For Quick Alerts
  ALLOW NOTIFICATIONS  
  For Daily Alerts

  ತೆರೆ ಮೇಲೆ ಪೊಲೀಸ್ ಖದರ್ ತೋರಿಸಿದ ಕನ್ನಡ ನಟಿಯರು

  By Naveen
  |
  ಲೇಡಿ ಪೊಲೀಸ್ ಆಗಿ ತೆರೆ ಮೇಲೆ ಮಿಂಚಿದ ಕನ್ನಡದ ನಟಿಯರು | FIlmibeat Kannada

  ರಾಜ್ಯದ ನೂತನ ಡಿಜಿ ಮತ್ತು ಐಜಿಪಿಯಾಗಿ ಐಪಿಎಸ್ ಅಧಿಕಾರಿ ನೀಲಮಣಿ ರಾಜು ಅವರನ್ನು ನೇಮಕ ಮಾಡಲಾಗಿದೆ. ಈ ಮೂಲಕ ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿ ಎಂಬ ಹೆಗ್ಗಳಿಕೆಯನ್ನು ನೀಲಮಣಿ ರಾಜು ಅವರು ಪಡೆದಿದ್ದಾರೆ.

  ಇದೇ ರೀತಿ ಕನ್ನಡದ ಅನೇಕ ಸಿನಿಮಾಗಳಲ್ಲಿಯೂ ಮಹಿಳಾ ಪೋಲೀಸ್ ಖದರ್ ಅನ್ನು ತೋರಿಸಲಾಗಿದೆ. ಅಂದಿನ ಚಿತ್ರದಿಂದ ಹಿಡಿದು ಇಂದಿನ ಸಿನಿಮಾಗಳವರೆಗೆ ಅನೇಕ ನಾಯಕಿಯರು ಖಾಕಿ ತೊಟ್ಟು ತಮ್ಮ ಪವರ್ ಪ್ರದರ್ಶಿಸಿದ್ದಾರೆ.

  ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೀಲಮಣಿ ರಾಜು ಆಯ್ಕೆ

  ಅಂದಹಾಗೆ, ಕನ್ನಡದಲ್ಲಿ ಬಂದ ಮಹಿಳಾ ಪೋಲೀಸ್ ಪ್ರಧಾನ ಸಿನಿಮಾಗಳು ಮುಂದಿದೆ ಓದಿ...

  ಲೇಡಿ ಪೊಲೀಸ್

  ಲೇಡಿ ಪೊಲೀಸ್

  ಪೋಲೀಸ್ ಪಾತ್ರವನ್ನು ಮಾಡುವುದರಲ್ಲಿ ನಟಿ ಮಾಲಾಶ್ರೀ ಎತ್ತಿದ ಕೈ. ತಮ್ಮ ಅದೆಷ್ಟೋ ಚಿತ್ರದಲ್ಲಿ ಮಾಲಾಶ್ರೀ ಖಾಕಿ ಧರಿಸಿ ಮಿಂಚಿದ್ದಾರೆ. ಅದರಲ್ಲಿ 'ಲೇಡಿ ಪೊಲೀಸ್' ಚಿತ್ರ ಕೂಡ ಒಂದಾಗಿದೆ.

  ಝಾನ್ಸಿ ಐಪಿಎಸ್

  ಝಾನ್ಸಿ ಐಪಿಎಸ್

  ಹೆಚ್ಚಾಗಿ ಹೋಮ್ಲಿ ಲುಕ್ ನಲ್ಲಿ ಕಾಣಿಸಿಕೊಳ್ಳುವ ಪ್ರೇಮ 'ಝಾನ್ಸಿ ಐಪಿಎಸ್' ಎಂಬ ಚಿತ್ರದಲ್ಲಿ ಪೊಲೀಸ್ ಪಾತ್ರವನ್ನು ಮಾಡಿದ್ದರು.

  ಲೇಡಿ ಕಮೀಷನರ್

  ಲೇಡಿ ಕಮೀಷನರ್

  'ಲೇಡಿ ಕಮೀಷನರ್' 1997ರಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರದಲ್ಲಿ ನಟಿ ಮಾಲಾಶ್ರೀ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು.

  ಚಾಮುಂಡಿ

  ಚಾಮುಂಡಿ

  'ಚಾಮುಂಡಿ' ಸಿನಿಮಾ ಅಕ್ಕ ತಂಗಿಯ ನಡುವೆ ಇರುವ ಕಥೆ ಆಗಿತ್ತು. ಇಲ್ಲಿ ತಂಗಿ ಮಾಲಾಶ್ರೀ ಪೊಲೀಸ್ ಆಗಿದ್ದರೆ, ಅಕ್ಕ ಖುಷ್ಬು ಲಾಯರ್ ಆಗಿದ್ದರು.

  ಭೈರವಿ

  ಭೈರವಿ

  'ಭೈರವಿ' ಚಿತ್ರದಲ್ಲಿ ಖಡಕ್ ಪೊಲೀಸ್ ಆಗಿ ಯುವ ನಟಿ ಆಯಿಷಾ ಕಾಣಿಸಿಕೊಂಡಿದ್ದರು. ರಾಜಶೇಖರ್ ಚಿತ್ರವನ್ನು ನಿರ್ದೇಶನ ಮಾಡಿದ್ದರು.

  ಕಿರಣ್ ಬೇಡಿ

  ಕಿರಣ್ ಬೇಡಿ

  ತೆರೆ ಮೇಲೆ 'ಕಿರಣ್ ಬೇಡಿ' ಆಗಿ ಮಾಲಾಶ್ರೀ ಪರಾಕ್ರಮ ತೋರಿಸಿದರು. ಪೋಲೀಸ್ ಆಗಿ ಪಾಪಿಗಳ ವಿರುದ್ಧ ಸಮರ ಸಾರಿದ್ದರು.

  ರಾಗಿಣಿ ಐಪಿಎಸ್

  ರಾಗಿಣಿ ಐಪಿಎಸ್

  ಗ್ಲಾಮರ್ ಕ್ವೀನ್, ತುಪ್ಪದ ಬೆಡಗಿ ಆಗಿದ್ದ ರಾಗಿಣಿ ಮೊದಲ ಬಾರಿಗೆ 'ರಾಗಿಣಿ ಐಪಿಎಸ್' ಸಿನಿಮಾದಲ್ಲಿ ಪೊಲೀಸ್ ಆಗಿ ಕಾಣಿಸಿಕೊಂಡಿದ್ದರು.

  ಸೆಕೆಂಡ್ ಹಾಫ್

  ಸೆಕೆಂಡ್ ಹಾಫ್

  ಪ್ರಿಯಾಂಕ ಉಪೇಂದ್ರ ತಮ್ಮ ಮುಂದಿನ ಸಿನಿಮಾ 'ಸೆಕೆಂಡ್ ಹಾಫ್'ನಲ್ಲಿ ಪೊಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ. ಈಗಾಗಲೇ ಚಿತ್ರದ ಪ್ರಿಯಾಂಕ ಉಪೇಂದ್ರ ಲುಕ್ ದೊಡ್ಡ ಸದ್ದು ಮಾಡಿದೆ.

  English summary
  List of lady police oriented kannada movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X