For Quick Alerts
  ALLOW NOTIFICATIONS  
  For Daily Alerts

  ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ

  |

  ಸ್ಟಾರ್ ನಟರ ಚಿತ್ರಗಳು ಒಂದೊಂದೆ ಬಿಡುಗಡೆ ದಿನಾಂಕ ಘೋಷಿಸಿದೆ. ಸ್ಯಾಂಡಲ್‌ವುಡ್‌ನಲ್ಲಿ ಇನ್ನು ಎರಡು ತಿಂಗಳು ಸ್ಟಾರ್ ನಟರ ಅಬ್ಬರ ಜೋರಾಗಿರಲಿದೆ. ಈ ಗ್ಯಾಪ್‌ನಲ್ಲಿ ಹೊಸಬರ ಸಿನಿಮಾಗಳು ತೆರೆಗೆ ಬರುವುದು ಸ್ವಲ್ಪ ಮಟ್ಟಿಗೆ ಕಷ್ಟ ಎನ್ನಬಹುದು.

  ಬಹುಶಃ ಅದಕ್ಕಾಗಿಯೇ ಈ ವಾರ ಐದು ಕನ್ನಡ ಸಿನಿಮಾ ಚಿತ್ರಮಂದಿರಕ್ಕೆ ಬರ್ತಿದೆ. ಜನವರಿ 22 ರಂದು ಐದು ಕನ್ನಡ ಸಿನಿಮಾ ಥಿಯೇಟರ್‌ಗೆ ಬರ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

  ದುನಿಯಾ ವಿಜಿಯ ಸಲಗ, ಶಿವಣ್ಣನ ಭಜರಂಗಿ-2 ಬಿಡುಗಡೆ ದಿನಾಂಕ ಫಿಕ್ಸ್

  'ತಲಾಖ್ ತಲಾಖ್ ತಲಾಖ್ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಆರ್‌ಜೆ ನೇತ್ರಾ, ಸುಚೇತನ್ ಸ್ವರೂಪ್, ಶ್ರೀನಿವಾಸ್ ಮೂರ್ತಿ, ರವಿ ಭಟ್, ವೀಣಾ ಸುಂದರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಪ್ರಶಾಂತ್ ಸಿದ್ದಿ, ದಿವಂಗತ ನಟ ರಾಕ್‌ಲೈನ್ ಸುಧಾಕರ್, ಶಿವಮೊಗ್ಗ ಸಂತೋಷ್, ಮೇಘಶ್ರೀ ನಟನೆಯ 'ಪಂಟ್ರು' ಸಿನಿಮಾ ಈ ವಾರವೇ ಬಿಡುಗಡೆಯಾಗುತ್ತಿದೆ. ಮಿಲನ್ ಧನು ಈ ಚಿತ್ರ ನಿರ್ದೇಶಿಸಿದ್ದಾರೆ.

  ಬಿಂದುಶ್ರೀ, ಪವಿತ್ರಾ, ಹರೀಶ್, ಸಮೀರ್ ನಾಗ್ ಹಾಗೂ ರಾಕ್‌ಲೈನ್ ಸುಧಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಲಡ್ಡು' ಚಿತ್ರವೂ ಇದೇ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ರಾಮಾನಂದ್ ಈ ಚಿತ್ರ ನಿರ್ದೇಶಿಸಿದ್ದಾರೆ.

  ರಾಜು ದೇವಸಂದ್ರ ನಿರ್ದೇಶನದ 'ಕತ್ಲೆಕಾಡು' ಸಿನಿಮಾನೂ ಇದೇ ವಾರ ರಿಲೀಸ್ ಆಗುತ್ತಿದೆ. ಶಿವಾಜಿನಗರ ಲಾಲ್, ಸಂಜೀವ್, ಸಿಂಧು ರಾವ್, ಸಂಹಿತಾ ಶಾ, ಸಿಂಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  ಜೊತೆಗೆ 'ರಾಜಮಾರ್ಗ' ಎನ್ನುವ ಚಿತ್ರವೂ ಬಿಡುಗಡೆಯಾಗುತ್ತಿದೆ.

  KGF 2 ಕ್ಲೈಮ್ಯಾಕ್ಸ್ ಗೆ ಕೋಟಿ ಕೋಟಿ ಸುರಿದ ವಿಜಯ್ ಕಿರಗಂದೂರ್ | Filmibeat Kannada
  English summary
  List of Kannada Movies Releasing this Week 22 January. Pantru, kathle kadu, laddu, talaq talaq talaq movies will hit screen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X