For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ - ರಶ್ಮಿಕಾ: ಪರಭಾಷೆಗಳಲ್ಲಿ ಸದ್ದು ಮಾಡುತ್ತಿರುವ ಕನ್ನಡಿಗರ ಪಟ್ಟಿ

  |

  ಕನ್ನಡ ಚಿತ್ರರಂಗ ಹಲವಾರು ಸ್ಟಾರ್‌ಗಳನ್ನು ಹುಟ್ಟುಹಾಕಿದ ವೇದಿಕೆಯಾಗಿದೆ. ಗಾಡ್‌ಫಾದರ್ ಇಲ್ಲದೇ ಬರುವ ಪ್ರತಿಭಾವಂತ ಕಲಾವಿದರಿಗೆ ನೆಲೆ ಕೊಟ್ಟಿರುವ ಕನ್ನಡ ಚಿತ್ರರಂಗವೆಂದರೆ ಕಲಾವಿದರಿಗೆ ಅಪಾರ ಗೌರವ. ಇನ್ನು ಕನ್ನಡ ಚಿತ್ರರಂಗದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಹಲವು ಕಲಾವಿದರು ಕನ್ನಡ ಹೊರತುಪಡಿಸಿ ಇತರೆ ಭಾಷೆಯ ಚಿತ್ರಗಳಲ್ಲಿಯೂ ಅಭಿನಯಿಸಿದ್ದು ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ.

  ಇನ್ನು ಹಲವಾರು ಕನ್ನಡಿಗರು ಕೇವಲ ಪರಭಾಷಾ ಚಿತ್ರಗಳಲ್ಲಿಯೇ ಅಭಿನಯಿಸಿದ್ದರೆ, ಇನ್ನೂ ಕೆಲವರು ಪರಭಾಷೆ ನಂತರ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ, ಮತ್ತೊಂದಷ್ಟು ಕಲಾವಿದರು ಕನ್ನಡದಲ್ಲಿ ನಟಿಸಿ ಪರಭಾಷಾ ಚಿತ್ರಗಳ ಅವಕಾಶ ಗಿಟ್ಟಿಸಿಕೊಂಡ ನಂತರ ಬೇರೆ ಇಂಡಸ್ಟ್ರಿಯಲ್ಲಿಯೇ ಸೆಟಲ್ ಆಗಿಬಿಟ್ಟಿದ್ದಾರೆ. ಹೀಗೆ ಪರಭಾಷಾ ಚಿತ್ರರಂಗಗಳಲ್ಲಿ ನೆಲೆಸಿ ಸದ್ದು ಮಾಡಿರುವ ಕನ್ನಡಿಗರ ಪಟ್ಟಿ ಈ ಕೆಳಕಂಡಂತಿದೆ.

  ಕನ್ನಡ ಚಿತ್ರರಂಗದ ಮೂವರು ದಿಗ್ಗಜರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಕನ್ನಡ ಚಿತ್ರರಂಗದ ಮೂವರು ದಿಗ್ಗಜರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

  ಮುಖ್ಯವಾಗಿ ರಜನಿಕಾಂತ್

  ಮುಖ್ಯವಾಗಿ ರಜನಿಕಾಂತ್

  ಪರಭಾಷೆಗಳಲ್ಲಿ ಸದ್ದು ಮಾಡಿದ ಕನ್ನಡ ಕಲಾವಿದರು ಎಂಬ ವಿಚಾರ ಬಂದಾಗ ಮೊದಲಿಗೆ ಕೇಳಿ ಬರುವ ಹೆಸರೇ ಬೆಂಗಳೂರಿನಲ್ಲಿ ಜನಿಸಿ ಬೆಳೆದ ರಜನಿಕಾಂತ್. 1975ರಲ್ಲಿ ಅಪೂರ್ವ ರಾಗಂಗಳ್ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಸಿನಿಮಾ ಪಯಣ ಆರಂಭಿಸಿದ ರಜನಿಕಾಂತ್ ನಂತರದ ವರ್ಷವೇ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಕಥಾ ಸಂಗಮ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದರು. ಆದರೆ ರಜನಿಕಾಂತ್ ಹೆಚ್ಚಾಗಿ ಮಿಂಚಿದ್ದು ತಮಿಳು ಚಿತ್ರರಂಗದಲ್ಲಿ. ಸಾಲು ಸಾಲು ಚಿತ್ರಗಳಲ್ಲಿ ನಟಿಸಿದ ರಜನಿಕಾಂತ್ ತಮಿಳಿನಲ್ಲಿ ಅನೇಕ ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ನೀಡಿದರು. ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದಾದಾ ಸಾಹೇಬ್ ಫಾಲ್ಕೆ ರೀತಿಯ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ರಜನಿಕಾಂತ್ ಭಾರತ ಚಿತ್ರರಂಗದ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದುಕೊಳ್ಳುವಂತಹ ಕಲಾವಿದನಾಗಿದ್ದಾರೆ.

