒಂಥರಾ ಕನ್ಫೂಸ್ ಗೆ ಒಳಗಾಗುತ್ತಾರೆ.

English summary
Number of Kannada movies all set to release on this Valentine's Day, 14th February, 2014. Kannada movies like Crazy Star, Rose, Rangan Style, Dil Rangeela, Ajit many more movies are suppose to hit the theatre on this lovely day.
Please Wait while comments are loading...