  ನಿರ್ದೇಶಕ ರಾಜಮೌಳಿ

  ನಿರ್ದೇಶಕ ರಾಜಮೌಳಿ

  ರಜನಿಕಾಂತ್ ಬಳಿಕ ಪರಭಾಷೆಯಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ಕರ್ನಾಟಕ ಮೂಲದ ಕಲಾವಿದನೆಂದರೆ ಅದು ನಿರ್ದೇಶಕ ರಾಜಮೌಳಿ. ರಾಯಚೂರು ಮೂಲದ ರಾಜಮೌಳಿ ಸಂಪೂರ್ಣವಾಗಿ ತೆಲುಗು ಚಿತ್ರರಂಗದಲ್ಲಿ ನೆಲೆನಿಂತ ನಿರ್ದೇಶಕ. ತೆಲುಗು ಹೊರತುಪಡಿಸಿ ಬೇರೆ ಯಾವುದೇ ಭಾಷೆಯಲ್ಲಿಯೂ ಸಹ ಕೆಲಸ ಮಾಡದ ರಾಜಮೌಳಿ ಭಾರತದ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವನ್ನು ನಿರ್ದೇಶನ ಮಾಡಿದ ಹೆಮ್ಮೆಯನ್ನು ಹೊಂದಿದ್ದಾರೆ. ದೇಶದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕನಾಗಿದ್ದಾರೆ.

  ನಟಿಯರು

  ನಟಿಯರು

  ದಕ್ಷಿಣ ಭಾರತ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತ ಚಿತ್ರರಂಗಕ್ಕೆ ಅತಿಹೆಚ್ಚು ಯಶಸ್ವಿ ನಟಿಯರನ್ನು ನೀಡಿದ್ದು ಕರ್ನಾಟಕ ಎಂದು ಹೇಳಬಹುದು. ಬಾಲಿವುಡ್‌ನಲ್ಲಿ ಪಾರುಪತ್ಯ ಹೊಂದಿದ್ದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಹಾಗೂ ಶಿಲ್ಪಾ ಶೆಟ್ಟಿ ಇಬ್ಬರೂ ಸಹ ಕರ್ನಾಟಕ ಮೂಲದವರೇ. ಅತ್ತ ಟಾಲಿವುಡ್ ಚಿತ್ರರಂಗದ ಪ್ರಮುಖ ನಟಿಯರ ಪಟ್ಟಿ ತೆಗೆದರೆ ಬಹುತೇಕರು ಕರ್ನಾಟಕ ಮೂಲದವರೇ ಆಗಿದ್ದಾರೆ. ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಯನ್ನು ಗಳಿಸಿರುವ ನಟಿ ಅನುಷ್ಕಾ ಶೆಟ್ಟಿ, ಇತ್ತೀಚೆಗೆ ಮಿಂಚುತ್ತಿರುವ ಪೂಜಾ ಹೆಗ್ಡೆ, ಕೃತಿ ಶೆಟ್ಟಿ ಹಾಗೂ ಶ್ರೀಲೀಲಾ ಎಲ್ಲರೂ ಕರ್ನಾಟಕದವರೇ. ಅದರಲ್ಲಿಯೂ ವಿಶೇಷವಾಗಿ ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಮೂಲಕ ಸಿನಿರಂಗ ಪ್ರವೇಶಿಸಿ ನ್ಯಾಷನಲ್ ಕ್ರಷ್ ಎಂದು ಕರೆಸಿಕೊಳ್ಳುವ ಮಟ್ಟಕ್ಕೆ ಬೆಳೆದು ಸದ್ಯ ಭಾರತದಾದ್ಯಂತ ಭಾರೀ ಬೇಡಿಕೆಯನ್ನು ಹೊಂದಿದ್ದಾರೆ.

  ಇತರೆ ನಟರು

  ಇತರೆ ನಟರು

  ಇನ್ನು ನಟಿಯರು ಮಾತ್ರವಲ್ಲದೇ ಕರ್ನಾಟಕ ಮೂಲದ ಹಲವು ನಟರೂ ಸಹ ಪರಭಾಷಾ ಚಿತ್ರರಂಗಗಳಲ್ಲಿ ತಮ್ಮದೇ ಆದ ರೀತಿ ಸದ್ದು ಮಾಡಿದ್ದಾರೆ. ಪ್ರಕಾಶ್ ರಾಜ್, ಕಿಶೋರ್, ಸುನೀಲ್ ಶೆಟ್ಟಿ, ಪ್ರಭುದೇವ ಹೀಗೆ ಮುಂತಾದ ಕರ್ನಾಟಕ ಮೂಲದ ಕಲಾವಿದರು ಪರಭಾಷೆಗಳಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ.

  English summary
  List of Karnataka born actor, actress and directors who are ruling other industries. Take a look
  Tuesday, November 1, 2022, 14:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X